ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಂಗೀತದಿಂದ ಮಾನವನ ಸಮಗ್ರ ವಿಕಾಸ ಸಾಧ್ಯ ಎಂದು ತುಮಕೂರಿನ #Tumkur ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಶ್ರೀ ಶಾರದಾ ಸಂಗೀತ ಸಭಾದ 21ನೇ ವಾರ್ಷಿಕೋತ್ಸವ ಅಂಗವಾಗಿ ಹನುಮಂತನಗರದ ಸ್ವಾಮಿ ವಿವೇಕಾನಂದ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 3 ದಿನಗಳ ಸಂಗೀತ ಉತ್ಸವ #MusicFestival ಮತ್ತು ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ಕ್ರಾಂತಿ ನಂತರ ಸಂಗೀತ ತನ್ನ ಅಧ್ಯಾತ್ಮಿಕ ಸ್ತರದಿಂದ ಕೆಳಗೆ ಜಾರಿತು. ಅದು ಇಂದ್ರಿಯ ಲೋಲುಪತೆಗೆ ಪ್ರಚೋದಿಸುವ ಮಾಧ್ಯಮವಾಗಿದ್ದು ವಿಷಾದ. ಇಂದ್ರಿಯ ಅತೀತವಾದ ಸ್ತರದಲ್ಲಿ ಮಾನವ ತನ್ನ ಸಮಗ್ರ ವಿಕಾಸ ಸಾಧಿಸಲು ಸಂಗೀತವನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಇದೆ ಸ್ವಾಮೀಜಿ ಹೇಳಿದರು. ಸಂಗೀತ ಸಭಾ ಅಧ್ಯಕ್ಷ ವಿದ್ವಾನ್ ಟಿ.ಎನ್. ಶಶಿಕುಮಾರ್, ಸಭಾ ಕಾರ್ಯದರ್ಶಿ ವಿದ್ವಾನ್ ಎಸ್. ಪ್ರಶಾಂತ್ ಇತರರು ಇದ್ದರು. ಶಾಸಕ ರವಿ ಸುಬ್ರಹ್ಮಣ್ಯ, ವೇದ ವಿದ್ವಾಂಸ ಮೀಗಿನಕಲ್ಲು ವಿಶ್ವೇಶ್ವಭಟ್ ಇದ್ದರು.
ಸನ್ಮಾನ
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಮತ್ತು ಅನುಗ್ರಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ, ಶಿವಮೊಗ್ಗ ಮೂಲದ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್, ಹಿರಿಯ ತಬಲಾ ಕಲಾವಿದ ಗುಂಡಾಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ನಂತರ ವಿದುಷಿ ರಮಾಮಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು.
ಮಾನವನ ಸರ್ವದಾ ವಿಕಸನಕ್ಕೆ ಸಂಗೀತ #Music ಪೂರಕವಾಗಿಯೇ ಇದೆ. ಹಾಗಾಗಿ ಅದು ಸಾರ್ವಕಾಲಿಕ ಮಾನ್ಯತೆ ಪಡೆದಿದೆ ಎಂದು ಸ್ವಾಮಿ ವೀರೇಶಾನಂದರು ನುಡಿದರು. ಸಂತ ತ್ಯಾಗರಾಜರು ‘ಸಂಗೀತವು ಮಾನವನಿಗೆ ಚತುರ್ವಿಧ ಪುರುಷಾರ್ಥ ಅನುಗ್ರಹಿಸುತ್ತದೆ ಎಂದರು.
ವಿಜ್ಞಾನಿ ಸರ್ ಜಗದೀಶ ಚಂದ್ರ ಬೋಸರು ‘ಸಂಗೀತದಿಂದ ಸಸ್ಯಗಳು ಹುಲುಸಾಗಿ ಬೆಳೆಯುತ್ತವೆ’ ಎಂಬುದನ್ನು ಪ್ರತಿಪಾದಿಸಿದರು. ರಾಷ್ಟ್ರಪತಿಯೂ ಆಗಿದ್ದ ಖ್ಯಾತ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ‘ಮನೆ ಮನೆಯಲ್ಲಿ ಸಂಗೀತ ಪ್ರಸರಣವಾದರೆ ವಿಶ್ವವನ್ನು ಕಾಡುತ್ತಿರುವ ಭಯೋತ್ಪಾದನೆ ತಗ್ಗಿಸಬಹುದು’ ಎಂದು ಕರೆ ನೀಡಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಸಂಗೀತ ವಿದ್ಯೆ ಮಾನವನನ್ನು ಮಾಧವನನ್ನಾಗಿಸುವ ಅಪಾರ ಶಕ್ತಿ, ಸಾಮರ್ಥ್ಯ ಹೊಂದಿದೆ ಎಂದು ವೀರೇಶಾನಂದರು ವಿವರಿಸಿದರು.
3 ದಿನಗಳ ಸಂಗೀತ ಉತ್ಸವದಲ್ಲಿ ಶುಕ್ರವಾರ ಸಂಜೆ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್, ಹಿರಿಯ ತಬಲಾ ಕಲಾವಿದ ಗುಂಡಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ವಿದ್ವಾನ್ ಟಿ.ಎನ್. ಶಶಿಕುಮಾರ್, ಕಾರ್ಯದರ್ಶಿ ಎಸ್. ಪ್ರಶಾಂತ್ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post