ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದಾಳಿಕೋರ ಔರಂಗಜೇಬನೇ ಕಾಶಿ ಮತ್ತು ಮಥುರಾದಲ್ಲಿನ ದೇವಾಲಯಗಳನ್ನು ಕೆಡವಿ, ಮಸೀದಿಗಳನ್ನು ಕಟ್ಟಿಸಿದ್ದು ಎಂದು ಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್ Irfan Habib ಒಪ್ಪಿಕೊಂಡಿದ್ದಾರೆ.
ಈ ಕುರಿತಂತೆ ರಾಷ್ಟ್ರೀಯ ಮಾದ್ಯಮಗಳಿಗೆ ಮಾತನಾಡಿದ್ದು, ಕಾಶಿ ಮತ್ತು ಮಥುರಾ ದೇವಾಲಯಗಳನ್ನು Kashi – Mathura Temple ಔರಂಗಜೇಬನೇ Aurangazeb ಕೆಡವಿದ್ದು. ಮಾತ್ರವಲ್ಲ ಹೀಗೆ ದೇವಾಲಯಗಳನ್ನು ಕೆಡವುವ ಮೂಲಕ ಆತ ತಪ್ಪು ಮಾಡಿದ್ದಾರೆ ಎಂದಿದ್ದಾರೆ.
ವಾರಣಾಸಿ ಮತ್ತು ಮಥುರಾದಲ್ಲಿ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಸಾಬೀತುಪಡಿಸಲು ಯಾವುದೇ ಸಮೀಕ್ಷೆ ಅಥವಾ ನ್ಯಾಯಾಲಯದ ಆದೇಶದ ಅಗತ್ಯವಿಲ್ಲ, ಏಕೆಂದರೆ ಇತಿಹಾಸ ಪುಸ್ತಕಗಳು ಈಗಾಗಲೇ ಅದನ್ನು ಉಲ್ಲೇಖಿಸಿವೆ ಎಂದಿದ್ದಾರೆ.
Also read: ಜಾತಿ ಮೀಸಲಾತಿ ಪಡೆಯುತ್ತಿರುವವರಿಗೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ
ಔರಂಗಜೇಬನಿಗೆ ಮಸೀದಿ ಕಟ್ಟಬೇಕೆಂದಿದ್ದರೆ ಅದನ್ನು ಎಲ್ಲಿಯಾದರೂ ಕಟ್ಟಬಹುದಿತ್ತು. ದೇವಸ್ಥಾನವನ್ನು ಕೆಡವಿ ಕಟ್ಟುವ ಅಗತ್ಯ ಏನಿತ್ತು? ಎಂದು ಇರ್ಫಾನ್ ಪ್ರಶ್ನಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post