ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ 15 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಈ ಮೂಲಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ.
ಬೆಂಗಳೂರು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಸಂದೀಪ್ ಪಾಟೀಲ್ ಅವರನ್ನು ಕೆಎಸ್’ಆರ್‌ಪಿ ಐಜಿಪಿಯಾಗಿ ನೇಮಿಸಿದೆ. ಇವರಿಂದ ತೆರವಾದ ಹುದ್ದೆಗೆ ಬೆಳಗಾವಿ ಉತ್ತರ ವಲಯ ಐಜಿಯಾಗಿದ್ದ ಸತೀಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

Also read: ಶಿವಮೊಗ್ಗದ ಮೋರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಯಾವ ಅಧಿಕಾರಿ ಎಲ್ಲಿಗೆ?
ಡಾ.ಕೆ. ರಾಮಚಂದ್ರ ರಾವ್-ಕರ್ನಾಟಕ ರಾಜ್ಯ ಪೊಲೀಸ್ ಅಭಿವೃದ್ಧಿ ನಿಗಮದ ಎಡಿಜಿಪಿ
ಮಾಲಿನಿ ಕೃಷ್ಣಮೂರ್ತಿ-ರಾಜ್ಯ ಬಂಧೀಖಾನೆ ಇಲಾಖೆಯ ಎಡಿಜಿಪಿ
ಅರುಣ್ ಚಕ್ರವರ್ತಿ-ರಾಜ್ಯ ನಾಗರೀಕ ಹಕ್ಕುಗಳ ನಿರ್ದೇಶನಾಲಯದ ಎಡಿಜಿಪಿ
ಮನೀಶ್ ಖರ್ಬಿಕರ್-ಸಿಐಡಿ ಆರ್ಥಿಕ ಅಪರಾಧ ವಿಭಾಗದ ಎಡಿಜಿಪಿ

ವಿಫುಲ್ ಕುಮಾರ್-ಬೆಂಗಳೂರು ನಗರ ಪೂರ್ವ ಹೆಚ್ಚುವರಿ ಪೊಲೀಸ್ ಆಯುಕ್ತ
ಮಧುಕರ್ ಪವಾರ್-ಸಿಐಡಿ ಐಜಿಪಿ
ವಿಕಾಸ್ ಕುಮಾರ್ ವಿಕಾಸ್-ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ
ರಮಣ ಗುಪ್ತಾ-ಬೆಳಗಾವಿ ಉತ್ತರ ವಲಯ ಐಜಿಪಿ

ಎಂ.ಬಿ. ಬೋರಲಿಂಗಯ್ಯ-ಬೆಂಗಳೂರು ದಕ್ಷಿಣ ವಲಯ ಡಿಐಜಿ
ಸಿ. ವಂಶಿಕೃಷ್ಣ-ಸಿಐಡಿ ಆರ್ಥಿಕ ಅಪರಾಧ ವಿಭಾಗದ ಡಿಐಜಿ
ಸಿ.ಬಿ. ರಿಷ್ಯಂತ್-ಮಂಗಳೂರು ಎಸ್ಪಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post