ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಐವರು ಹಿರಿಯ ಪೊಲೀಸ್ ಆಧಿಕಾರಿಗಳು ಪ್ರಸಕ್ತ ಸಾಲಿನ ಮುಖ್ಯಮಂತ್ರಿಗಳ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಕುರಿತಂತೆ ಮಾರ್ಚ್ 28ರಂದು ರಾಜ್ಯ ಪೊಲೀಸ್ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ರಾಜ್ಯದಲ್ಲಿ ಒಟ್ಟು 134 ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕವನ್ನು ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ಐವರಿಗೆ ಪದಕ
ಇನ್ನು, ಜಿಲ್ಲೆಯ 8ನೆಯ ಕೆಎಸ್’ಆರ್’ಪಿ ಪಡೆಯ ಸಹಾಯಕ ಕಮಾಂಡೆಂಟ್ ರಾಚಪ್ಪ ಬಿ. ಕಾಜಗರ್, ಡಿಎಸ್’ಬಿ ಮಹಿಳಾ ಪಿಎಸ್’ಐ ಎಚ್.ಕೆ. ಶಕುಂತಲಾ, ಡಿಎಆರ್ ಎಎಚ್’ಡಿ-98 ಜೈ ಜಗದೀಶ್ ಎಸ್., ಆಗುಂಬೆ ಪೊಲೀಸ್ ಠಾಣೆ ಪಿಎಸ್’ಐ ಕೆ. ಶಿವಕುಮಾರ್, ದೊಡ್ಡಪೇಟೆ ಪೊಲೀಸ್ ಠಾಣೆ ಪಿಐ ಕೆ. ಅಂಜನ್ ಕುಮಾರ್ ಅವರುಗಳಿಗೆ ಮುಖ್ಯಮಂತ್ರಿಗಳ ಪದಕ ಸಂದಿದೆ. 

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















