ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಡಿಯ ಭಾರತದ ಉಸಿರು ಬಿಗಿ ಹಿಡಿದು ಕಾಯುತ್ತಿರುವ ಆ ಕ್ಷಣಗಳು ಹತ್ತಿರವಾಗುತ್ತಿದ್ದು, ಚಂದ್ರನ ಮೇಲೆ ಭಾರತದ ರೋವರ್ ಇಳಿಯುವ ಐತಿಹಾಸಿಕ ಕ್ಷಣಗಳ ಪ್ರಕ್ರಿಯೆ ಇಂದು ಸಂಜೆ 5.20ರಿಂದ ಆರಂಭವಾಗಲಿದೆ.
ಈ ಮಹತ್ವದ ಪ್ರಕ್ರಿಯೆಯನ್ನು ಇಸ್ರೋ ಸಂಜೆ 5.20ರಿಂದ ಆರಂಭ ಮಾಡಲಿದ್ದು, ಸಂಜೆ 6.04 ನಿಮಿಷಕ್ಕೆ ಚಂದ್ರನನ್ನು ರೋವರ್ ಸ್ಪರ್ಶ ಮಾಡಲಿದೆ.
ಮೊದಲು ವಿಕ್ರಮ್ ಲ್ಯಾಂಡರ್‌ನ ದಿಕ್ಕನ್ನು ಚಂದ್ರನ ಮೇಲ್ಮೈನತ್ತ ತಿರುಗಿಸುವ ಪ್ರಯತ್ನ ನಡೆಯಲಿದೆ. 5.40ಕ್ಕೆ ಚಂದ್ರನ ಮೇಲ್ಮೈನತ್ತ ವಿಕ್ರಮ್ ಲ್ಯಾಂಡರ್ Vikram Lander ತಿರುಗಿಸಲಾಗುತ್ತದೆ. 5.47ಕ್ಕೆ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
Also read: ಚಂದ್ರಯಾನ-3 ಯಶಸ್ಸಿಗಾಗಿ ಪ್ರಿಯದರ್ಶಿನಿ ಶಾಲೆ ವಿದ್ಯಾರ್ಥಿಗಳ ಪ್ರಾರ್ಥನೆ
ಸಾಫ್ಟ್ ಲ್ಯಾಂಡಿಂಗ್ ಬಳಿಕ, ಲ್ಯಾಂಡಿಂಗ್ ಸೆನ್ಸರ್‌ಗಳಿಂದ ವಿಕ್ರಂನೊಳಗಿರುವ ಕಂಪ್ಯೂಟರ್‌ಗಳಿಗೆ ಸಂದೇಶ ರವಾನಿಸಲಾಗುತ್ತದೆ. ಈ ಮೂಲಕ ಒಳಗಿನ ವ್ಯವಸ್ಥೆ ಜಾಗೃತಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇತ್ತ ಲ್ಯಾಂಡರ್ ಇಳಿದ 4 ಗಂಟೆಗಳ ಬಳಿಕ ಅದರ ಬಾಗಿಲು ತೆರೆದು, ಅದರೊಳಗಿಂದ ಪ್ರಗ್ಯಾನ್ ರೋವರ್ ಹೊರಬಂದು ಚಂದ್ರನ ಮೇಲೆ ನಿಧಾನವಾಗಿ ಇಳಿಯಲಿದೆ. ಹೀಗೆ ರೋವರ್ ಕೆಳಗೆ ಇಳಿದ ಬಳಿಕ ರೋವರ್ ಮತ್ತು ಲ್ಯಾಂಡರ್ ಪರಸ್ಪರ ಚಿತ್ರಗಳನ್ನು ತೆಗೆದು ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರಕ್ಕೆ ರವಾನಿಸಲಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















