ಕಲ್ಪ ಮೀಡಿಯಾ ಹೌಸ್ | ಅಮರಾವತಿ |
ತಾನೇ ಸ್ವತಃ ನಡೆಸುತ್ತಿದ್ದ ಆಶ್ರಮದಲ್ಲಿ ಆಸರೆ ಪಡೆದಿದ್ದ 15 ವರ್ಷದ ವರ್ಷದ ಅನಾಥ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸ್ವಾಮೀಜಿ ಪೂರ್ಣಾನಂದ ಸರಸ್ವತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆಯೇನು?
ಬಾಲಕಿ ಚಿಕ್ಕವಳಿದ್ದಾಗಲೇ ಪೋಷಕರು ನಿಧನರಾಗಿದ್ದರು. ಆನಂತರ ಎರಡು ವರ್ಷ ಆಕೆಯನ್ನು ಪೋಷಿಸಿದ ಆಕೆಯ ಅಜ್ಜಿ, ಆಶ್ರಮಕ್ಕೆ ಸೇರಿಸಿದ್ದರು. ಆಶ್ರಮ ನಡೆಸುತ್ತಿರುವ ಸ್ವಾಮೀಜಿ ಈ ಬಾಲಕಿಯ ಮೇಲೆ ಹಲವು ತಿಂಗಳುಗಳ ಕಾಲ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿದೆ.
ಬಾಲಕಿ ಜೂನ್ 13ರಂದು ಆಶ್ರಮದಿಂದ ತಪ್ಪಿಸಿಕೊಂಡು ಹೋಗಿದ್ದು, ಈ ಬಗ್ಗೆ ಪೊಲೀಸರು ನಾಪತ್ತೆಯ ದೂರನ್ನು ದಾಖಲಿಸಿಕೊಂಡಿದ್ದರು. ಬಳಿಕ ಬಾಲಕಿ ವಿಜಯವಾಡ ತಲುಪಿ ಆಶ್ರಮದ ಸ್ವಾಮೀಜಿ ಪೂರ್ಣಾನಂದ ಸರಸ್ವತಿ ವಿರುದ್ಧ ದೂರು ನೀಡಿರುವುದಾಗಿ ವರದಿಯಾಗಿದೆ.
Also read: ಭೂಗತ ಪಾತಕಿಗೆ `ಯೋಗಿ’ ಮಾಸ್ಟರ್ ಸ್ಟ್ರೋಕ್: ತಲ್ಲಣಿಸಿತು ಉತ್ತರ ಪ್ರದೇಶದ ಕ್ರಿಮಿನಲ್ ಲೋಕ
ಕಳೆದ ಹಲವು ತಿಂಗಳುಗಳಿಂದ ಪೂರ್ಣಾನಂದ ಸರಸ್ವತಿ ತನಗೆ ಪದೇ ಪದೇ ಹಿಂಸೆ ನೀಡುತ್ತಿದ್ದರು ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಬಾಲಕಿ ದೂರು ನೀಡಿರುವುದಾಗಿ ವರದಿಯಾಗಿದೆ.
ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಸ್ವಾಮೀಜಿ ವಿರುದ್ಧ ಐಪಿಸಿ ಸೆಕ್ಷನ್ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post