ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೆಜಿಎಫ್ KGF ಮೂಲಕ ದೇಶವೇ ತಮ್ಮತ್ತ ತಿರುಗಿನೋಡುವಂತ ಹೆಸರು ಮಾಡಿದ ರಾಕಿಂಗ್ ಸ್ಟಾರ್ ಯಶ್ Yash ಅಭಿನಯದ 19ನೆಯ ಚಿತ್ರಕ್ಕೆ ಟೈಟಲ್ ಘೋಷಣೆ ಮಾಡಲಾಗಿದೆ.
`ಟಾಕ್ಸಿಕ್’ Toxic ಎಂಬ ವಿನೂತನ ಟೈಟಲ್ ಘೋಷಣೆ ಮಾಡಿರುವ ಚಿತ್ರರಂಗ ಇದರ ಪೋಸ್ಟರನ್ನು ಇಂದು ಬಿಡುಗಡೆ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದ್ದು ಟೈಟಲ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿತ್ತು. ಇದೀಗ ಕುತೂಹಲಕ್ಕೆ ತೆರೆ ಬಿದ್ದಿದ್ದು, ಚಿತ್ರದಲ್ಲಿನ ಪಾತ್ರಧಾರಿಗಳ ಕುರಿತು ಕುತೂಹಲ ಶುರುವಾಗಿದೆ.
Also read: ಆ ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಲೀಲಾವತಿ ಪ್ರಭಾವ ಎಷ್ಟಿತ್ತು ಗೊತ್ತಾ?
ಟಾಕ್ಸಿಕ್ ಚಿತ್ರವನ್ನು ಗೀತು ಮೋಹನ್’ದಾಸ್ ನಿರ್ದೇಶಿಸುತ್ತಿದ್ದು, ಈ ಚಿತ್ರದ ಟೈಟಲ್ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆದಿದೆ. ಈ ಚಿತ್ರದ ರಿಲೀಸ್ ದಿನಾಂಕವನ್ನೂ ರಿವೀಲ್ ಮಾಡಲಾಗಿದೆ. 2025ರ ಎಪ್ರಿಲ್ 10ರಂದು ಸಿನಿಮಾ ಬೆಳ್ಳಿತೆರೆಗೆ ಬರಲಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















