ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಡುಗೆ ಸಿಬ್ಬಂದಿಗಳ ಮುಷ್ಕರದ ಹಿನ್ನೆಲೆಯಲ್ಲಿ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಸ್ವತಃ ಶಿಕ್ಷಕರೇ ಅಡುಗೆ ತಯಾರಿಸುವ ಮೂಲಕ ಮಾದರಿಯಾಗಿದ್ದಾರೆ.
ಕೆಲವು ದಿನಗಳಿಂದ ಬಿಸಿಯೂಟ ಅಡುಗೆ ಸಿಬ್ಬಂದಿಗಳು ಮುಷ್ಕರ ನಡೆಸುತ್ತಿದ್ದು, ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮನೆಯಿಂದಲೇ ಊಟ ತರುತ್ತಿದ್ದಾರೆ. ಆದರೆ, ಬಹಳಷ್ಟು ಮಕ್ಕಳಿಗೆ ಇದೆ ತೊಂದರೆಯಾಗಿಯೂ ಸಹ ಪರಿಣಮಿಸಿತ್ತು.
ಇಂತಹ ಸಂದರ್ಭದಲ್ಲಿ ತಮ್ಮಡಿಹಳ್ಳಿ ಶಾಲೆಯಲ್ಲಿ ಕುಬೇರ ನಾಯ್ಕ ಎಂಬುವವರು ಸೇರಿದಂತೆ ಇನ್ನಿತರೆ ಶಿಕ್ಷಕರು ಸ್ವತಃ ಅವರೇ ಅಡುಗೆ ತಯಾರಿಸಿದ್ದಾರೆ.
Also read: ಒಂದು ಹಾಡಿನ ವಿಚಾರಕ್ಕೆ ನಡೆದೇ ಹೋಯ್ತು ಕೊಲೆ | ಇಷ್ಟಕ್ಕೂ ನಡೆದಿದ್ದೇನು?
ಮನೆಯಿಂದ ಊಟ ತರುವುದು ಕೆಲವು ಮಕ್ಕಳಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಈ ಶಿಕ್ಷಕರು ಸ್ವತಃ ತಾವುಗಳೇ ಅಡುಗೆ ತಯಾರಿಸಿ, ತಾವುಗಳೇ ಮಕ್ಕಳಿಗೆ ಬಡಿಸಿರುವುದು ಮಾದರಿ ಕಾರ್ಯವಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















