ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆಟ್ಸ್, ಸಂಸ್ಥೆಯಿಂದ ಫೆಬ್ರವರಿ 26ರ ಸೋಮವಾರದಂದು, ಸಾಮ(2023-24), ವಾರ್ಷಿಕೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ.
ಜಯನಗರದ ಎಂಟನೆಯ ಬಡಾವಣೆಯ, ಜಯರಾಮ ಸೇವಾ ಮಂಡಳಿ, ಜಿವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಜಸ್ಟೀಸ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ, ವೀರನಾರಿಯರಿಗೆ ಸನ್ಮಾನ ಕಾರ್ಯಕ್ರಮ ಮೊದಲು ನಡೆಯಲಿದೆ.
ತದನಂತರ ಹಿರಿಯ ಕೊಳಲು ವಾದಕರಾದ ಕೆ.ಯು. ರಾಘವೇಂದ್ರ ರಾವ್, ಹಿರಿಯ ಮೃದಂಗ ವಾದಕರಾದ ಇತ್ತೀಚೆಗೆ ಚೌಡಯ್ಯ ಪ್ರಶಸ್ತಿ ಪುರಸ್ಕೃತರಾದ ಎಂ. ವಾಸುದೇವರಾವ್ ಮೋಹಿತೆ ಅವರಿಗೆ , ಮತ್ತೊಬ್ಬ ತವಿಲ್ ವಾದಕರಾದ ಡೆಂಕಣಿ ಕೋಟೆ ಮಣಿ ಇವರಿಗೆ ಅಯೋಧ್ಯ ರಾಮನ ಶಿಲ್ಪಗಾರರಲ್ಲಿ ಒಬ್ಬರಾದ ಶ್ರೀಮಾನ್ ಇಡಗುಂಜಿ ಗಣೇಶ್ ಭಟ್ ಅವರಿಗೆ ಸಾಮ ಪುರಸ್ಕಾರವನ್ನು ಪ್ರದಾನ ಮಾಡಲಾಗುತ್ತದೆ.
Also read: ಕಾಶಿ, ಮಥುರಾ ದೇಗುಲಗಳನ್ನು ಕೆಡವಿ ಮಸೀದಿ ಕಟ್ಟಿಸಿದ್ದು ಆ ವ್ಯಕ್ತಿಯೇ: ಇತಿಹಾಸಕಾರ ಇರ್ಫಾನ್ ಹಬೀಬ್
ಇದಲ್ಲದೆ ಸಂಸ್ಕೃತದಲ್ಲಿ ಸಾಧನೆ ಮಾಡಿರುವಂತಹ ಮೂವರು ಮಹನೀಯರುಗಳಾದ ಅರ್ಜುನ್ ಭಾರದ್ವಾಜ್, ತಿಲಕ್ ರಾವ್, ಹಂದಲಸು ವಾಸುದೇವ ಭಟ್ ಮತ್ತು ವಿಶೇಷವಾಗಿ ಹಾಸ್ಯ ಕಲಾನಿಪುಣರಾದ ವೈ.ವಿ. ಗುಂಡೂರಾವ್ ಇವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಇರುತ್ತದೆ.
ಸಂಗೀತದ ಪ್ರಪಂಚದಲ್ಲಿ ಹಿರಿಯ ಘಟಂ ವಾದಕರಾದ ವಿದ್ವಾನ್ ಸತ್ಯ ಕುರ್ಮಾ ಹಾಗೂ ವಿದ್ವಾನ್ ಟಿ.ಎನ್. ರಮೇಶ್ ಹಾಗೂ ಹಿರಿಯ ಸಂಗೀತ ಉಪಾಧ್ಯಾಯನಿ ವಿದುಷಿ ಗೀತಾ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತದೆ. ಹಿರಿಯ ರಂಗಭೂಮಿಯ ಕಲಾವಿದರಾದ ಪ್ರೊಫೆಸರ್ ಸುಧೀಂದ್ರ ಶರ್ಮ ಅವರಿಗೂ ಸನ್ಮಾನ ಕಾರ್ಯಕ್ರಮ ನಡೆಯುತ್ತದೆ.
ಯುವಕರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ವರ್ಷ ಮೃದಂಗದಲ್ಲಿ ಸಾಧನೆ ಮಾಡುತ್ತಿರುವ ರಕ್ಷಿತ್ ಶರ್ಮಾ ಹಾಗೂ ಗಾಯನದಲ್ಲಿ ಸಾಧನೆ ಮಾಡುತ್ತಿರುವ ದತ್ತ ಪ್ರಸಾದ ಅವಧೂತ ಇವರುಗಳಿಗೆ ಸಮ ಯುವ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಬಾಲ ಪ್ರತಿಭೆಗಳ ಪ್ರೋತ್ಸಾಹ ಸಲುವಾಗಿ ಕುಮಾರಿ ಪ್ರಣವಿ, ಚಿರಂಜೀವಿ ಸಮರ್ಥ, ಕುಮಾರಿ ವಿದ್ಯಾಶ್ರೀ, ತನ್ಮಯ ಸುಪ್ರಮೋದ, ವಿಸ್ಮಯ ಸುಪ್ರಮೋದ, ಕುಮಾರಿ ನಿಧಿ ಭಟ್ ಮತ್ತು ತುರ್ಷಾ ವಸಿಷ್ಠ , ಈ ಎಲ್ಲಾ ಮಕ್ಕಳಿಗೆ ಸಾಮ ಬಾಲ ಪುರಸ್ಕಾರವನ್ನು ನೀಡಲಾಗುತ್ತದೆ.
ಬೆಳಗ್ಗೆ 10 ಗಂಟೆಗೆ ಕುಳೂರು ರವಿಚಂದ್ರ ಅವರ ಕೊಳಲು ವಾದನ ಏರ್ಪಡಿಸಲಾಗಿದೆ. ಪ್ರಶಸ್ತಿ ಸಮಾರಂಭದ ನಂತರ ಡಾಕ್ಟರ್ ನಾಗವಲ್ಲಿ ನಾಗರಾಜ್ ಅವರ ಗಾಯನ ಕಾರ್ಯಕ್ರಮ ನೆರವೇರಲಿದೆ. ಈ ಎಲ್ಲಾ ಕಾರ್ಯಕ್ರಮಗಳ ಜೊತೆಗೆ ರಾಮಲಲ್ಲ ಚಿತ್ರಕಲಾ ಸ್ಪರ್ಧೆಯನ್ನು ಕೂಡ ಏರ್ಪಡಿಸಲಾಗಿದೆ.
ಯುವಕರು ಹಾಗೂ 50 ವರ್ಷದವರಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಳಿಗೆ 9742992993 ಸಂಪರ್ಕಿಸಲು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















