No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Saturday, August 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಕೊಪ್ಪಳ

ಹೊಸಪೇಟೆ | ಪ್ರಪ್ರಥಮ ಬಾರಿಗೆ ಶಂಕರಾಚಾರ್ಯರಿಗೆ ಆನೆ ಅಂಬಾರಿಯ ಉತ್ಸವ

kalpa News by kalpa News
May 14, 2024
in ಕೊಪ್ಪಳ
0
ಹೊಸಪೇಟೆ | ಪ್ರಪ್ರಥಮ ಬಾರಿಗೆ ಶಂಕರಾಚಾರ್ಯರಿಗೆ ಆನೆ ಅಂಬಾರಿಯ ಉತ್ಸವ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಹೊಸಪೇಟೆ  |

ವಿದ್ಯಾರಣ್ಯರ ಕ್ಷೇತ್ರ ವಿಜಯನಗರ(ಹೊಸಪೇಟೆ)ಯಲ್ಲಿ ಇದೇ ಮೊದಲ ಬಾರಿಗೆ ಆದಿಗುರು ಶಂಕರಾಚಾರ್ಯರಿಗೆ ಆನೆ ಅಂಬಾರಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಶುದ್ಧ ಪಂಚಮಿಯಂಯಂದು ಶ್ರೀ ಶಂಕರ ಭಗವತ್ಪಾದರು ಅವತರಿಸಿದ ಹಿನ್ನೆಲೆಯಲ್ಲಿ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳ ಆಜ್ಞಾನುಸಾರ ಈ ಆನೆ ಅಂಬಾರಿ ಉತ್ಸವ ನಡೆಯಿತು.
ಶಂಕರ ವರ್ಧಂತಿಯ #Shankaracharya Jayanthi ಅಂಗವಾಗಿ ಚಿಂತಾಮಣಿ ಮಠದಲ್ಲಿ ಬೆಳಗ್ಗೆ ಆಚಾರ್ಯ ಶಂಕರರಿಗೆ ರುದ್ರಾಭಿಷೇಕ, ರುದ್ರ ಸ್ವಾಹಾಕಾರ ಹೋಮ, ಶಂಕರಾಚಾರ್ಯರ ಅಷ್ಟೋತ್ತರ ಪಾರಾಯಣ ಉದ್ಯಾಪನೆಯ ಹೋಮ, ಗೋ ಪೂಜೆಗಳನ್ನು ನೆರವೇರಿಸಿ, ಸಂಜೆ ಹೊಸಪೇಟೆ ನಗರದ ಮುಖ್ಯರಸ್ತೆಗಳಲ್ಲಿ ಶಂಕರರ ಮೆರವಣಿಗೆ ಮಾಡಲಾಯಿತು.

ಗಣಪತಿ ಪೂಜೆಯೊಂದಿಗೆ ಆರಂಭವಾದ ಮೆರವಣಿಗೆಯ ಮುಂಭಾಗದಲ್ಲಿ ನಾದಸ್ವರ, ಅದರ ಹಿಂದೆ ಶಂಕರರ ಭಾವಚಿತ್ರವನ್ನು ಹೊತ್ತ (ಟ್ಯಾಕ್ಟರ್) ವಾಹನ, ಹೆಣ್ಣುಮಕ್ಕಳ ಕೋಲಾಟ, ನೃತ್ಯ, ಭಜನೆ, ಶಂಕರರಿಗೆ ಜಯಘೋಷಗಳನ್ನು ಕೂಗುವ ತಂಡ, ಅದರ ಹಿಂದೆ ಶ್ರೀಶ್ರೀ ಶಂಕರಾಚಾರ್ಯರ ಮೂರ್ತಿಯನ್ನು ಹೊತ್ತ ಆನೆ ಅಂಬಾರಿ, ಅದರ ಹಿಂದೆ ಶ್ರೀ ಶಿವಾನಂದ ಭಾರತೀ ಚೆಂತಾಮಣಿ ಸ್ವಾಮಿಗಳು ಆಸೀನರಾಗಿದ್ದ ರಥ ಇದ್ದವು.
ಸ್ವರ್ಗವೇ ಹೊಸಪೇಟೆ ನಗರಕ್ಕಿಳಿದು ಬಂದಂತಿತ್ತು. ನಯನ ಮನೋಹರವಾದ ಅದ್ಭುತ ಅಮೋಘ ವೈಭವೋಪೇತವಾದ ಆನೆ ಅಂಬಾರಿಯನ್ನು ಕಂಡು ಸದ್ಭಕ್ತರು ಆನಂದ ಭರಿತರಾದರು. ಜನ್ಮ ಸಾರ್ಥಕವಾಯಿತು ಎಂದು ಉದ್ಗರಿಸಿದರು. ವಿಜಯನಗರ ಸಾಮ್ರಾಜ್ಯದ ನೆನಪು ತರುತ್ತಿದ್ದು, ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳನ್ನು ಪಡೆದ ನಾವೇ ಧನ್ಯರು ಎಂದು ಗುರುಗಳಿಗೆ ಜಯ ಘೋಷಗಳನ್ನು ಕೂಗಿದರು.

ಮೆರವಣಿಗೆಯ ನಂತರ, ಅನೂಪ್ ಅವರ ತಂಡದಿಂದ ಸುಶ್ರಾವ್ಯವಾದ ಸಂಗೀತ ಸೇವೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸ್ವಾಮಿಗಳು, ಆಚಾರ್ಯ ಶಂಕರರಿಗಲ್ಲದೆ ಮತ್ತೆ ಇನ್ಯಾರಿಗೆ ಆನೆ ಅಂಬಾರಿ ಉತ್ಸವ !? ಜಗದ್ಗುರು, ನಾಡು ಕಂಡಂತಹ ಪ್ರಥಮಗುರು ಶಂಕರಾಚಾರ್ಯರಿಗೇ ಸಲ್ಲಬೇಕು, ಸಲ್ಲಿದೆ ಎಂದರು.
ಶಂಕರರನ್ನು ಹೊತ್ತ ಆನೆ ಅಂಬಾರಿಯ ದರ್ಶನದಿಂದ ಆನಂದದ ಅಲೆಯಲ್ಲಿ ತೇಲುತ್ತಿರುವ ನಿಮ್ಮೆಲ್ಲರನ್ನು ಕಂಡು ನನಗೆ ಬಹಳ ಆನಂದವಾಗಿದೆ. ಇದನ್ನು ನಾವು ಶಂಕರ ವರ್ಧಂತಿ ಎಂದು ಕರೆದಿದ್ದೇವೆ ಕಾರಣ ವರ್ಷದಿಂದ ವರ್ಷಕ್ಕೆ ಹೀಗೆ ಶಂಕರರ ಕಾರ್ಯಗಳು ಹೆಚ್ಚಾಗಬೇಕು. ಯಾವ ಅತಿಶಯೋಕ್ತಿಯೂ ಇಲ್ಲದೆ ಹೇಳಬೇಕಾದರೆ ಶಂಕರಾಚಾರ್ಯರು ಇಲ್ಲದಿದ್ದರೆ ಇಂದು ಸನಾತನ ವೈದಿಕ ಧರ್ಮ ಉಳಿಯುತ್ತಿರಲಿಲ್ಲ. ಅಷ್ಟೇಕೆ ಭಗವದ್ಗೀತೆ ಇಂದು ನಮ್ಮ ಕೈಗೆ ಸಿಗುತ್ತಿರಲಿಲ್ಲ ಎಂದರು.

Also read: ಸೊರಬ | ದಾದಿಯರು ರೋಗಿಗಳೊಂದಿಗೆ ತಾಳ್ಮೆಯಿಂದ ವರ್ತಿಸಬೇಕು: ಡಾ.ನಾಗೇಂದ್ರಪ್ಪ ಕರೆ

ಪೂರ್ವಾಶ್ರಮದಲ್ಲಿ ನಾನು ನನ್ನ ಸಹೋದರ ಶ್ರೀಕಾಂತ್ ಋಗ್ವೇದಿ ಅತ್ಯಂತ ಕಿಂಚಿತ್ ಶಂಕರರ ಸೇವೆ ಸಲ್ಲಿಸಿದಕ್ಕಾಗಿ ಆಚಾರ್ಯರು ಅಪಾರವಾದ ಕೃಪೆತೋರಿ ಸಿದ್ಧಿ ಪೀಠವಾದ ಚಿಂತಾಮಣಿ ಪೀಠದ ಮೇಲೆ ನಾವು ಆಸೀನವಾಗುವಂತೆ ಮಾಡಿದ್ದಾರೆ. ಶಂಕರಾಚಾರ್ಯರ ಸೇವೆಯ ಫಲವೇನು ಎಂದು ಯಾರಾದರು ಕೇಳಿದರೆ ಅದಕ್ಕೆ ನಾವೇ ಜೀವಂತ ನಿದರ್ಶನ ಎಂದರು.

ಈ ಸುಸಂದರ್ಭದಲ್ಲಿ ನನ್ನ ಸಂನ್ಯಾಸಕ್ಕೆ ಕಾರಣರಾದ ನನ್ನ ಪೂರ್ವಾಶ್ರಮದ ಹಿರಿಯರನ್ನು ಸ್ಮರಿಸುತ್ತೇನೆ. ನಿನ್ನೆ ಧಾರಾಕಾರವಾಗಿ ಮಳೆ ಸುರಿದಿದೆ. ಇಂದೂ ಸಹ ಮಳೆ ಬರುವಹಾಗಿದ್ದರೂ. ಅದ್ಯಾವುದನ್ನೂ ಲೆಕ್ಕಿಸದೆ ಭಕ್ತರೆಲ್ಲರೂ ಇಂದಿನ ಉತ್ಸವದಲ್ಲಿ ಸೇರಿರುವುದು. ಕೊಟ್ಟ ಪರೀಕ್ಷೆಯಲ್ಲಿ ಗೆದ್ದಂತಾಗಿದೆ. ಇಂದಿನ ಮೆರವಣಿಗೆಯಲ್ಲಿ ಭಾಗವಹಿಸಿದ ತಮ್ಮಲ್ಲರಿಗೂ ಮಂಗಳವಾಗಲೆAದು ಆಶೀರ್ವದಿಸುತಿದ್ದೇವೆ ಎಂದರು.

ನಂತರದಲ್ಲಿ, ಆನೆ ಮಾವುತ ತಂಡದವರಿಗೆ ಶ್ರೀಗುರುಗಳು ಫಲ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರು.

ಶ್ರೀ ಗುರುಗಳ ಸಂನ್ಯಾಸ ದೀಕ್ಷೆಯ ಸಮಯದಲ್ಲಿ ಸೇವೆ ಸಲ್ಲಿಸಿದ ಹೊಸಪೇಟೆ ತಾಲ್ಲೂಕು ಬ್ರಾಹ್ಮಣ ಸಂಘದವರಿಗೆ ಶ್ರೀಮಠದಿಂದ ಸನ್ಮಾನಿಸಲಾಯಿತು.

(ವರದಿ: ಮುರಳೀಧರ ನಾಡಿಗೇರ್, ಹೊಸಪೇಟೆ)    

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2024/05/Kumadwathi-1.mp4
https://kalpa.news/wp-content/uploads/2024/04/VID-20240426-WA0008.mp4
https://kalpa.news/wp-content/uploads/2024/04/VID-20240419-WA0018.mp4
Tags: HospeteKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaShankaracharya Jayanthiಶಂಕರ ವರ್ಧಂತಿಹೊಸಪೇಟೆ
Share202Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸೊರಬ | ದಾದಿಯರು ರೋಗಿಗಳೊಂದಿಗೆ ತಾಳ್ಮೆಯಿಂದ ವರ್ತಿಸಬೇಕು: ಡಾ.ನಾಗೇಂದ್ರಪ್ಪ ಕರೆ

Next Post

ವಾರಣಾಸಿ | ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ | ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಪ್ರಧಾನಿ

kalpa News

kalpa News

Next Post
ವಾರಣಾಸಿ | ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ | ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಪ್ರಧಾನಿ

ವಾರಣಾಸಿ | ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ | ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಪ್ರಧಾನಿ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL