ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಿದ್ದಯ್ಯ ಆರ್.ಎಸ್ ಅವರು ಮಂಡಿಸಿದ “ಕುವೆಂಪು ಕಾವ್ಯದ ವಿಭಿನ್ನ ನೆಲೆಗಳು” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿ ಹೆಚ್ ಡಿ ಪದವಿಯನ್ನು ನೀಡಿ ಗೌರವಿಸಿದೆ.
ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾದ ಪ್ರೊ. ಮುನಿಯಪ್ಪ ಅವರು ಸಿದ್ದಯ್ಯ ಅವರಿಗೆ ಮಾರ್ಗದರ್ಶನ ನೀಡಿದ್ದರು.
ಕೊರಟಗೆರೆ ತಾಲ್ಲೂಕು, ಹೊಳವನಹಳ್ಳಿ ಹೋಬಳಿ, ರೆಡ್ಡಿಹಳ್ಳಿ ಗ್ರಾಮದ ಶ್ರೀರಾಮಯ್ಯ ಮತ್ತು ಭೀಮಕ್ಕ ದಂಪತಿಯ ಮಗನಾದ ಇವರು, ಪ್ರಸ್ತುತ ಸತ್ಯ ಅನ್ವೇಷಣೆ ಪಾಕ್ಷಿಕ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಜೊತೆಗೆ ತುಮಕೂರು ಜಿಲ್ಲೆಯ ಕರುನಾಡ ಕನ್ನಡ ಸಿರಿ ಬಳಗದ (ರಿ) ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
Also read: ಮಕ್ಕಳ ಜ್ಞಾನವೃದ್ಧಿಗೆ ರಸಪ್ರಶ್ನೆ ಕಾರ್ಯಕ್ರಮಗಳು ಸಹಕಾರಿ: ಶಾಸಕ ಚನ್ನಬಸಪ್ಪ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















