ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಕೊರೋನಾ 4ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಸರ್ಕಾರ ಹಲವು ಕ್ರಮಗಳನ್ನು ಘೋಷಿಸಿದೆ.
ಈ ಕುರಿತಂತೆ ಮಾತನಾಡಿರುವ ಸಚಿವ ಅಶೋಕ್ ಹಾಗೂ ಆರೋಗ್ಯ ಸಚಿವ ಸುಧಾಕರ್, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕೊರೋನಾ ಸೋಂಕು ಮತ್ತೆ ಹರಡದಂತೆ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇದನ್ನು ಪಾಲಿಸುವ ಮೂಲಕ ಸಹಕಾರ ನೀಡಬೇಕು ಎಂದು ಕೋರಿದರು.

- ಸೋಂಕಿನ ಲಕ್ಷಣ ಕಂಡು ಬಂದರೆ ಕೊರೋನಾ ಪರೀಕ್ಷೆ ಮಾಡಿಸಬೇಕು.
- ಮೂರು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು.
- ಶಾಲಾ-ಕಾಲೇಜುಗಳಲಿ ಮಾಸ್ಕ್ ಹಾಗೂ ಸ್ಯಾನಿಟೈಸ್ ಕಡ್ಡಾಯ
- ಚಿತ್ರಮಂದಿರ ಹಾಗೂ ಸಭಾಂಗಣಗಳಲ್ಲು ಮಾಸ್ಕ್ ಕಡ್ಡಾಯ
- ಯಾವುದೇ ರೀತಿಯ ರ್‍ಯಾಲಿ, ಬಹಿರಂಗ ಸಭೆಗೆ ನಿರ್ಬಂಧವಿಲ್ಲ
- ಹೊಸ ವರ್ಷಾಚರಣೆ ಪಾರ್ಟಿ ರಾತ್ರಿ ೧ಗಂಟೆಯೊಳಗೆ ಮುಕ್ತಾಯವಾಗಬೇಕು.
- ಎಲ್ಲಾ ರೆಸ್ಟೋರೆಂಟ್, ಬಾರ್‌ಗಳಿಗೆ ೧ ಗಂಟೆಯವರೆಗೆ ಡೆಡ್‌ಲೈನ್
- ಪಾರ್ಟಿಗಳಲ್ಲಿ ಹಾಗೂ ಮಕ್ಕಳು ಭಾಗವಹಿಸುವಂತಿಲ್ಲ.
- ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವವರಿಗೆ ಬೂಸ್ಟರ್ ಡೋಸ್ ಕಡ್ಡಾಯ









Discussion about this post