ಇಂದಿರಾ ಫುಡ್ಸ್ ನ Indira Foods ಹೊಸ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗಿದೆ ಎಂದು ಇಂದಿರಾ ಫುಡ್ಸ್ ನಿರ್ದೇಶಕ ವಿಜಯ್ ಸಿ. ತಿಳಿಸಿದರು.
ರೆಡಿ ಟು ಈಟ್ ರಾಗಿ ಉತ್ಪನ್ನಗಳು, ವಿವಿಧ ಪೇಸ್ಟ್‍ಗಳು ಮತ್ತು ಭಾರತೀಯ ನೈಸರ್ಗಿಕ ಮಸಾಲೆಗಳನ್ನು ಬಳಸಿ, ಯಾವುದೇ ಅಡಿಕ್ಟಿವ್‍ಗಳನ್ನು ಹಾಕದೆ ತಯಾರಿಸಿದ ಆಹಾರೋತ್ಪನ್ನಗಳಿಗೆ ಹೆಸರುವಾಸಿಯಾದ ಸ್ವದೇಶಿ ಕಂಪನಿಯಾದ ಇಂದಿರಾ ಫುಡ್ಸ್, ತನ್ನ ಮಹತ್ವಾಕಾಂಕ್ಷೆಯ ವಿಸ್ತರಣಾ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
ಇಂದಿರಾ ಫುಡ್ಸ್‍ನ ಅಧ್ಯಕ್ಷೆ ಇಂದಿರಾ ಮಾತನಾಡಿ, ಇಂದಿರಾ ಫುಡ್ಸ್ 250 ಜನರಿಗೆ ಉದ್ಯೋಗ ನೀಡಿದೆ ಮತ್ತು ತನ್ನ ವಿಸ್ತರಣಾ ಯೋಜನೆಗಳ ಭಾಗವಾಗಿ ಮುಂದಿನ 1 ವರ್ಷದಲ್ಲಿ ಇನ್ನೂ 100 ಜನರನ್ನು ಸೇರಿಸುವ ಗುರಿಯನ್ನು ಹೊಂದಿದೆ ಎಂದರು.
Also read: ಕನ್ನಡ ರಾಜ್ಯೋತ್ಸವ ಹಿನ್ನೆಲೆ: ನ.21ರಂದು ವಿಶೇಷ ಸ್ಪರ್ಧೆ
ಎಫ್ಐಸಿಸಿಐ ಕರ್ನಾಟಕ ರಾಜ್ಯ ಮಂಡಳಿಯ ಅಧ್ಯಕ್ಷ ಒತ್ತು ಇಂದಿರಾ ಫುಡ್ಸ್‍ನ ಸಲಹೆಗಾರ ಉಲ್ಲಾಸ್ ಕಾಮತ್ ಅವರು ಇಂದಿರಾ ರವರ ಸಾಧನೆಯ ಬಗ್ಗೆ ಮಾತನಾಡುತ್ತ ತಮ್ಮಬ್ರ್ಯಾಂಡ್‍ನ ವಿಸ್ತರಣೆಯ ಬಗ್ಗೆ ಇರುವ ಕಾಳಜಿಯನ್ನು ಪ್ರಶಂಸಿಸಿದರು.
ನಟ ಮತ್ತು ಇಂದಿರಾ ಫುಡ್ಸ್‍ನ ಬ್ರ್ಯಾಂಡ್ ಅಂಬಾಸಿಡರ್ ಸತೀಶ್ ನೀನಾಸಂ ಮಾತನಾಡಿ, ನಾವೀನ್ಯತೆ ಮತ್ತು ಸಮಗ್ರತೆಯ ಶ್ರೀಮಂತ ಪರಂಪರೆಯನ್ನು ಹೊಂದಿರುವ ಭಾರತದ ಅತ್ಯಂತ ಸಾಂಪ್ರದಾಯಿಕ ಕಂಪನಿಗಳಲ್ಲಿ ಒಂದಾದ ಇಂದಿರಾ ಫುಡ್ಸ್‍ನೊಂದಿಗೆ ಸಂಬಂಧ ಹೊಂದಲು ನನಗೆ ಸಂತಸವಾಗುತ್ತಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post