Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ನಲ್ಲಿ ಇಲ್ಲದವರ ವಿಚಾರ ನಾನು ಮಾತನಾಡೊಲ್ಲ. ಕಾಂಗ್ರೆಸ್ ನಲ್ಲಿ ಇಲ್ಲದವರ ಬಗ್ಗೆ ನೀವು ಕೂಡ ಆದ್ಯತೆ ನೀಡಬೇಡಿ. ಸಂಸದೆ ಸುಮಲತಾ MP Sumalatha ಬಿಜೆಪಿಗೆ ಹೋಗಿರುವ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಬೆಂಬಲ ಘೋಷಿಸಿರುವ ವಿಚಾರ ಕುರಿತು ಶಿವಮೊಗ್ಗದಲ್ಲಿ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಮುಳುಗುತ್ತಿರುವ ಹಡಗು. ಶಾಸಕ ನಾಗೇಶ್ ಬಿಜೆಪಿ ಬಿಟ್ಟು ಹೋಗಿದ್ದಾರೆ. ಎಂಎಲ್ ಸಿ ಪುಟ್ಟಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಬಂದಿದ್ದಾರೆ. ನಾಲ್ಕು ವರ್ಷದ ಅಧಿಕಾರ ಬಿಟ್ಟು ನಮ್ಮ ಪಕ್ಷ ಸೇರಿದ್ದಾರೆ. ಯಾರು ನಮ್ಮ ಪಾರ್ಟಿಯಲ್ಲಿ ಇಲ್ಲ ಅವರ ಬಗ್ಗೆ ಮಾತನಾಡುವುದು ಉಚಿತವಲ್ಲ ಎಂದಿದ್ದಾರೆ.
ಸಚಿವ ವಿ. ಸೋಮಣ್ಣ ಬಿಜೆಪಿ ಬಿಡುವ ವಿಚಾರದ ಬಗ್ಗೆ ನಾನು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಕಾಂಗ್ರೆಸ್ ನಲ್ಲಿ ಇಲ್ಲದವರ ಬಗ್ಗೆ ನಾನ್ಯಾಕೆ ಉತ್ತರಿಸಲಿ. ಅವರ ವೈಯಕ್ತಿಕ ನಿರ್ಧಾರ ನಾನ್ಯಾಕೆ ಟಿಪ್ಪಣಿ ಮಾಡಲಿ. ಬಿಜೆಪಿ ಮುಳುಗುತ್ತಿರುವ ಒಂದು ಹಡಗು. ಅದು ಪ್ರತಿದಿನ ಮುಳುಗುತ್ತಿದೆ. ನಿನ್ನೆ ಎಂಎಲ್ಸಿ ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆಯಾದರು. ಅವರಿಗೆ ನಾಲ್ಕು ವರ್ಷ ಇನ್ನೂ ಅಧಿಕಾರವಿತ್ತು. ಭ್ರಷ್ಟಾಚಾರದ ಪರಿಣಾಮ ಬಿಜೆಪಿ ಹಡಗು ಮುಳುಗುತ್ತಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿ ಬೆಲೆ ಏರಿಕೆ ಬಗ್ಗೆ ಮಾತನಾಡುವುದಿಲ್ಲ. 40 ಪರ್ಸೆಂಟ್ ಬಗ್ಗೆಯೂ ಮಾತನಾಡುವುದಿಲ್ಲ. ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಹೆಸರು ತೆಗೆದುಕೊಳ್ಳುವುದಿಲ್ಲ. ಅದಾನಿಯ ಹೆಸರು ತೆಗೆದುಕೊಳ್ಳುವುದಿಲ್ಲ. ಗುತ್ತಿಗೆದಾರರ ಸಂಘದ ಶೇ. 40 ಕಮಿಷನ್ ಆರೋಪದ ಬಗ್ಗೆಯೂ ಮಾತನಾಡಲ್ಲ. ಶಾಲಾ ಅಸೋಸಿಯೇಷನ್ ಶೇ 40 ಕಮಿಷನ್ ಬಗ್ಗೆ ಮಾತನಾಡಲ್ಲ. ಬಿಜೆಪಿ ಬಳಿ ಯಾವ ಮುಖವೂ ಇಲ್ಲ ನಡೆಯೂ ಇಲ್ಲ ತಂತ್ರವೂ ಇಲ್ಲ. ಬಿಜೆಪಿ ಸಂಪೂರ್ಣವಾಗಿ ಮುಳುಗಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕವನ್ನು ಎರಡು ಕೈಯಿಂದ ಲೂಟಿ ಮಾಡುತ್ತಿದ್ದಾರೆ. ಮಠದ ಅನುದಾನ ಲೂಟಿ ಮಾಡುತ್ತಿದ್ದಾರೆ. ಶಾಲೆಯ ಅನುದಾನ ಲೂಟಿ ಮಾಡುತ್ತಿದ್ದಾರೆ. ವರ್ಗಾವಣೆ ನೇಮಕಾತಿಯ ಹಣ ಕಬಳಿಸುತ್ತಿದ್ದಾರೆ. ಗುತ್ತಿಗೆದಾರರನ್ನು ಲೂಟಿ ಮಾಡುತ್ತಿದ್ದಾರೆ. ಇದೀಗ ಅಲ್ಪಾವಧಿಯ ಟೆಂಡರ್ ಹಣ ಲೂಟಿ ಮಾಡುತ್ತಿದ್ದಾರೆ. ಇವತ್ತು ಇನ್ನೆರಡು ಗೋಲ್ಮಾಲ್ ಬೆಳಕಿಗೆ ಬಂದಿದೆ. ಬೆಂಗಳೂರಿನ ಆಸ್ಪತ್ರೆಯ ಟೆಂಡರ್ ಸಂಬಂಧಿಸಿದಂತೆ ಅದರ ಜಾಗವೇ ಇಲ್ಲ. ಹಾರುವ ಆಸ್ಪತ್ರೆ ನಿರ್ಮಿಸಿ ಪ್ರಧಾನಿ ಮೋದಿ ಮಾ. 12 ರಂದು ಉದ್ಘಾಟಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು. ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು. ಆದರೆ ಕ್ಲೀನ್ ಚಿಟ್ ಸಿಕ್ತು. ನೇಮಕಾತಿ ಹಗರಣವು ಬೆಳಕಿಗೆ ಬಂತು. ಶಾಸಕ ವಿರೂಪಾಕ್ಷ ಹಗರಣ ಮುಚ್ಚಲು ಪ್ರಯತ್ನಿಸಿದರು. ಲೋಕಾಯುಕ್ತ ತನಿಖೆ, ಕಾಂಗ್ರೆಸ್ ಹೋರಾಟ, ಮಾಧ್ಯಮದವರಿಂದ ಬೆಳಕಿಗೆ ಬಂತು. ಬಿಜೆಪಿಯ ಎಲ್ಲಾ ಹಗರಣಗಳ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತುತ್ತಿದೆ. ಮುಳುಗುತ್ತಿರುವ ಹಡಗನ್ನು ಸಂಪೂರ್ಣ ಮುಳುಗಿಸಲು ಜನ ನಿರ್ಧರಿಸಿದ್ದಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಕುರಿತು ಪ್ರತಿಕ್ರಿಸಿದ ಅವರು, ಎಲ್ಲಾ 224 ಕ್ಷೇತ್ರಗಳ ಆಕಾಂಕ್ಷಿಗಳೊಂದಿಗೆ ಮಾತನಾಡಲಾಗಿದೆ.ಒಂದು ಸುಂದರ ವಾತಾವರಣದಲ್ಲಿ ಮಾತುಕತೆ ನಡೆಯಿತು. ಎಸಿಸಿ ಅಧ್ಯಕ್ಷ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಚುನಾವಣೆ ಸಮಿತಿಯೊಂದಿಗೆ ಚರ್ಚೆ ನಡೆಯಲಿದೆ. ಅತಿ ಶೀಘ್ರ ಅನೇಕ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post