ಕಲ್ಪ ಮೀಡಿಯಾ ಹೌಸ್ |
ಶಿವಮೊಗ್ಗ |
ಏಳನೇ ವೇತನ ಆಯೋಗದ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸುವಂತೆ ಹಾಗೂ ನೌಕರರ ಇನ್ನಿತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ All India rural postal workers ಶಿವಮೊಗ್ಗ ವಿಭಾಗದ ವತಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಮಲೇಶ್ ಚಂದ್ರ ಕಮೀಟಿ 7ನೇ ವೇತನ ಆಯೋಗದ ವರದಿ ಸಲ್ಲಿಸಿ 6 ವರ್ಷಗಳು ಕಳೆದರೂ ಅದನ್ನು ಸಂಪೂರ್ಣವಾಗಿ ಜಾರಿಗೊಳಿಸದೇ ಕೇಂದ್ರ ಸರ್ಕಾರ ಮತ್ತು ಅಂಚೆ ಇಲಾಖೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದು, ಇದರ ವಿರುದ್ಧವಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಅನಿರ್ಧಿಷ್ಟ ಅವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಅದೇ ದಿನ ಅಂಚೆ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಬೇಡಿಕೆಗಳನ್ನು ಇನ್ನು ಒಂದು ತಿಂಗಳು ಒಳಗಾಗಿ ಈಡೇರಿಸುವುದಾಗಿ ಭರವಸೆ ಕೊಟ್ಟು ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದರು. ಆದರೆ ತಿಂಗಳುಗಳು ಕಳೆದರೂ ಯಾವುದೇ ಬೇಡಿಕೆಯನ್ನು ಈಡೇರಿಸದೇ ಇರುವುದರಿಂದ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಎಂಟು ಗಂಟೆಗಳ ಕೆಲಸ ಮತ್ತು ಪಿಂಚಣಿ ಸೇರಿದಂತೆ ಎಲ್ಲಾ ಪ್ರಯೋಜನಗಳನ್ನು ನೀಡಿಬೇಕು, ಜಿ.ಡಿ.ಎಸ್. ಗ್ರಾಚ್ಯುಟಿಯನ್ನು 5 ಲಕ್ಷ ರೂ.ಗಳವರೆಗೆ ಹೆಚ್ಚಿಸುವುದು. 180 ದಿನಗಳವರೆಗೆ ಪಾವತಿಸಿದ ರಜೆಯನ್ನು ಮುಂದುವರಿಸಿ ಮತ್ತು ಎನ್‌ಕ್ಯಾಷ್ಮೆಂಟ್ ಮಾಡುವುದು.
ಜಿ.ಡಿ.ಎಸ್. ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವುದು.
ಎಸ್.ಡಿ.ಬಿ.ಎಸ್. ಗೆ ಜಿ.ಡಿ.ಎಸ್. ಮತ್ತು ಇಲಾಖೆಯ ಕೊಡುಗೆಗಳನ್ನು ಹೆಚ್ಚಿಸಿ, ಶೇ. 3 ರಿಂದ 10ವರೆಗೆ ಅನ್ವಯವಾಗುವಲ್ಲೆಲ್ಲಾ ಎಲ್ಲಾ ನಿವೃತ್ತ ಜಿ.ಡಿ.ಎಸ್. ಗೆ ತಾತ್ಕಾಲಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
ಎಲ್ಲ ಪ್ರೋತ್ಸಾಹಕ ಯೋಜನೆಗಳು, ವ್ಯವಸ್ಥೆಗಳನ್ನು ರದ್ದುಗೊಳಿಸಿ ಮತ್ತು ಐಪಿಪಿ.ಬಿ. ಯಂತಹ ಜೆ.ಡಿ.ಎಸ್ ನಿಂದ ಮಾಡಿದ ಎಲ್ಲಾ ಕೆಲಸಗಳನ್ನು ಸೇರಿಸಿ, ಪಿ.ಎಲ್.ಐ, ಆರ್.ಪಿಯು, ಉಳಿತಾಯ ಯೋಜನೆಗಳು ಮತ್ತು ಎಂ.ಜಿ.ಎನ್.ಆರ್.ಇ.ಜಿ.ಎಸ್, ಅವರ ಕೆಲಸದ ಹೊರೆ ಮೌಲ್ಯಮಾಪನದಲ್ಲಿ ಸೇರಿಸುವದು. ಸಮಾನ ಕೆಲಸ/ಕೆಲಸದ ಹೊರೆಗೆ ಸಮಾನ ವೇತನದ ತತ್ವಗಳ ಅಡಿಯಲ್ಲಿ 5 ಗಂಟೆಗಳ ಕೆಲಸಕ್ಕೆ ನೇಮಕಗೊಂಡ ಹೊಸ ನೇಮಕಾತಿಗಳಿಗೆ ಎಲ್ಲಾ ತಾರತಮ್ಯಗಳನ್ನು ಸರಿಪಡಿಸಿ ಏಕರೂಪತೆಯನ್ನು ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.
Also read: ಅಕ್ರಮವಾಗಿ ಗಾಂಜಾ ಬೆಳೆದಿದ್ದ ಇಬ್ಬರ ಬಂಧನ
ಮೇಲ್ ವಿತರಣೆ ಮತ್ತು ರವಾನೆಯ ಹೆಚ್ಚುವರಿ ಕರ್ತವ್ಯಗಳನ್ನು ನಿರ್ವಹಿಸುವ ಎಲ್ಲಾ ಜಿ.ಡಿ.ಎಸ್. ಬ್ರಾಂಚ್ ಪೋಸ್ಟ್ ಮಾಸ್ಟರ್‌ಗಳಿಗೆ ಬಾಕಿ ಇರುವ ಸಂಯೋಜಿತ ಕರ್ತವ್ಯ ಭತ್ಯೆಯನ್ನು ನೀಡಬೇಕು. ಸಮಯ ಅಂಚೆಗಳನ್ನು ಸಾಗಿಸಲು ಅಗತ್ಯವಿರುವ ಹೆಚ್ಚುವರಿ ಸುಂಕವನ್ನು ಪರಿಗಣಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಪಾವತಿಯನ್ನು ಮಾಡಬೇಕು ಎಂದು ಒತ್ತಾಯಿಸಿದರು.
ನೌಕರರು ಎದುರಿಸುತ್ತಿರುವ ಎಲ್ಲಾ ರೀತಿಯ ಕಿರುಕುಳಗಳನ್ನು ನಿಲ್ಲಿಸಬೇಕು, ಮರಣಿಸಿದ ಜಿಡಿಎಸ್ ನ ಅವಲಂಭಿತರಿಗೆ ಅನುಕಂಪದ ನೇಮಕಾತಿಗಳನ್ನು ಖಾತರಿಪಡಿಸುವುದು ಸೇರಿದಂತೆ ಇನ್ನಿತರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
Discussion about this post