ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ಕಲ್ಪನೆಯನ್ನು ಮೊಟ್ಟಮೊದಲು ಕಂಡು ಅದನ್ನು ಸಾಕಾರಗೊಳಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಎಂದು ಆರ್’ಎಸ್’ಎಸ್ ಪ್ರಚಾರಕ್ ನವೀನ್ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನಲ್ಲಿ Subbaiah Dental College ಆಯೋಜಿಸಲಾಗಿದ್ದ ಪರಾಕ್ರಮ್ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಸ್ವಾತಂತ್ರಗೊಂಡ ಬಹಳ ವರ್ಷಗಳ ನಂತರ ಸೇನೆಯಲ್ಲಿ ಮಹಿಳೆಯಿರಿಗೆ ಅವಕಾಶ ನೀಡಲಾಗಿದೆ. ಆದರೆ, ಸ್ವತಂತ್ರಪೂರ್ವದಲ್ಲಿಯೇ ಐಎನ್’ಎನಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರೆಜಿಮೆಂಟ್ ಸೃಜಿಸಿ ಮಹಿಯರಿಗೆ ಅವಕಾಶ ನೀಡಿದ್ದು ನೇತಾಜಿ ಮಾತ್ರ ಎಂದರು.

ವಾಸ್ತವವಾಗಿ 1943ರಲ್ಲಿ ಅಂಡಮಾನ್’ನಲ್ಲಿ ಭಾರತದ ಸ್ವತಂತ್ರ ಧ್ವಜ ಹಾರಿಸಿ, ತಾವೇ ದೇಶದ ಪ್ರಧಾನಿ ಎಂದು ಘೋಷಿಸಿಕೊಳ್ಳುವ ಧೈರ್ಯ ತೋರಿಸಿದ್ದ ನೇತಾಜಿಯವರೇ ಮೊದಲ ಪ್ರಧಾನಿ ಎಂದರು.
1931ರ ಸಂಜೆ ತಮಿಳುನಾಡಿನ ಒಂದು ಕುಟುಂಬ ರಂಗೂರ್’ನಲ್ಲಿ ನೆಲೆಸಿ ಸಂಜೆ ಊಟ ಮಾಡುವ ವೇಳೆ ರೇಡಿಯೋದಲ್ಲಿ ಒಂದು ಸಂದೇಶ ಕೇಳಿದರು. ಕೇಳಿ ಊಟ ಅರ್ಧಕ್ಕೆ ಬಿಟ್ಟು ಎದ್ದು ಹೋದರು. ಇದನ್ನು ಕಂಡು ಒಬ್ಬಪುಟ್ಟ ಬಾಲಕಿ ರಾಜಮಣಿ ಎಂಬಾಕೆ ಪ್ರಶ್ನಿಸುತ್ತಾರೆ.
ಬಾಲಕಿಯ ಪ್ರಶ್ನೆಗೆ ಉತ್ತರಿಸಿದ ಆಕೆಯ ತಂದೆ ಸ್ವತಂತ್ರ ಹೋರಾಟದದಲ್ಲಿ ಮುಂಚೂಣಿಯಲ್ಲಿದ್ದ ಭಗತ್ ಸಿಂಗ್ ಸೇರಿ ಮೂವರನ್ನು ಗಲ್ಲಿಗೇರಿಸುತ್ತಾರೆ ಎಂದು ಕಣ್ಣೀರು ಹಾಕುತ್ತಾರೆ.
ಇದನ್ನು ತಿಳಿದ ರಾಜಮಣಿ ಭಗತ್ ಸಿಂಗ್ ಕುರಿತಾಗಿ ಹುಡುಕಲು ಆರಂಭಿಸಿದಾಗ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ತಿಳಿಯುತ್ತದೆ. ಅಲ್ಲಿಂದ ಅವರ ಕುರಿತಾಗಿ ಮಾಹಿತಿ ಸಂಗ್ರಹಿಸುತ್ತಾಳೆ.

ಎಲ್ಲ ಒಡವೆಗಳನ್ನು ತೆಗೆದುಕೊಂಡು ಬಾಲಕಿಯ ಮನೆಗೆ ಬಂದ ನೇತಾಜಿ, ಇದು ನಿನಗೆ ದೊಡ್ಡವರು ನೀಡಿರುವ ಒಡವೆ. ನೀನಿನ್ನೂ ಪುಟ್ಟ ಹುಡುಗಿ. ಈಗ ಓದು. ದೊಡ್ಡವಳಾದ ನಂತರ ಇಂತಹ ತ್ಯಾಗದ ಕೆಲಸ ಮಾಡು ಎನ್ನುತ್ತಾರೆ.
ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಆಕೆ, ಇದನ್ನು ನಾನು ನಿಮಗಾಗಿ ನೀಡಿಲ್ಲ. ಐಎನ್’ಎ ಹಾಗೂ ದೇಶದ ಸ್ವಾತಂತ್ರ ಹೋರಾಟಕ್ಕಾಗಿ ನೀಡಿದ್ದೇನೆ. ನನ್ನ ವಿದ್ಯಾಭ್ಯಾಸ ಮುಗಿದ ನಂತರ ನನ್ನ ಜೀವವನ್ನೇ ಸ್ವತಂತ್ರ ಹೋರಾಟಕ್ಕಾಗಿ ನೀಡುತ್ತೇನೆ ಎನ್ನುತ್ತಾಳೆ.
Also read: ರಾಮನ ದರ್ಶನಕ್ಕೆ ತುಂಬಿ ತುಳುಕುತ್ತಿದೆ ಅಯೋಧ್ಯೆ | ಎಲ್ಲೆಲ್ಲೂ ಜನಸಮೂಹ
ಇದನ್ನು ಕಂಡು ಬೆರಗಾದ ನೇತಾಜಿ, ನೀದು ರಾಜಮಣಿ ಅಲ್ಲಮ್ಮ, ಸರಸ್ವತಿ ರಾಜಮಣಿ ಎಂದು ಪ್ರಶಂಸಿಸುತ್ತಾರೆ ಎಂಬ ವಿಚಾರವನ್ನು ತಿಳಿಸುವ ಮೂಲಕ ದೇಶಕ್ಕಾಗಿ ಇಂದು ಲಕ್ಷಾಂತರ ಮಂದಿ ತ್ಯಾಗ ಮಾಡಿದ್ದಾರೆ ಎಂಬುದನ್ನು ತಿಳಿಸಿದರು.
ಪ್ರಾಂಶುಪಾಲ ಡಾ.ಬಿ.ಎಸ್. ಸುರೇಶ್ ಮಾತನಾಡಿ, ದೇಶದ ಸ್ವತಂತ್ರ ಹೋರಾಟಕ್ಕೂ ರಕ್ತದಾನಕ್ಕೂ ಬಹಳಷ್ಟು ಭಾವನಾತ್ಮಕ ಸಂಬಂಧವಿದೆ. ದೇಶ ಎಂದರೆ ನಮ್ಮೆಲ್ಲರ ಆತ್ಮ. ಬ್ರಿಟೀಷರ ಕಪಿಮುಷ್ಟಿಯಲ್ಲಿದ್ದ ಭಾರತವನ್ನು ಸ್ವತಂತ್ರಗೊಳಿಸಿಕೊಳ್ಳಲು ಲಕ್ಷಾಂತರ ಮಂದಿ ತ್ಯಾಗ ಹಾಗೂ ಬಲಿದಾನ ಮಾಡಿದ್ದಾರೆ ಎಂದರು.

ಸ್ವತಂತ್ರ ಹೋರಾಟಗಾರರು ನೀಡಿರುವ ಇಂತಹ ಮಹಾನ್ ಸಂದೇಶವನ್ನು ಎಲ್ಲರೂ ಅಳವಡಿಸಿಕೊಂಡು ಇಂದೂ ಸಹ ಜನರ ಜೀವ ಉಳಿಸಲು ಅರ್ಹ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯ ಶ್ರೀನಿವಾಸ್ ಮಾತನಾಡಿ, ತಮ್ಮಲ್ಲಿನ ಯಾವುದೇ ರೀತಿಯ ನಕಾರಾತ್ಮಕತೆಯನ್ನು ತೊಡೆದು ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರಿಗೆ ಇಂದು ಎಲ್ಲರೂ ಗೌರವ ಸಲ್ಲಿಸುತ್ತೇವೆ. ನಾವುಗಳೂ ಸಹ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೊರೆದು ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಮುಖವಾಗಿ ಯುವಕರು ಸಕಾರಾತ್ಮಕತೆಯನ್ನು ಹೆಚ್ಚು ಬೆಳೆಸಿಕೊಂಡು ಸಮಗ್ರ ವಿಕಾಸಕ್ಕಾಗಿ ಹೋರಾಟ ನಡೆಸಬೇಕು. ಪ್ರತಿದಿನವೂ ಎಲ್ಲ ಕಾರ್ಯಗಳಲ್ಲೂ ಪರಾಕ್ರಮವಾಗಿ ಮುನ್ನಗ್ಗಬೇಕು ಎಂದು ಕರೆ ನೀಡಿದರು.

ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜು ಹಾಗೂ ನ್ಯಾಶನಲ್ ಮೆಡಿಕೋಸ್ ಆರ್ಗನೈಸೇಶನ್ ಸಹಯೋಗದಲ್ಲಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ. ವಿನೀತ್ ಆನಂದ್, ಕಾಲೇಜಿನ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post