ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲೋಹದ ಹಕ್ಕಿಯಲ್ಲಿ ಶಿವಮೊಗ್ಗದಿಂದಲೇ #Shivamogga ಹಾರುವ ಮಲೆನಾಡಿಗರ ಕನಸಿನ ದಿನ ಹತ್ತಿರವಾಗುತ್ತಿರುವ ಜೊತೆಯಲ್ಲಿ ವಿಮಾನದ ಟಿಕೇಟ್ ಬುಕಿಂಗ್’ಗೆ ದಿನಾಂಕ ನಿಗದಿಪಡಿಸಲಾಗಿದೆ.
ಹೌದು… ಈ ಕುರಿತಂತೆ ಇಂಡಿಗೋ ವಿಮಾನಯಾನ ಸಂಸ್ಥೆಯ ಹುಬ್ಬಳ್ಳಿ #Hubli ವಲಯದ ಮುಖ್ಯಸ್ಥ ಮನೋಜ್ ಪ್ರಭು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಜುಲೈ 20ರಿಂದ ಶಿವಮೊಗ್ಗ-ಬೆಂಗಳೂರು #Bengaluru ನಡುವಿನ ಟಿಕೇಟ್ ಬುಕ್ ಮಾಡಬಹುದಾಗಿದೆ ಎಂದರು.
ಆಗಸ್ಟ್ 11ರಿಂದ ಸೋಗಾನೆ ವಿಮಾನ ನಿಲ್ದಾಣದಿಂದ #ShivamoggaAirport ವಿಮಾನ ಹಾರಾಟ ಆರಂಭವಾಗಲಿದೆ. ಸಾರ್ವಜನಿಕರು ಜುಲೈ 20ರಿಂದ ಆನ್’ಲೈನ್ ಮೂಲಕ ಟಿಕೇಟ್ ಬುಕ್ ಮಾಡಬಹುದಾಗಿದೆ ಎಂದಿದ್ದಾರೆ.
ಟಿಕೇಟ್ ಬುಕ್ ಮಾಡುವುದು ಹೇಗೆ?
ಸಾರ್ವಜನಿಕರು ಆನ್ ಲೈನ್ ಮೂಲಕ ಟಿಕೇಟ್ ಬುಕ್ ಮಾಡಲು ಅವಕಾಶವಿದೆ. ಇಂಡಿಗೋ #IndiGo ಸಂಸ್ಥೆಯ ಅಧಿಕೃತ ವೆಬ್’ಸೈಟ್ https://www.goindigo.in/ ಹಾಗೂ ಮೇಕ್ ಮೈ ಟ್ರಿಪ್ https://www.makemytrip.com/ ಮೂಲಕ ಪ್ರಯಾಣಿಕರು ಟಿಕೇಟ್ ಕಾಯ್ದಿರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















