ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಕರಾಟೆ ಡೋ ಕ್ರೀಡಾ ಸಂಸ್ಥೆ ವತಿಯಿಂದ ಸಾರ್ವಜನಿಕರಿಗಾಗಿ ಕರಾಟೆ ತರಬೇತಿ ಶಿಬಿರವನ್ನು ಏ.12ರಿಂದ 45 ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಶಿಬಿರದ ಸಂಚಾಲಕ ಹಾಗೂ ತರಬೇತುದಾರ ಚಂದ್ರಕಾಂತ್ ಜಿ. ಭಟ್ ತಿಳಿಸಿದ್ದಾರೆ.
ಈ ಬೇಸಿಗೆ ಶಿಬಿರದ ಅಂಗವಾಗಿ 4 ವರ್ಷ ಮೇಲ್ಪಟ್ಟ, ಬಾಲಕ, ಬಾಲಕಿಯರು ಮತ್ತು ಪುರುಷ ಹಾಗೂ ಮಹಿಳೆಯರಿಗಾಗಿ ಆಯೋಜಿಸಲಾಗಿದೆ. ಶಿಬಿರದಲ್ಲಿ ಆತ್ಮರಕ್ಷಣಾ ಕಲೆ ಹಾಗೂ ಕ್ರೀಡೆಯಾದ ಕರಾಟೆ, ಪೆಂಕಾಕ್ ಸಿಲಾಟ್, ಕಿಕ್ ಬಾಕ್ಸಿಂಗ್ ತರಬೇತಿ ನೀಡಲಾಗುತ್ತದೆ.
ಶಿಬಿರವು ಆಲ್ಕೊಳ ಸರ್ಕಲ್ ಬಳಿಯ ವಿಶಾಲ್ ಮಾರ್ಟ್ ಎದುರಿನ ಶಿವಮೊಗ್ಗ ಸೆಂಟ್ರಲ್ ರೋಟರಿ ಕ್ಲಬ್‌ನಲ್ಲಿ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 7ರಿಂದ 8ರವರೆಗೆ ಹಾಗೂ 5ರಿಂದ 6ರವರೆಗೆ ತರಬೇತಿಯನ್ನು 45 ದಿನಗಳ ಕಾಲ ನೀಡಲಾಗುತ್ತೆ.
Also read: ರಾಜ್ಯ ಮಟ್ಟದ ವಿಟಿಯು ಫೆಸ್ಟ್: ಜೆಎನ್‌ಎನ್‌ಸಿಇಗೆ ರನ್ನರ್ ಅಪ್ ಪ್ರಶಸ್ತಿ
ಹೆಚ್ಚಿನ ವಿವರಗಳಿಗೆ ಚಂದ್ರಕಾಂತ್ ಜಿ. ಭಟ್‌ರವರನ್ನು ದೂ.ಸಂಖ್ಯೆ 9480274607ರಲ್ಲಿ ಸಂಪರ್ಕಿಸಲು ಕೋರಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















