ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಲ್ಲಿ ಶ್ರದ್ಧೆ ಇರುತ್ತದೆಯೋ ಅಲ್ಲಿ ಗುರು ಕಾರುಣ್ಯ ಇರುತ್ತದೆ. ಗುರುವಿಗೆ ಬೊಗಸೆ ಭಿಕ್ಷೆ ನೀಡಿದರೂ ಅದು ಮೃಷ್ಟಾನ್ನ ಭೋಜನದಂತೆಯೇ ಸ್ವೀಕಾರಾರ್ಹ ಆಗಿರುತ್ತದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ತೀರ್ಥರು Raghaveshwara Bharathi Shri ಅಭಿಪ್ರಾಯಪಟ್ಟರು.
ಮಧ್ವನಗರದ ಆಚಾರ್ಯತ್ರಯರ ಭವನಕ್ಕೆ ನಿನ್ನೆ ಸಂಜೆ ಭೇಟಿ ನೀಡಿ ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯನಿಗೆ ಸೇವೆ ಮತ್ತು ಜ್ಞಾನದ ಹಸಿವು ಇದ್ದಾಗ ಮಾತ್ರ ಆರೋಗ್ಯ ಸದೃಢವಾಗಿರುತ್ತದೆ. ಅನಾರೋಗ್ಯ ವೆಂದು ವೈದ್ಯರ ಬಳಿ ಹೋದರೆ ಮೊದಲು ಹಸಿವು ಸರಿ ಇದೆಯೇ ಎಂದು ಕೇಳುತ್ತಾರೆ. ಅದೇ ರೀತಿ ಸೇವೆ ಮತ್ತು ಜ್ಞಾನದ ಹಸಿವು ಕೂಡ ಮನುಷ್ಯನಿಗೆ ಅವಶ್ಯ. ಆಗ ಎಲ್ಲರ ಆರೋಗ್ಯವೂ ಚೆನ್ನಾಗಿ ಇರುತ್ತದೆ. ಸಮಾಜದ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ ಎಂದರು.

Also read: ಹೆಣ್ಣು ಕೊಟ್ಟ ಅತ್ತೆಗೆ ಚಾಕು ಇರಿದು ಕೊಲೆಗೆ ಯತ್ನ: ಕಾರಣವೇನು?
ಪ್ರಮುಖರಾದ ನಾಗರಾಜ ಹೆಗಡೆ, ಶುಭಾ, ಶಿವಾನಂದ ಹೆಬ್ಬಾರ್, ಪ್ರಕಾಶ್ ಭಟ್, ನೆಪ್ಜೂನ್ ಗುರು, ಡಾ. ಪೂರ್ಣಾನಂದ, ಕೆ.ಎನ್. ಲಕ್ಷ್ಮಿ ನಾರಾಯಣ ಇತರರಿದ್ದರು.











Discussion about this post