ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಚುನಾವಣಾ ಪ್ರಯುಕ್ತ ಮಾರ್ಚ್ 29 ರಿಂದ ಮೇ 09 ರವರೆಗೆ ವಿಶೇಷ ತಪಾಸಣಾ ಕಾರ್ಯಕ್ರಮ ಕೈಗೊಂಡಿದ್ದು 120 ವಾಹನಗಳನ್ನು ಮುಟ್ಟುಗೋಲು ಹಾಕಿ, ಒಟ್ಟು ರೂ.30,03,136 ಗಳನ್ನು ವಸೂಲು ಮಾಡಲಾಗಿದೆ.
ಒಟ್ಟು 1504 ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ನಿಯಮಬಾಹಿರವಾಗಿ ಮಾರ್ಪಾಡುಗೊಳಿಸಲಾದ ವಾಹನಗಳ ಸಂಖ್ಯೆ 04, ಪರವಾನಗಿ ಉಲ್ಲಂಘನೆ ಮಾಡಿದ ಪ್ರಕರಣ 01, ಸರಕು-ಸಾಗಣೆ ವಾಹನಗಳಲ್ಲಿ ಜನರನ್ನು ಕೊಂಡೊಯ್ಯುವ ಪ್ರಕರಣ 07, ದೋಷಪೂರಿತ ನೋಂದಣಿ ಫಲಕಗಳುಳ್ಳ ವಾಹನ 05, ಪರವಾನಗಿರಹಿತ/ಅರ್ಹತಾ ಪತ್ರ ನವೀಕರಿಸದ/ತೆರಿಗೆ ಪಾವತಿಸದ/ಅಧಿಕ ಭಾರ ಕೊಂಡೊಯ್ಯುವ ಪ್ರಕರಣ 262 ಸೇರಿದಂತೆ ಒಟ್ಟು 279 ಪ್ರಕರಣಗಳನ್ನು ದಾಖಲಿಸಿ ರೂ.13,51,102 ತೆರಿಗೆ ಹಾಗೂ ರೂ.16,52,034 ದಂಡದ ಮೊತ್ತ ಸೇರಿ ಒಟ್ಟು ರೂ.30,03,136 ಗಳನ್ನು ವಸೂಲು ಮಾಡಲಾಗಿದೆ. ಹಾಗೂ ಒಟ್ಟು 120 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post