ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ Ayodhye Rama Mandir ಅದ್ಧೂರಿ ಉದ್ಘಾಟನೆಯಾಗಿರುವ ಬೆನ್ನಲ್ಲೇ ಅಯೋಧ್ಯೆಯ ಸಮೀಪದ ಗ್ರಾಮದಲ್ಲಿ ನೂತನ ಮಸೀದಿ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
ಅಯೋಧ್ಯೆಯ ಉದ್ದೇಶಿತ ಮಸೀದಿಗೆ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ಎಂದು ಹೆಸರಿಸಲಾಗಿದ್ದು, ಪವಿತ್ರ ನಗರಗಳಾದ ಮೆಕ್ಕಾ ಮತ್ತು ಮದೀನಾದಿಂದ ಬುಧವಾರ ಮುಂಬೈಗೆ ಆಗಮಿಸಿದ ವಿಶೇಷ ಇಟ್ಟಿಗೆಯನ್ನು ಪಡೆದರು. ಇಟ್ಟಿಗೆ ಮಸೀದಿ ನಿರ್ಮಾಣದ ಪ್ರಾರಂಭವನ್ನು ಸೂಚಿಸುತ್ತಿದೆ ಎಂದು ವರದಿಯಾಗಿದೆ.

Also read: ಪಾಕಿಸ್ತಾನಿ ಜನರೇ ಭಾರತದ ದೊಡ್ಡ ಆಸ್ತಿ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿಕೆ
ಐದು ಸಾಂಕೇತಿಕ ಮಿನಾರ್‌ಗಳನ್ನು ನಿರ್ಮಿಸಲಾಗುವುದು, ಇದು 11 ಕಿಲೋಮೀಟರ್ ದೂರದಿಂದ ಗೋಚರಿಸುತ್ತದೆ. ಹೆಚ್ಚುವರಿಯಾಗಿ, 21 ಅಡಿ ಉದ್ದದ ಪವಿತ್ರ ಕುರಾನ್‌ನ ವಿಶ್ವದ ಅತಿದೊಡ್ಡ ಪುಟವನ್ನು ಮಸೀದಿಯೊಳಗೆ ಇರಿಸಲಾಗುತ್ತದೆ. ಈ ಇಟ್ಟಿಗೆಯು ಏಪ್ರಿಲ್ ಮಧ್ಯದಲ್ಲಿ ಅಯೋಧ್ಯೆಯ ಸಮೀಪವಿರುವ ಧನ್ನಿಪುರ ಗ್ರಾಮವನ್ನು ತಲುಪುವ ನಿರೀಕ್ಷೆ ಇದ್ದು, ಶೇಖ್ ಅವರ ನಿವಾಸದಿಂದಲೇ ಇಟ್ಟಿಗೆಯ ಶೋಭಾಯಾತ್ರೆ ಪ್ರಾರಂಭವಾಗಲಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post