ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ Stanford University of America ಸಿದ್ದಪಡಿಸಿದ ಪಟ್ಟಿಯಲ್ಲಿ ಶಿವಮೊಗ್ಗದ ಡಾ.ಆರ್.ಎಸ್. ವರುಣ್‌ಕುಮಾರ್ ಸ್ಥಾನ ಪಡೆದಿದ್ದಾರೆ.
ದಾವಣಗೆರೆ ವಿವಿಯ Davanagere University ಪ್ರೊ. ಬಿ.ಸಿ ಪ್ರಸನ್ನ ಕುಮಾರ ಅವರ ಮಾರ್ಗದರ್ಶನದಲ್ಲಿ ಗಣಿತಶಾಸ್ತ್ರದ ಸಂಶೋಧನಾರ್ಥಿಯಾದ ಡಾ.ಆರ್.ಎಸ್.ವರುಣ್‌ಕುಮಾರ್ ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯವು ತಯಾರಿಸಿದ 2022 ರವರೆಗಿನ ಜಾಗತಿಕ ಮಟ್ಟದ ಅತ್ಯುನ್ನತ ಶೇ. 2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.

Also read: ಗಣಪತಿ ಕಟ್ಟೆಯಲ್ಲಿ ಹಸಿರು ಧ್ವಜವಿಟ್ಟ ಕಿಡಿಗೇಡಿಗಳು: ಇನ್ಸ್’ಪೆಕ್ಟರ್ ಅವಾಜ್’ಗೆ ಪಿಡಿಒ ತತ್ತರ
ಶಿವಮೊಗ್ಗದ ಪತ್ರಕರ್ತ, ಲೇಖಕ ಎನ್.ರವಿಕುಮಾರ್(ಟೆಲೆಕ್ಸ್ ರವಿ) ಮತ್ತು ಶ್ರೀಮತಿ ಶಶಿಕಲಾ ದಂಪತಿಯ ಪುತ್ರರಾದ ಡಾ.ಆರ್.ಎಸ್.ವರುಣ್‌ಕುಮಾರ್ ಗಣಿತಶಾಸ್ತ್ರದ “ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ” ವಿಷಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿದ್ದು.ಪ್ರಸ್ತುತ ಬೆಂಗಳೂರಿನ ಅಮೃತಾನಂದಮಯಿ ವಿಶ್ವವಿದ್ಯಾಪೀಠಂ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸಂಶೋಧನೆಯಲ್ಲಿ ತೊಡಗಿದ್ದಾರೆ.











Discussion about this post