ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ವೈಯಕ್ತಿಕ ತೆರಿಗೆದಾರರಿಗೆ ಬಂಪರ್ ಗಿಫ್ಟ್ ನೀಡಿರುವ ಕೇಂದ್ರ ಸರ್ಕಾರ ಮಿತಿಯನ್ನು 5 ಲಕ್ಷದಿಂದ 7 ಲಕ್ಷ ರೂ.ಗೆ ಏರಿಕೆ ಮಾಡಿದೆ.
ತಮ್ಮ ಬಜೆಟ್ ಭಾಷಣದಲ್ಲಿ ಈ ಕುರಿತಂತೆ ಪ್ರಕಟಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Finance Minister Nirmala Seetharaman ಅವರು, ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. 7 ಲಕ್ಷ ರೂ.ವರೆಗೂ ಆದಾಯ ಗಳಿಸುವವರು ತೆರಿಗೆ ಪಾವತಿಸುವಂತಿಲ್ಲ ಎಂದು ತಿಳಿಸಿದೆ.
ಐಟಿ ರಿಟರ್ನ್ಸ್’ಗೆ ಹೊಸ ಫಾರ್ಮ್ ಜಾರಿ ಮಾಡಲಾಗಿದ್ದು, 16 ದಿನಗಳಲ್ಲಿ ಐಟಿ ರಿಟರ್ನ್ಸ್ ಪಡೆಯಬಹುದು.
ಸೇವಾ ಸುಂಕ 37 ರಿಂದ 27 ಪರ್ಸೆಂಟ್’ಗೆ ಇಳಿಕೆ ಮಾಡಲಾಗಿದ್ದು, ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಹಲವು ಸುಧಾರಣೆ ಮಾಡಲಾಗಿದೆ. ಒಂದು ದಿನಕ್ಕೆ 74 ಲಕ್ಷ ರಿಟರ್ನ್ಸ್ ಬಂದಿದೆ. ಸರಾಸರಿ ಪ್ರಕ್ರಿಯೆ ಅವಧಿ 16 ದಿನಕ್ಕೆ ಇಳಿದಿದೆ. ಶೇ.45 ರಷ್ಟು ರಿಟರ್ನ್ಸ್‌ಗಳನ್ನು 24 ಗಂಟೆಯ ಒಳಗೆ ನಿರ್ವಹಿಸಲಾಗಿದೆ.
ತೆರಿಗೆ ಲೆಕ್ಕಾಚಾರ ಹೀಗಿದೆ:
- 0 – 3 ಲಕ್ಷ ರೂವರೆಗೂ ತೆರಿಗೆ ಇಲ್ಲ
- 3 -6 ಲಕ್ಷ ರೂ.ವರೆಗೂ ಶೇ.5ರಷ್ಟು ತೆರಿಗೆ
- 6 -9 ಲಕ್ಷ ರೂ.ವರೆಗೂ ಶೇ.10ರಷ್ಟು ತೆರಿಗೆ
- 9 -12 ಲಕ್ಷ ರೂ.ವರೆಗೂ ಶೇ.15ರಷ್ಟು ತೆರಿಗೆ
- 12 – 15 ಲಕ್ಷ ರೂ.ವರೆಗೂ ಶೇ.20ರಷ್ಟು ತೆರಿಗೆ
- 15 ಲಕ್ಷ ರೂ. ನಂತರ ಶೇ.30ರಷ್ಟು ತೆರಿಗೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















