ಕಲ್ಪ ಮೀಡಿಯಾ ಹೌಸ್ | ಮೈಸೂರು |
ಗುರುಗಳ ಆಶೀರ್ವಾದ ಮತ್ತು ಅನುಗ್ರಹ ಇದ್ದರೆ ಶಿಷ್ಯರು ವಿದ್ಯಾಕ್ಷೇತ್ರದಲ್ಲಿ ವಿಶ್ವ ಮೆಚ್ಚುವ ಸಾಧನೆಗಳನ್ನು
ಮಾಡಲು ಸಾಧ್ಯ ಎಂದು ಪಂಡಿತ ರಟ್ಟೀಹಳ್ಳಿ ಸತ್ಯಬೋಧಾಚಾರ್ಯ ಹೇಳಿದರು.
ನಗರದ ಅಗ್ರಹಾರದಲ್ಲಿರುವ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಉತ್ತರಾದಿ ಮಠದಲ್ಲಿ ಸೋಮವಾರ ಶ್ರೀ ಸತ್ಯಸಂಕಲ್ಪ ತೀರ್ಥರ 181ನೇ ವರ್ಷದ ಆರಾಧನಾ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
ಮಳಖೇಡದ ಶ್ರೀ ಜಯತೀರ್ಥರು (ಟೀಕಾಚಾರ್ಯರ) ರಚಿಸಿದ ಮಹತ್ತರವಾದ ಕೃತಿ ತತ್ವೋದ್ಯೋತ ಟೀಕಾ ಗ್ರಂಥ ಕ್ಕೆ ‘ದ್ವೈತ ದ್ಯುಮಣಿ’ ಕೃತಿ ಯು ಸಮರ್ಥವಾದ ವ್ಯಾಖ್ಯಾನ ನೀಡಿದೆ. ಹುಲಿಗಿಯ ಖ್ಯಾತ ವಿದ್ವಾಂಸ ಶ್ರೀಯಪತ್ಯಾಚಾರ್ಯರು ಟೀಕಾಚಾರ್ಯರ ಗ್ರಂಥಗಳಿಗೆ ವ್ಯಾಖ್ಯಾನ ಬರೆಯಲು ಪ್ರಾರಂಭಿಸಿದರೂ ಆ ಕಾರ್ಯಕ್ಕೆ ನೂರೆಂಟು ವಿಘ್ನಗಳು ಬರುತ್ತಿದ್ದವು. ಆಗ ಅವರು ಶ್ರೀ ಸತ್ಯಸಂಕಲ್ಪ ತೀರ್ಥರ ಮಂತ್ರಾಕ್ಷತೆ , ಆಶೀರ್ವಾದ ಪಡೆದರು. ಪವಾಡ ಎಂಬಂತೆ ಗ್ರಂಥರಚನೆ ಸಾಂಗವಾಗಿ ಸಾಗಿತು. ಗುರುಗಳ ಪರಮ ಅನುಗ್ರಹ ಇದ್ದರೆ ಎಂಥಾ ಸಾಧನೆಯೂ ಸಾಂಗವಾಗಿ ಸಾಗುತ್ತದೆ ಎಂಬುದನ್ನು ಶ್ರೀಯಪತ್ಯಾಚಾರ್ಯರೇ ಗ್ರಂಥದ ಕೊನೆಯಲ್ಲಿ ಹೇಳಿಕೊಂಡಿದ್ದಾರೆ. ಅತ್ಯಂತ ಕಠಿಣವೂ, ವಾಕ್ಯಾರ್ಥ ಮಾಡಿದಷ್ಟೂ ವಿಸ್ತಾರವೂ ಆಗುವ ಮಹತ್ತರ ಕೃತಿ ‘ದ್ವೈತ ದ್ಯುಮಣಿ’ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕು ಎಂದು ಅವರು ಆಶಿಸಿದರು.
ಬರಗಾಲ ಆವರಿಸಿದ್ದ ಕರ್ಜಗಿ ಗ್ರಾಮದಲ್ಲಿ ೧೨ ವರ್ಷಗಳ ಕಾಲ ಜಾತಿ ಭೇದ ಮಾಡದೇ ಗ್ರಾಮದ ಎಲ್ಲರಿಗೂ ಶ್ರೀ ಸತ್ಯ ಸಂಕಲ್ಪ ತೀರ್ಥರು ಅನ್ನ ದಾನ ಮಾಡಿದ್ದರು. ಅವರ ಜ್ಞಾನದ ವೈಭವ ಅನಂತ. ಮಂತ್ರಾಕ್ಷತೆ ಮತ್ತು ಅನುಗ್ರಹ ಶಕ್ತಿ ಯೂ ಅನನ್ಯ. ಅವರ ಆರಾಧನೆಯು ಗುರು ಪೂರ್ಣಿಮಾ ದಿನವೇ ಇರುವುದು ಮತ್ತೊಂದು ವಿಶೇಷತೆ. ಇದರಲ್ಲಿ ಪಾಲ್ಗೊಂಡ ನಾವೆಲ್ಲಾ ಧನ್ಯರು.
ಪಂಡಿತ ಯದುನಂದನಾಚಾರ್ಯ ಶ್ರೀ ರಂಗಂ
ಮೋಕ್ಷಕ್ಕೆ ಸಾಧನ:
ಜ್ಞಾನದ ಸೇವೆ ಎಂಬುದು ಮೋಕ್ಷಕ್ಕೆ ಬಹುದೊಡ್ಡ ಸಾಧನ. ಇದು ಅಷ್ಟು ಸುಲಭಕ್ಕೆ ಒಲಿಯುವುದಿಲ್ಲ. ಸತತ ಪರಿಶ್ರಮ, ನಿರಂತರ ಅಧ್ಯಯನದೊಂದಿಗೆ ಗುರುವಿನ ಕಾರುಣ್ಯವೂ ಬೇಕು. ಹಾಗಿದ್ದಾಗ ಮಾತ್ರ ವೇದಾಂತ ಶಾಸ್ತ್ರದ ಮೌಲಿಕ ಕೃತಿಗಳು ರಚನೆಯಾಗುತ್ತವೆ. ಗುರುಗಳ ಆರಾಧನೆ ಸಂದರ್ಭ ಇಂಥ ಮಹತ್ವದ ವಿಚಾರಸಂಕಿರಣಗಳು ನಡೆಯುತ್ತಿರುವುದು ಜ್ಞಾನಪ್ರಸಾರದಲ್ಲಿ ಮೈಲಿಗಲ್ಲಾಗುತ್ತವೆ ಎಂದು ಸತ್ಯಬೋಧಾಚಾರ್ಯರು ಹೇಳಿದರು.
Also read: ಸರ್ಕಾರ ಟೇಕಾಫ್ ಆಗಿದೆ, ಅದರೆ ಹಾರಟ ನಿಲ್ಲಬಾರದು: ಆಯನೂರು ಮಂಜುನಾಥ್
ಶಾಸ್ತ್ರ ಅಧ್ಯಯನಕಾರ ವಿಜಯಾನಂದ ಮಾತನಾಡಿ, ಸತ್ಯ ಸಂಕಲ್ಪ ತೀರ್ಥರ ಆರಾಧನೆ ಎಂದರೆ ಭಕುತಗಣಕ್ಕೆ ಒಂದು
ಸಂಭ್ರಮ. ಈ ಸಂದರ್ಭ ಶಾಸ್ತ್ರ ಗಳ ವಿಚಾರ ಮಂಥನ ಆಗುತ್ತಿರುವುದು ಶ್ಲಾಘನೀಯ ಎಂದರು.
ಪಂಡಿತರಾದ ಸರ್ವಜ್ಞ ಆಚಾರ್ಯ, ಯದುನಂದನಾಚಾರ್ಯ ಶ್ರೀ ರಂಗಂ ಅವರು ಪ್ರೌಢ ವಿಷಯ ಮಂಡಿಸಿದರು. ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ ಪ್ರಾಚಾರ್ಯ ಸತ್ಯಧ್ಯಾನಾಚಾರ್ಯ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಂಡಿತರಾದ ಅನಿರುದ್ಧಾಚಾರ್ಯ, ಗೋವಿಂದಾಚಾರ್ಯ ಹಾಜರಿದ್ದರು.
ಆರಾಧನೋತ್ಸವ ಅಂಗವಾಗಿ ಶ್ರೀ ಸತ್ಯಸಂಕಲ್ಪ ತೀರ್ಥರ ಮೂಲ ವೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ, ಪೂಜೆ ಮತ್ತು ಮಹಾನೈವೇದ್ಯ ಸಮರ್ಪಣೆಗೊಂಡವು. ಸಂಜೆ 6ಕ್ಕೆ ಪಲ್ಲಕ್ಕಿ ಉತ್ಸವ ನಡೆಯಿತು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.
ಉತ್ತರ ಆರಾಧನೆ:
ಮಂಗಳವಾರ ಶ್ರೀ ಸತ್ಯಸಂಕಲ್ಪ ತೀರ್ಥರ ಉತ್ತರ ಆರಾಧನೆ ನಿಮಿತ್ತ ಮಠದಲ್ಲಿ ಬೆಳಗ್ಗೆ ೬ ರಿಂದ ಮಧ್ಯಾಹ್ನ ೧೨ ರ ವರೆಗೆ ವಿಶೇಷ ಪೂಜೆ, ಸಂಜೆ ೬ ಕ್ಕೆ ಉತ್ಸವಾದಿಗಳು ನಡೆಯಲಿವೆ.
ಶ್ರೀ ಸತ್ಯಸಂಕಲ್ಪ ತೀರ್ಥರ ಆರಾಧನೋತ್ಸವ ಅಂಗವಾಗಿ ಸೋಮವಾರ ಅಗ್ರಹಾರದ ಉತ್ತರಾದಿ ಮಠದಲ್ಲಿ ಹಮ್ಮಿಕೊಂಡಿದ್ದ ವಿಚಾರಸಂಕಿರಣದಲ್ಲಿ ಪಂಡಿತ ಸತ್ಯಬೋಧಾಚಾರ್ಯ ‘ದ್ವೈತ ದ್ಯುಮಣಿ’ ಗ್ರಂಥದ ಬಗ್ಗೆ ವಿಷಯ ಮಂಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post