ಭದ್ರಾವತಿಯ ಗೋಕುಲ್ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಪೋಲೀಸರು ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುವುದನ್ನು ಬಿಟ್ಟು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ BYRaghavendra ಹೇಳಿದರು.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ರಕ್ಷಣಾಧಿಕಾರಿಗಳಿಗೆ ದೂರು ಕೊಟ್ಟರು ಸಹ ನಿರ್ಲಕ್ಷ್ಯ ವಹಿಸಿದ್ದರೆ. ಈ ಘಟನೆಯನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ. ಕೆಲವು ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ, ಹಲವರು ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ರಾಜಕಾರಣ ಮಾಡಲು ನಾವು ಇದ್ದೇವೆ. ಆದರೆ, ಪೊಲೀಸರು ಸತ್ಯ ಘಟನೆಯನ್ನು ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದರು.
Also read: ಬ್ಯಾಂಕ್ ಸಾಲ ಹಿಂತಿರುಗಿಸಲು ರೈತರಿಗೆ ಹೆಚ್ಚಿನ ಕಾಲಾವಕಾಶ ನೀಡಿ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮನವಿ
ಸಂಸತ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಇದೊಂದು ಗಂಭೀರವಾದ ಮತ್ತು ತಲೆತಗ್ಗಿಸುವ ವಿಷಯ. ಇದರ ಹಿಂದೆ ಷಡ್ಯಾಂತರವಿದೆ. ಮೈಸೂರಿನ ಸಂಸದ ಪ್ರತಾಪಸಿಂಹರವರ ಮೇಲೆ ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಕರ್ನಾಟಕದವರು ಎಂದರೆ ಎಲ್ಲರಿಗೂ ಪ್ರೀತಿ ಇರುತ್ತದೆ. ಸಹಜವಾಗಿಯೇ ಸಂಸತ್‍ಗೆ ಪ್ರವೇಶ ಮಾಡಲು ಪಾಸು ಕೊಡುತ್ತಾರೆ. ಹಾಗೆಯೇ ಅವರು ಸಹ ಕೊಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು.
ದಾಳಿ ಮಾಡಿದ ಹುಡುಗರು ಅದೇಕೆ ಮಾಡಿದರೂ ಅರ್ಥವಾಗುತ್ತಿಲ್ಲ. ಅವರಿಗೇಕೆ ಕೆಟ್ಟುಬುದ್ಧಿ ಬಂದಿತು ಗೊತ್ತಿಲ್ಲ. ಅವರ ಬಗ್ಗೆ ಅನುಕಂಪ ಪಡಲು, ಸಿಟ್ಟು ಮಾಡಿಕೊಳ್ಳಲು ಅರ್ಥವಾಗುತ್ತಿಲ್ಲ ಎಂದರು.
ರಾಹುಲ್‍ಗಾಂಧಿಯವರು ಪ್ರಧಾನಿಯವರನ್ನು ಶನಿ ಎಂದು ಕರೆದಿದ್ದಾರೆ. ಭಾರತಕ್ಕೆ ತಟ್ಟಿದ್ದ ಶನಿಯನ್ನು ಓಡಿಸಿದವರು ಮೋದಿಯವರು, ಇಡೀ ವಿಶ್ವವೇ ಅವರನ್ನು ಮೆಚ್ಚಿದೆ. ಇಂತಹ ವ್ಯಕ್ತಿಗೆ ಶನಿಎಂದು ರಾಹುಲ್ ಕರೆದಿರುವುದು ಖಂಡನೀಯ, ಕಾಂಗ್ರೆಸ್ ಪಕ್ಷ ಇಂತಹ ಗೂಂಡಾ ವರ್ತನೆ ಮತ್ತು ಹೇಳಿಕೆಗಳನ್ನು ನೀಡುತ್ತಿದೆ. ಬಿಜೆಪಿ ಈ ಎಲ್ಲಾದರ ವಿರುದ್ಧ ಬೀದಿಗೆ ಬಂದು ಹೋರಾಟ ಮಾಡುತ್ತೇವೆ ಎಂದರು.










Discussion about this post