ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಮೂರು ಬಿಜೆಪಿ, ಮೂರು ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ.
ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿಯ ಎಸ್.ಎನ್. ಚೆನ್ನಬಸಪ್ಪ(ಚೆನ್ನಿ), ತೀರ್ಥಹಳ್ಳಿಯಿಂದ ಬಿಜೆಪಿಯ ಆರಗ ಜ್ಞಾನೇಂದ್ರ, ಶಿಕಾರಿಪುರದಿಂದ ಬಿಜೆಪಿಯ ಬಿ.ವೈ. ವಿಜಯೇಂದ್ರ, ಸಾಗರದಿಂದ ಕಾಂಗ್ರೆಸ್’ನ ಗೋಪಾಲಕೃಷ್ಣ ಬೇಳೂರು, ಸೊರಬದಿಂದ ಕಾಂಗ್ರೆಸ್’ನ ಮಧು ಬಂಗಾರಪ್ಪ, ಭದ್ರಾವತಿಯಿಂದ ಕಾಂಗ್ರೆಸ್’ನ ಬಿ.ಕೆ. ಸಂಗಮೇಶ್ವರ್ ಹಾಗೂ ಶಿವಮೊಗ್ಗ ಗ್ರಾಮಾಂತರದಿಂದ ಜೆಡಿಎಸ್’ನ ಶಾರದಾ ಪೂರ‍್ಯಾನಾಯ್ಕ್ ಗೆಲವು ಸಾಧಿಸಿದ್ದಾರೆ.
ಇನ್ನು, ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಒಂದಷ್ಟು ನೋಟಾ ವೋಟು ಸಹ ಚಲಾವಣೆಯಾಗಿದೆ. ಯಾವ ಅಭ್ಯರ್ಥಿಗೂ ಸಹ ಮತ ಚಲಾವಣೆ ಮಾಡಲು ಇಷ್ಟವಿಲ್ಲದವರು ನೋಟಾ ಮತ ಚಲಾಯಿಸಿದ್ದಾರೆ.
ಎಲ್ಲಿ ಎಷ್ಟು ನೋಟಾ ಚಲಾವಣೆಯಾಗಿದೆ?
- ಶಿವಮೊಗ್ಗ ನಗರ
ಇವಿಎಂ: 1205
ಅಂಚೆ ಮತ: 20
ಒಟ್ಟು: 1225(ಶೇ.0.68)
- ಶಿವಮೊಗ್ಗ ಗ್ರಾಮಾಂತರ
ಇವಿಎಂ:1039
ಅಂಚೆ ಮತ: 14
ಒಟ್ಟು: 1053(ಶೇ.0.58)
- ತೀರ್ಥಹಳ್ಳಿ
ಇವಿಎಂ:1153
ಅಂಚೆ ಮತ: 11
ಒಟ್ಟು: 1164(ಶೇ.0.72)
- ಸಾಗರ
ಇವಿಎಂ: 1349
ಅಂಚೆ ಮತ: 14
ಒಟ್ಟು: 1363(ಶೇ.0.82)
- ಸೊರಬ
ಇವಿಎಂ: 996
ಅಂಚೆ ಮತ: 14
ಒಟ್ಟು: 1010(ಶೇ.0.62)
- ಶಿಕಾರಿಪುರ
ಇವಿಎಂ: 680
ಅಂಚೆ ಮತ: 8
ಒಟ್ಟು: 688(ಶೇ.0.41)
- ಭದ್ರಾವತಿ
ಇವಿಎಂ: 794
ಅಂಚೆ ಮತ: 9
ಒಟ್ಟು: 803(ಶೇ.0.52)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post