ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಯಶಸ್ವಿ ಪರಿಸರ ಉದ್ಯಮವನ್ನು ಸೃಷ್ಠಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಶಶಿಮೋಹನ್ ದೊಡ್ಮನೆ ಕರೆ ನೀಡಿದರು.
ಪಿಇಎಸ್ ಇನ್ಸಿನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಇನ್‌ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಮಂಡಳಿಯ ಸಹಭಾಗಿತ್ವದೊಂದಿಗೆ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಇನ್ಸೈಟ್ಸ್ ಎಬೌಟ್ ಎಂಟರ್’ಪ್ರೈನರ್’ಶಿಪ್ ಅಂಡ್ ಸ್ಟಾರ್ಟಪ್ ಎಂಬ ವಿಷಯದ ಕುರಿತಾಗಿನ ತಾಂತ್ರಿಕ ಚರ್ಚಾವಿಷಯದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

Also read: ಕರ್ನಾಟಕಕ್ಕೆ ಸತತ 3ನೇ ವರ್ಷ ಪ್ರತಿಷ್ಠಿತ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ
ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎನ್. ಯುವರಾಜು ಮಾತನಾಡಿ, ವಿದ್ಯಾರ್ಥಿ ವೃಂದವು ಕಲಿಯುತ್ತಿರುವ ತಮ್ಮ ಇಂಜಿನಿಯರಿAಗ್ ವಿಷಯಗಳಲ್ಲಿ ಎದುರಾಗುವ ಹಲವು ವಿಚಾರಗಳ ಬಗ್ಗೆ ವೈಚಾರಿಕ ಮಟ್ಟದ ವಿಶ್ಲೇಷಣಾ ಮನೋ ಲಹರಿಯನ್ನು ಬೆಳೆಸಿಕೊಳ್ಳುವಲ್ಲಿ ಸದಾ ಕಾರ್ಯನಿರತರಾಗಿರಬೇಕು ಎಂದು ತಿಳಿ ಹೇಳಿದರು.
ಐಚ್ಚಿಕ ಇಂಜಿನಿಯರಿಂಗ್ ವಿಷಯದ ಬೋಧಕ ಹಾಗೂ ಬೋಧಕೇತರ ಪರಿಕಲ್ಪನೆಗಳ ಬಗೆಗೆ ಸೃಜನಶೀಲ ಚಿಂತನೆಯನ್ನು ಅಳವಡಿಸಿಕೊಂಡು ಅತ್ಯುನ್ನತ ಮಟ್ಟದ ಯಶಸ್ಸನ್ನು ಪಡೆದು ದೇಶಕ್ಕೆ ಹಾಗೂ ಸಮಾಜಕ್ಕೆ ತಮ್ಮದೇ ಆದ ತೃಣಮಾತ್ರದ ಸೇವೆಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.

ಪ್ರಮುಖ ಸಂಪನ್ಮೂಲ ವ್ಯಕ್ತಿಯ ಕಿರುಪರಿಚಯವನ್ನು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿAಗ್ ವಿಭಾಗದ ಬೋಧಕ ಸಿಬ್ಬಂದಿ ಡಾ. ಮಹಾಂತೇಶ್ ಮಟ್ಟದ್ ನೀಡಿದರು. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ರಾಘವೇಂದ್ರ ವಂದಿಸಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಐದನೇ ಸೆಮಿಸ್ಟರ್ ವಿದ್ಯಾರ್ಥಿನಿ ದೀಕ್ಷಾ ನಿರೂಪಿಸಿದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಎಚ್.ಎಂ. ಯಗ್ನೋದ್ಭವಿ, ಈ ತಾಂತ್ರಿಕ ಚರ್ಚಾ ವಿಷಯ ಕಾರ್ಯಾಗಾರದ ಮುಖ್ಯ ಸಂಚಾಲಕಿಯಾಗಿ ಕಾರ್ಯ ನಿರ್ವಹಿಸಿದರು.
ಈ ಕಾರ್ಯಗಾರದಲ್ಲಿ ಪಿಇಎಸ್’ಐಟಿಎಂ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲಾ ವಿಭಾಗಗಳ ಮುನ್ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









Discussion about this post