Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾವಸಾರ ವಿಷನ್ ಇಂಡಿಯಾ ಶಿವಮೊಗ್ಗ ಘಟಕದಿಂದ ರಾಜ್ಯದ ಖ್ಯಾತ ವೆರಿಕೋಸ್ ವೇನ್ಸ್ ತಜ್ಞ ಡಾ.ಎಂ.ವಿ. ಉರಾಳ ಸಹಯೋಗದಲ್ಲಿ ಮಾರ್ಚ್ 5 ಭಾನುವಾರದಂದು ಉಚಿತ ವೆರಿಕೋಸ್ ವೇನ್ಸ್ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಿದೆ ಎಂದು ಅಧ್ಯಕ್ಷ ಪ್ರಭಾಕರ್ ವಂಡ್ಕರ್ ತಿಳಿಸಿದರು.
ಮಥುರಾ ಪ್ಯಾರಡೈಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾವಸಾರ ವಿಷನ್ ಇಂಡಿಯಾ ದೇಶಾದ್ಯಂತ 100ಕ್ಕೂ ಹೆಚ್ಚು ಶಾಖೆ ಹೊಂದಿದ್ದು, ಹಲವು ವರ್ಷಗಳಿಂದ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅದರಂತೆ ಈ ಬಾರಿ ಸಂಸ್ಥೆಯಿಂದ ವೆರಿಕೋಸ್ ವೇನ್ ಚಿಕಿತ್ಸಾ ಶಿಬಿರವನ್ನು ನಗರದ 100 ಅಡಿ ರಸ್ತೆಯಲ್ಲಿನ ರೋಟರಿ ರಕ್ತ ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಾ.ಎಂ.ವಿ. ಉರಾಳ್ ಶೃಂಗೇರಿಯ ಹೆಸರಾಂತ ಆರ್ಯುವೇದಿಕ್ ವೈದ್ಯರಾಗಿದ್ದಾರೆ. ಹಲವು ವರ್ಷಗಳ ಸಂಶೋಧನೆ ಮೂಲಕ ವೆರಿಕೋಸ್ ವೇನ್ಸ್ ಮತ್ತು ಇದರ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಸ್ವತಃ ಡಾ. ಉರಾಳ್ ಅವರ ಆವಿಷ್ಕರಿಸಿರುವ ಚಿಕಿತ್ಸಾ ಕ್ರಮದ ಮೂಲಕ ಚಿಕಿತ್ಸೆ ನೀಡುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುತ್ತಿದ್ದಾರೆ. ಕೊನೆಯ ಹಂತದ ವೀನ್ ಅಲ್ಲ ಅನ್ನು ಗುಣಪಡಿಸುವ ಮೂಲಕ ಸಾವಿರಾರು ರೋಗಿಗಳನ್ನು ಸಮಸ್ಯೆಯಿಂದ ಪಾರು ಮಾಡಿದ್ದಾರೆ ಎಂದರು.
ಈ ವೆರಿಕೋಸ್ ವೇನ್‌ಗೆ ಇತ್ತೀಚಿಗೆ ವಯಸ್ಸಿನ ಭೇಧವಿಲ್ಲದೆ ಮಕ್ಕಳು, ಯುವಕರು, ವೃದ್ಧರು ಸಹ ತುತ್ತಾಗುತ್ತಿದ್ದಾರೆ. ಹೆಚ್ಚಾಗಿ ನಿಂತು ಅಥವಾ ಕುಳಿತು ಕೆಲಸ ಮಾಡುವವರಿಗೆ ಈ ಸಮಸ್ಯೆ ಹೆಚ್ಚಾಗಿ ಬಾಧಿಸುತ್ತದೆ. ಇದಕ್ಕೆ ಶಾಶ್ವತ ಪರಿಹಾರವಿದೆ ಎಂಬುದನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಈ ಚಿಕಿತ್ಸಾ ಶಿಬಿರವನ್ನು ಭಾವಸಾರ ವಿಷನ್ ಇಂಡಿಯಾದಿಂದ ಆಯೋಜಿಸಿದ್ದೇವೆ ಎಂದರು.
ಚಿಕಿತ್ಸಾ ಶಿಬಿರ ಮಾರ್ಚ್ 5 ಭಾನುವಾರ ಬೆಳಗ್ಗೆ 9 ರಿಂದ ಸಂಜೆ ನಾಲ್ಕು ಗಂಟೆಯ ವರೆಗೆ ನಡೆಯಲಿದ್ದು, ನಗರದ ನಾಗರಿಕರು ಈ ಶಿಬಿರದ ಸೌಲಭ್ಯ ಪಡೆದುಕೊಳ್ಳುವಂತೆ ಕರೆ ನೀಡಿದರು.
ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ 9449329122, 9481466666, 9964587821, 9164464480 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿವಿಐ ರಾಷ್ಟ್ರೀಯ ಕಾರ್ಯದರ್ಶಿ ಸಚಿನ್ ಸಾಕ್ರೆ, ಬಿವಿಐ ಕಾರ್ಯದರ್ಶಿ ಸಚಿನ್ ಬೇದ್ರೆ, ಖಜಾಂಚಿ ಪ್ರತಾಪ್ ಮಹೇಂದ್ರಕರ್, ಗೋ.ವ. ಮೋಹನಕೃಷ್ಣ, ವಿನಯ್ ಕುಂಟೆ ಸೇರಿದಂತೆ ಮೊದಲಾದವರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Discussion about this post