No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Sunday, October 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಬಹುರೂಪಿ ಯೋಜನೆಗಳ ಮೂಲಕ ನಶಾಮುಕ್ತ ಭಾರತದ ಕನಸನ್ನು ಸಾಕರಗೊಳಿಸುತ್ತಿರುವ ಗೃಹಮಂತ್ರಿ ಅಮಿತ್ ಶಾ

kalpa News by kalpa News
April 5, 2023
in ಬೆಂಗಳೂರು ನಗರ
0
ಬಹುರೂಪಿ ಯೋಜನೆಗಳ ಮೂಲಕ ನಶಾಮುಕ್ತ ಭಾರತದ ಕನಸನ್ನು ಸಾಕರಗೊಳಿಸುತ್ತಿರುವ ಗೃಹಮಂತ್ರಿ ಅಮಿತ್ ಶಾ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |

ಭಾರತವನ್ನು ಮಾದಕ ನಶೆ ಮುಕ್ತಿಯೆಡೆಗೆ ಕರೆದೊಯ್ಯಲು ಗೃಹಮಂತ್ರಿ ಅಮಿತ್ ಶಾರವರು Home Minister Amith Shah ತೆಗೆದುಕೊಂಡ ಬಹುರೂಪಿ ಯೋಜನೆಗಳ ಫಲ ಕೊಡುತ್ತಿವೆ. ಸ್ವಾತಂತ್ರ್ಯೋತ್ಸವದ ಈ ಅಮೃತ ಘಳಿಗೆಯಲ್ಲಿ ಈ ಯೋಜನೆಗಳು ನರೇಂದ್ರ ಮೋದಿಯವರ ‘ನಶಾಮುಕ್ತ ಭಾರತ’ದ ಕನಸನ್ನು ಸಾಕಾರಗೊಳಿಸಲಿವೆ.

ಅಧಿಕೃತ ಮಾಹಿತಿಗಳ ಆಧಾರದ ಮೇಲೆ 2014-2022 ರಿಂದ ಇಲಾಖೆ ವಶಪಡಿಸಿಕೊಂಡ ಮಾದಕ ದ್ರವ್ಯಗಳ ಒಟ್ಟು ಮೌಲ್ಯ 22,000 ಕೋಟಿ ರೂಪಾಯಿಗಳು. 2006-2013 ಕಾಲಘಟ್ಟದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕಾಲಾವಧಿಗಿಂತ 30 ಪಟ್ಟು ಹೆಚ್ಚು ಮಾದಕದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೇಸ್‌ಗಳಲ್ಲಿ ಬಂಧಿಸಲಾದ ಅಪರಾಧಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾದರೆ, ವಶಪಡಿಸಿಕೊಂಡ ಮಾದಕವಸ್ತುಗಳು (ಸುಮಾರು 3.73 ಲಕ್ಷ ಕೆ.ಜಿ) ದುಪ್ಪಟ್ಟಾಗಿವೆ. 2014-2022ರ ಅವಧಿಯಲ್ಲಿ 3,544 ಕೇಸ್‌ಗಳು ದಾಖಾಲಾಗಿದ್ದು, ಇದು ಕೂಡ 2006-2013 ರ ಯುಪಿಎ ಅವಧಿಗಿಂತ ದುಪ್ಪಟ್ಟು.
ಮಾದಕದ್ರವ್ಯ ವ್ಯಸನ ದೇಶದ ಪ್ರಮುಖ ಸಮಸ್ಯೆಗಳಲ್ಲೊಂದು. ಈ ವ್ಯಸನದಿಂದ ನಮ್ಮ ಯುವ ಜನಾಂಗ ಕೆಲಸ-ಕಾರ್ಯಗಳನ್ನು ತೊರೆದು ಸಮಾಜಕ್ಕೆ ಹೊರೆಯಾಗುತ್ತಿದ್ದಾರೆ. ಹಾಗೇ ಈ ಮಾದಕವಸ್ತುಗಳ ಸಾಗಾಣಿಕೆಯಿಂದ ಗಳಿಸಿದ ಹಣ ಎಷ್ಟೋ ಭಾರಿ ಭಯೋತ್ಪಾದಕ ಕಾರ್ಯಗಳಲ್ಲಿ ಬಳಕೆಯಾಗಿ ದೇಶದ ಸುರಕ್ಷತೆಗೆ ದೊಡ್ಡ ಸವಾಲು ಉಂಟು ಮಾಡುತ್ತದೆ.

ಮಾದಕ ದ್ರವ್ಯಗಳ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿ ಅಳವಡಿಸಿಕೊಂಡ ಅಮಿತ್ ಶಾ ನೇತೃತ್ವದ ಗೃಹ ಇಲಾಖೆ ಇದರ ತೆಡೆಗೆ ತ್ರಿಕೋನ ಸೂತ್ರಗಳನ್ನು ರೂಪಿಸಿದೆ. ಸಾಂಸ್ಥಿಕ ರಚನೆಯನ್ನು ಬಲಪಡಿಸಿ ಕೇಂದ್ರ ಮತ್ತು ರಾಜ್ಯಗಳ ನಾರ್ಕೋಟಿಕ್ಸ್ ಏಜೆನ್ಸಿಗಳ ಮಧ್ಯೆ ಉತ್ತಮ ಸಮನ್ವಯ ಬೆಳಸಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ (NCB) ನೂತನ ರೂಪುರೇಷೆ ನೀಡಿತು. ಎನ್‌ಸಿಬಿಗೆ ಒಂದು ವಿಸ್ತಾರವಾದ ರಾಷ್ಟ್ರೀಯ ಡೇಟಾಬೇಸ್ ತಯಾರಿಸಲು ಸೂಚನೆ ನೀಡಿದ್ದು, ಮಾದಕ ದ್ರವ್ಯಗಳ ಹಣಬಲ ಮತ್ತು ಅದಕ್ಕೆ ಸಂಬಂಧಿತ ಭಯೋತ್ಪಾದಕ ಸಂಘಟನೆಗಳ ಮಾಹಿತಿ ಕೂಡ ಸಂಗ್ರಹಣೆ ಮಾಡಲದೆ. ಹಾಗೆ ಇದು ಮಾದಕ ದ್ರವ್ಯ ಕಳ್ಳಸಾಗಾಣಿಕೆಯ ನವೀನ ರೀತಿಗಳು ಮತ್ತು ಅಪರಾಧಿಗಳನ್ನು ವಿಶ್ಲೇಷಣೆ ಮಾಡಲಿದೆ.
ದೇಶದೊಳಗೆ ಬರುವ ಸುಮಾರು 60-70% ಪ್ರತಿಶತ ಮಾದಕ ದ್ರವ್ಯಗಳು ಸಮುದ್ರ ಮಾರ್ಗವಾಗಿಯೇ ಬರುತ್ತವೆ. ಸಮುದ್ರ ಮಾರ್ಗದಿಂದ ಒಳನುಸಳುವ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ತೆಡೆಗೆ ಗೃಹಮಂತ್ರಿಗಳು ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಲಯದಲ್ಲಿ ಉನ್ನತ ಮಟ್ಟದದಲ್ಲಿ ಒಂದು ಟಾಸ್ಕ್ ಫೋರ್ಸ್ ಸೃಷ್ಟಿಸಿದ್ದಾರೆ. ಈ ಟಾಸ್ಕ್ ಫೋರ್ಸ್‌ನಲ್ಲಿ ಬಂದರು ಮತ್ತು ಜಲಮಾರ್ಗ ಸಚಿವಾಲಯ, ನೌಕಾಪಡೆ, ಕರಾವಳಿ ರಕ್ಷಣಾ ಪಡೆ ಮತ್ತು ಪರೋಕ್ಷ ತೆರಿಗೆ ಮತ್ತು ಸುಂಕಗಳ ಕೇಂದ್ರಗಳ ಪ್ರತಿನಿಧಿಗಳಿರಲಿದ್ದಾರೆ.ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಹಣದ ಪತ್ತೆ ಹಚ್ಚುವುದರ ಜೊತೆಗೆ, ಅಮಿತ್ ಶಾರವರು ‘ಸಂಪೂರ್ಣ ಡ್ರಗ್ ಜಾಲಗಳ ನಕ್ಷೆ ಮತ್ತು ಅವುಗಳ ಮೂಲಗಳನ್ನು ಪತ್ತೆ’ ಹಚ್ಚುವಂತೆ ಸಚಿವಾಲಕ್ಕೆ ಸೂಚನೆ ನೀಡಿದ್ದಾರೆ.

ತಮ್ಮ ಎರಡನೇ ಕಾರ್ಯತಂತ್ರದ ಭಾಗವಾಗಿ, ಗೃಹ ಸಚಿವಾಲಯವು “ಸರ್ಕಾರದ ಸಂಪೂರ್ಣ ವಿಧಾನದ” ಅಡಿಯಲ್ಲಿ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ನಾರ್ಕೋ(NARCO) ಏಜೆನ್ಸಿಗಳ ನಡುವೆ ಉತ್ತಮ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಸರಣಿ ಕ್ರಮಗಳನ್ನು ತೆಗೆದುಕೊಂಡಿದ್ದು, ಇದರಿಂದಾಗಿ ಈ ಸಂಸ್ಥೆಗಳು ಸಮನ್ವಯ ಮತ್ತು ಹೊಣೆಗಾರಿಕೆಯೊಂದಿಗೆ ಒಟ್ಟಾಗಿ ಈ ಮಾರಿಯ ವಿರುದ್ಧ ಹೋರಾಡಲಿವೆ. ಗೃಹಮಂತ್ರಿಗಳ ಆದೇಶದ ಮೇರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಮಾದಕ ದ್ರವ್ಯ ವಿರೋಧಿ ಪಡೆ’ಗಳನ್ನು (ANTF) ರಚಿಸಲಾಗಿದೆ.
Kalahamsa Infotech private limitedಅಕ್ರಮ ಮಾದಕವಸ್ತು ವ್ಯಾಪಾರದಲ್ಲಿ ಡಾರ್ಕ್ ನೆಟ್ ಮತ್ತು ಕ್ರಿಪ್ಟೋಕರೆನ್ಸಿಯ ಬಳಕೆಯನ್ನು ನಿಲ್ಲಿಸಲು ಕೂಡ ಸಚಿವಾಲಯವೂ ಕೆಲಸ ಮಾಡುತ್ತಿದೆ. ಸಚಿವಾಲಯದ ಮೂರನೇ ತಂತ್ರ, ಡ್ರಗ್ಸ್ ಬಳಕೆಯ ವಿರುದ್ಧ ಸಾಮಾನ್ಯ ಜನರನ್ನು ಸಂವೇದನಾಶೀಲಗೊಳಿಸುವ ಅಭಿಯಾನ ಪ್ರಚಂಡ ಪ್ರತಿಕ್ರಿಯೆಯನ್ನು ಪಡೆದಿದೆ. ಎನ್‌ಸಿಬಿ(NCB) ಆರಂಭಿಸಿದ “ಡ್ರಗ್-ಫ್ರೀ ಇಂಡಿಯಾ” ಪ್ರತಿಜ್ಞೆ ಅಭಿಯಾನದ ಅಡಿಯಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು ಡ್ರಗ್ಸ್ ವಿರುದ್ಧ ಕಾರ್ಯನಿರ್ವಹಿಸಲು ಪ್ರತಿಜ್ಞೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾವನ್ನು ನಿಯಂತ್ರಿಸುವ ಗುರಿಯನ್ನು ಸಾಧಿಸಲು, ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ), ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್ (ಎಎಫ್‌ಪಿ), ಮತ್ತು ರಾಯಲ್ ಕೆನಡಿಯನ್ ಮೌಂಟೇನ್ ಪೊಲೀಸ್ (ಆರ್‌ಸಿಎಂಪಿ) ನಂತಹ ಅಂತರರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಮನ್ವಯವನ್ನು ಅಮಿತ್ ಶಾ ಖಚಿತಪಡಿಸಿದ್ದಾರೆ. ಈಗಾಗಲೇ ಅಂತಹ ಸಮನ್ವಯಗಳು ಫಲಿತಾಂಶಗಳನ್ನು ನೀಡುತ್ತಿರುವಾಗಲೇ, 44 ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಅಕ್ರಮ ಮಾದಕ ದ್ರವ್ಯಗಳ ಕೃಷಿಯನ್ನು ತಡೆಗಟ್ಟಲು, ಕಳೆದ ಮೂರು ವರ್ಷಗಳಲ್ಲಿ ಎನ್‌ಸಿಬಿ(NCB) ಸುಮಾರು 36,000 ಎಕರೆ ಪಾಪಿ(poppy) ಕೃಷಿ ಮತ್ತು 82,769 ಎಕರೆ ಗಾಂಜಾ ಕೃಷಿಯನ್ನು ನಾಶಪಡಿಸಿದೆ. ದೂರದ ಗುಡ್ಡಗಾಡು ಪ್ರದೇಶಗಳಲ್ಲಿ ಸಾಗುವಳಿ ಮಾಡುತ್ತಿರುವ ಅಕ್ರಮ ಬೆಳೆಗಳ ನಕ್ಷೆ ಮತ್ತು ನಾಶಪಡಿಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BangaloreHome Minister Amith ShahKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಗೃಹಮಂತ್ರಿ ಅಮಿತ್ ಶಾಬೆಂಗಳೂರು
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪಕ್ಷ ಅಧಿಕಾರಕ್ಕೆ ತರಲು ಯುವ ಶಕ್ತಿಯಿಂದ ಅವಿರತ ಪ್ರಯತ್ನ: ಎಚ್.ಡಿ. ಕುಮಾರಸ್ವಾಮಿ

Next Post

ಚುನಾವಣಾ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ವಾಹನ ವಶ: ದೂರು ದಾಖಲು

kalpa News

kalpa News

Next Post
ಚುನಾವಣಾ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ವಾಹನ ವಶ: ದೂರು ದಾಖಲು

ಚುನಾವಣಾ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ವಾಹನ ವಶ: ದೂರು ದಾಖಲು

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL