ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ಗ್ರಾಮೀಣ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಪರಿಚಯಿಸುತ್ತಿರುವ ಕ್ಷಣದಲ್ಲಿ ಹಣ ಎಂಬ ಅತ್ಯಂತ ನವೀನ ಮತ್ತು ಗ್ರಾಹಕ ಸ್ನೇಹಿ ಉತ್ಪನ್ನವನ್ನು ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ರಮೇಶ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಹಕರಿಗೆ ತಂತ್ರಜ್ಞಾನ ಸಕ್ರಿಯಗೊಳಿಸಿದ ಸೇವೆಗಳನ್ನು ಉತ್ತೇಜಿಸುವಲ್ಲಿ ಬ್ಯಾಂಕ್’ನ ಪ್ರಯತ್ನಗಳನ್ನು ಶ್ಲಾಘಿಸಿದರು.
ಜನರಲ್ ಮ್ಯಾನೇಜರ್ ಸೋಮಶೇಖರ್ ಮಾತನಾಡಿ, ತಕ್ಷಣದಲ್ಲಿ ಹಣ ಯೋಜನೆಯ ಪ್ರಮುಖ ಲಕ್ಷಣಗಳನ್ನು ವಿವರಿಸಿದರು. ಅಧ್ಯಕ್ಷರಾದ ಶ್ರೀನಾಥ ಜೋಶಿ ಮಾತನಾಡಿ, ಈ ಹೊಸ ಪ್ರಯತ್ನವು ಖಂಡಿತ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆಗಳ ವಿತರಣೆಯಲ್ಲಿ ಅಸಾಧಾರಣ ಬದಲಾವಣೆಯನ್ನು ಹೇಗೆಲ್ಲಾ ತರಲಿದೆ ಎಂಬುದನ್ನು ವಿವರಿಸಿದರು.

Also read: ಕಂಠಪೂರ್ತಿ ಕುಡಿದು ಸರ್ಕಾರಿ ಬಸ್’ನಲ್ಲಿ ಯುವತಿಯ ಸೀಟ್ ಮೇಲೆ ಮೂತ್ರವಿಸರ್ಜನೆ ಮಾಡಿದ ವ್ಯಕ್ತಿ
ಗ್ರಾಹಕರು ಕೇವಲ ತಮ್ಮ ಆಧಾರ್ ಸಂಖ್ಯೆಯನ್ನು ಬಳಸುವ ಮೂಲಕ ಖಾತೆಯಿಂದ ಹಣವನ್ನು ಹಿಂಪಡೆಯಬಹುದು ಮತ್ತು ಜಮಾ ಮಾಡಬಹುದು, ಮಿನಿ ಸ್ಟೇಟ್ಮೆಂಟ್’ಗಳನ್ನು ರಚಿಸಬಹುದು, ಬ್ಯಾಲೆನ್ಸ್ ವಿಚಾರಣೆ ಮಾಡಬಹುದು. ಅಲ್ಲದೇ ಹಣದ ವರ್ಗಾವಣೆ ಕೂಡ ಸಾಧ್ಯವಿದ್ದು, ಆರ್ಧಾ ಕಾರ್ಡಿನ ಅತ್ಯುತ್ತಮ ಬಳಕೆ ಇದಾಗಲಿದೆ. ಈ ಸೇವೆಯಿಂದ ಅವರ ಪಾಸ್’ಬುಕ್’ಗಳು, ಚೆಕ್ ಪುಸ್ತಕಗಳು, ಹಿಂತೆಗೆದುಕೊಳ್ಳುವ ಚೀಟಿಗಳನ್ನು ತುಂಬುವ ತಾಪತ್ರಯ ತಪ್ಪಲಿದ್ದು ಅನಕ್ಷರಸ್ತ ಗ್ರಾಹಕನೂ ತನ್ನ ಹೆಬ್ಬೆರಳಿನ ಗುರುತನ್ನು ದೃಢೀಕರಿಸುವ ಮೂಲಕ ಎಲ್ಲಾ ಸೇವೆಗಳನ್ನು ಆನಂದಿಸಲು ಸಾಧ್ಯ.

ಬಹುಮುಖ್ಯವಾಗಿ ಕಾಯುವ ಸಮಯವನ್ನು ಕಡಿಮೆ ಮಾಡುವ ಮೂಲಕ ಹೆಚ್ಚಿನ ಸೇವೆಯಲ್ಲಿ ತೊಡಗುವುದು ಅಂತಿಮ ಗುರಿಯಾಗಿದೆ. ಈ ಸಂಪೂರ್ಣ ಪರಿಕಲ್ಪನೆಯು ಆಧಾರ್ ಕಾರ್ಡಿನ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ನಿಗದಿತ ವಹಿವಾಟುಗಳ ಹೊರತು ಪಡಿಸಿ ಗ್ರಾಹಕರಿಗೆ ತಕ್ಷಣದಲ್ಲಿ ಹಣ ಸೇವೆಯು ಬಹುಮಟ್ಟಿಗೆ ಕಾಗದದ ಕೆಲಸವನ್ನು ತೆಗೆದುಹಾಕುತ್ತದೆ.












Discussion about this post