ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಿರುತೆರೆ ನಟಿ, ಗಾಯಕಿ, ನಿರೂಪಕಿ ಮತ್ತು ನರ್ತಕಿ ಚಂದನಾ ಅನಂತಕೃಷ್ಣ ಅವರು ಫೆ. 11ರಂದು ಸಂಜೆ 5.30ಕ್ಕೆ ಜೆ.ಸಿ. ರಸ್ತೆಯ ಎಡಿಎ ರಂಗಮಂದಿರದಲ್ಲಿ ರಂಗಪ್ರವೇಶ ಮಾಡಲಿದ್ದಾರೆ.
ಬೆಂಗಳೂರಿನ ‘ನರ್ತನ ಕೀರ್ತನ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್’ ನ ಗುರು ವಿದುಷಿ ಸೌಂದರ್ಯಾ ಶ್ರೀವತ್ಸ ಅವರ ಶಿಷ್ಯೆ ಚಂದನಾ ಅವರ ಭರತನಾಟ್ಯ ರಂಗಾರೋಹಣ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ದೃಷ್ಠಿ ಆರ್ಟ್ ಸೆಂಟರ್‌ನ ವಿದುಷಿ ಅನುರಾಧಾ ವಿಕ್ರಾಂತ್, ಲೇಖಕ, ನಟ, ನಿರ್ದೇಶಕ ಟಿ.ಎನ್. ಸೀತಾರಾಮ್, ನಟ ಮತ್ತು ನಿರ್ದೇಶಕ ವಿಜಯ ರಾಘವೇಂದ್ರ ಆಗಮಿಸಲಿದ್ದಾರೆ.

Also read: ಸಿಲಿಕಾನ್ ಸಿಟಿಯಲ್ಲಿ ಮತ್ತೆ ರಸ್ತೆಗಿಳಿಯಲಿವೆ ಡಬ್ಬಲ್ ಡೆಕ್ಕರ್ ಬಸ್ | ಬಿಎಂಟಿಸಿ ಸಿದ್ದತೆ
ಪರಿಚಯ:
ತುಮಕೂರು ಮೂಲದ ಗೀತಾ- ಅನಂತಕೃಷ್ಣ ಅವರ ಪುತ್ರಿ ಚಂದನಾ ಅವರು ಬೆಂಗಳೂರಿನ ಜೈನ್ ವಿವಿಯಲ್ಲಿ ಎಂಎ -ಭರತನಾಟ್ಯ ಶಿಕ್ಷಣ ಪಡೆಯುತ್ತಿದ್ದಾರೆ. 6 ವರ್ಷದವರಿದ್ದಾಗಲೇ ತುಮಕೂರಿನ ವಿದ್ವಾನ್ ಕೆ.ಎಂ. ರಮಣ ಮತ್ತು ವಿದ್ವಾನ್ ಡಾ. ಟಿ.ಎಸ್. ಸಾಗರ್ ಅವರಲ್ಲಿ ಭರತನಾಟ್ಯ ಕಲಿಕೆ ಆರಂಭಿಸಿದ ಚಂದನಾ, ನಂತರ ಪ್ರಖ್ಯಾತ ವಿದುಷಿ ಸೌಂದರ್ಯಾ ಅವರಲ್ಲಿ ಶಿಷ್ಯತ್ವ ಪಡೆದು ನರ್ತನಾಭ್ಯಾಸ ಮುಂದುವರಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post