ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀವಿಜಯ ಕಲಾನಿಕೇತನದಿಂದ ಮಾರ್ಚ್ 12ರ ಭಾನುವಾರ ಸಂಜೆ 6 ಗಂಟೆಗೆ ರಾಜೇಂದ್ರನಗರದ ‘ಪವಿತ್ರಾಗಂಣದಲ್ಲಿ ಮಹಿಳಾ ಹರಿದಾಸರನ್ನು ಸ್ಮರಿಸುವ ಗೀತ – ನೃತ್ಯ ರೂಪಕ ‘ಹರಿವನಿತೆ’ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಡಾ. ಕೆ.ಎಸ್. ಪವಿತ್ರ ಅರು ಉಪನ್ಯಾಸ ಮತ್ತು ನೃತ್ಯ ಪಾತ್ಯಕ್ಷಿಕೆ ಪ್ರಸ್ತುತ ಪಡಿಸಲಿದ್ದಾರೆ. ನಂತರ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ವಿದುಷಿ ಕುಮಾರಿ ಸೌಜನ್ಯ ಬಿ.ಆರ್ ಮತ್ತು ಸಂಗಡಿಗರಿಂದ ಮಹಿಳಾ ಹರಿದಾಸರ ರಚನೆಗಳನ್ನಾಧರಿಸಿದ ಸಂಗೀತ ಕಾರ್ಯಕ್ರಮ ಮೂಡಿಬರಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಪ್ರೊ. ಸಿ.ವಿ. ರಾಘವೇಂದ್ರರಾವ್ ಭಾಗವಹಿಸಲಿದ್ದಾರೆ. ಶ್ರೀವಿಜಯದ ಅಧ್ಯಕ್ಷರಾದ ಡಾ. ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ, ನವದೆಹಲಿ ಅವರ ಸಹಕಾರದಲ್ಲಿ ನಡೆಯಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀವಿಜಯದ ನಿರ್ದೇಶಕಿ ಡಾ. ಕೆ.ಎಸ್.ಪವಿತ್ರ ಕೋರಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















