ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ತಮ್ಮ ಮಗಳ ಮೆದುಳು #Brain ಸೋಂಕಿಗೆ ಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣದಲ್ಲಿ #SocialMedia ಹಣ ಸಹಾಯ ಬೇಡಿದ್ದ ವ್ಯಕ್ತಿಗೇ ದುಷ್ಕರ್ಮಿಯೊಬ್ಬರ ಲಕ್ಷಾಂತರ ರೂ. ಹಣ ವಂಚನೆ ಮಾಡಿರುವ ಪ್ರಕರಣ ನಡೆದಿದೆ.
ವ್ಯಕ್ತಿಯೊಬ್ಬರು(ಹೆಸರು ಬಹಿರಂಗಗೊಂಡಿಲ್ಲ) ತಮ್ಮ ಮಗಳ ಸೋಂಕಿನ ಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಣ ಸಹಾಯ ಕೋರಿದ್ದರು. ಆದರೆ, ಇದನ್ನೇ ದುರುಪಯೋಗ ಮಾಡಿಕೊಂಡ ದುಷ್ಕರ್ಮಿಯೊಬ್ಬರ 6 ಲಕ್ಷ ರೂ. ಹಣ ನೀಡುತ್ತೇನೆ. ಇದಕ್ಕಾಗಿ ಶೇ.10ರಷ್ಟು ಮುಂಗಡ ಹಣ ನೀಡಬೇಕು ಎಂದು ಬೇಡಿಕೆಯಿಟ್ಟಿದ್ದಾನೆ.
ಶೇ.10ರಷ್ಟು ಮುಂಗಡ ಹಣ ನೀಡಬೇಕು ಎಂದು 3-4 ಬಾರಿ ಒಟ್ಟು ರೂ. 1.64 ಲಕ್ಷ ಹಣವನ್ನು ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾನೆ.
ಘಟನೆ ಸಂಬಂಧಿಸಿದಂತೆ ದೂರು ನೀಡಿದ ಹಿನ್ನೆಲೆಯಲ್ಲಿ ಹಣ ಹಾಕಿಸಿಕೊಂಡು ಮೋಸ ಮಾಡಿದ್ದ ಓರ್ವ ವ್ಯಕ್ತಿಯನ್ನು ಸಿಎಎನ್ ಅಪರಾಧ ಪೊಲೀಸ್ #CANCrimePolice ಠಾಣೆಯ ತಂಡ ವಶಕ್ಕೆ ಪಡೆದು, ರೂ. 1.35 ಲಕ್ಷ ನಗದು ವಶಪಡಿಸಿಕೊಂಡಿರುದ್ದಾರೆ.
ಈ ಕುರಿತು ಜಿಲ್ಲಾ ಸಿಎಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾರ್ವಜನಿಕರು ಇಂತಹ ಆಮಿಷಗಳಿಗೆ ಮೋಸ ಹೋಗದಂತೆ ಎಚ್ಚರ ವಹಿಸುವುದು ಎಂದು ಜಿಲ್ಲಾ ಪೊಲೀಸರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post