ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಸಾಗರ |
ವಿದೇಶದಿಂದ ಇತ್ತೀಚೆಗೆ ಶಿವಮೊಗ್ಗಕ್ಕೆ ಆಗಮಿಸಿದ ಸಾಗರ ತಾಲೂಕಿನ ವ್ಯಕ್ತಿಯೊಬ್ಬರಿಗೆ ಕೊರೋನಾ ಪಾಸಿಟಿವ್ Corona Positive ಬಂದಿದ್ದು, ಜಿಲ್ಲೆಯಲ್ಲಿ 4ನೆಯ ಅಲೆಯ ಭೀತಿಯನ್ನು ಎಬ್ಬಿಸಿದೆ.
ನಿನ್ನೆ ಕೊರೋನಾ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಓರ್ವ ವ್ಯಕ್ತಿಗೆ ಪಾಸಿಟಿವ್ ಬಂದ ಬಗ್ಗೆ ವರದಿಯಾಗಿತ್ತು. ಇದರಂತೆ ಜರ್ಮನಿಯಿಂದ ಹೊರಟ ಇಬ್ಬರು ವ್ಯಕ್ತಿಯೊಬ್ಬರು ಒಂದು ವಾರದ ಹಿಂದೆ ದುಬೈನಲ್ಲಿ ವಿಮಾನ ಬದಲಿಸಿ ಬೆಂಗಳೂರಿಗೆ ಆಗಮಿಸಿದ್ದರು. ಅಲ್ಲಿ ಇವರಿಗೆ ತಪಾಸಣೆ ನಡೆಸಲಾಗಿದ್ದು, ಈಗ ಪಾಸಿಟಿವ್ ಎಂಬ ವರದಿ ಬಂದಿದೆ.
ಇಬ್ಬರು ಸದ್ಯ ಹೋಮ್ ಐಸೋಲೆಷನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ವ್ಯಾಪಕವಾಗಿ ಮತ್ತೆ ಹರಡದಂತೆ ತಡೆಯಲು ವಿದೇಶದಿಂದ ಆಗಮಿಸುತ್ತಿರುವ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಿ ನಿಗಾ ವಹಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post