ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯಲ್ಲಿ ರೋಡ್ ಶೋ ಸಾಗುತ್ತಿದ್ದ ಮಾರ್ಗದಲ್ಲಿ ಉಪಸ್ಥಿತರಿದ್ದ ಮಂತ್ರಾಲಯ ಮಠ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಪ್ರಧಾನಿ ನರೇಂದ್ರ ಮೋದಿ PM Narendra Modi ನಮಿನ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಬಡಾವಣೆಗಳಲ್ಲಿ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ. ಹೀಗೆ ಜಯನಗರ 5ನೆಯ ಬ್ಲಾಕ್’ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮುಂಭಾಗದ ಮುಖ್ಯರಸ್ತೆಯಲ್ಲೂ ಸಹ ರೋಡ್ ಶೋ ಸಾಗಿತ್ತು.
ಪ್ರಧಾನಿಯವರು ಇದೇ ಮಾರ್ಗದಲ್ಲಿ ತೆರಳುತ್ತಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅವರನ್ನು ಆರ್ಶೀವದಿಸಲು ಸ್ವತಃ ಶ್ರೀಗಳು ಮಠದ ಮುಂಭಾಗದಲ್ಲಿ ಕುಳಿತಿದ್ದರು. ತಮ್ಮ ರೋಡ್ ಶೋ ವಾಹನ ಶ್ರೀಮಠದ ಮುಂಭಾಗದಲ್ಲಿ ಸಾಗುವ ವೇಳೆ ಪ್ರಧಾನಿಯವರು ಗುರುರಾಯರಿಗೆ ಹಾಗೂ ಶ್ರೀ ಸುಬುಧೇಂದ್ರ ತೀರ್ಥರಿಗೆ ಕೈಮುಗಿದು, ಶಿರಬಾಗಿ ನಮಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳ ಕುಳಿತಲ್ಲಿಂದಲೇ ಪ್ರಧಾನಿಯವರನ್ನು ಅನುಗ್ರಹಿಸಿದರು.
Also read: ಸುಬುಧೇಂದ್ರತೀರ್ಥ ಶ್ರೀಗಳಿಂದ ನರಸಿಂಹ ಜಯಂತಿ ಮಹಾಭಿಷೇಕ ಸಂಪನ್ನ
ಈ ಘಟನೆ ನೆರೆದಿದ್ದ ರಾಯರ ಭಕ್ತರು ಹಾಗೂ ಸಾರ್ವಜನಿಕರಲ್ಲಿ ಸಂತಸವನ್ನು ಇಮ್ಮಡಿಗೊಳಿಸಿತ್ತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















