ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವದಲ್ಲಿ ಮಾನವಶಕ್ತಿ ಉತ್ಪಾದಿಸುವ ಕೇಂದ್ರ ಭಾರತವಾಗಿದ್ದು, ಮುಂಬರುವ ವರ್ಷಗಳಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹ ಅಭಿವೃದ್ಧಿಯನ್ನು ಸಾಧಿಸುತ್ತದೆ ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.
ನಗರದ ಬ್ಯಾಂಕ್ ಆಫ್ ಬರೋಡಾದಲ್ಲಿ ಆಯೋಜಿಸಲಾಗಿದ್ದ ವಿಶ್ವ ವೈದ್ಯರ ದಿನ/ಪತ್ರಿಕಾ ದಿನಾಚರಣೆ ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

Also read: ಗಾಂಧಿ ಬಜಾರ್‌ನಲ್ಲಿ ಅಗ್ನಿ ಅವಘಡ: ಬಟ್ಟೆ ಅಂಗಡಿಗಳು ಬೆಂಕಿಗಾಹುತಿ
ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಪಂಕಜ್ ಕುಮಾರ್ ಸುಮನ್ ಮಾತನಾಡಿ, ‘ನಮ್ಮ ಸಮಾಜದ ಮೂರು ಹೆಸರಾಂತ ಸಮುದಾಯಗಳನ್ನು ಸನ್ಮಾನಿಸುವುದು ನಮ್ಮ ಉದ್ದೇಶವಾಗಿದೆ. ಆರ್ಥಿಕ ಆರೋಗ್ಯವನ್ನು ಸಂರಕ್ಷಿಸುವಲ್ಲಿ CA ಯ ಪಾತ್ರ ಮಹತ್ವದ್ದಾಗಿದೆ ಮತ್ತು ಅವರು ನಮ್ಮ ಆರ್ಥಿಕತೆಯ ಬೆಳವಣಿಗೆಗೆ ಅಗಾಧವಾದ ವಿಧಾನದ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ. ಸಮಾಜದಲ್ಲಿ ಮಾಧ್ಯಮಗಳು ಹೇಗೆ ಶಕ್ತಿಯುತವಾಗಿವೆ ಎಂಬುದಕ್ಕೆ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಮಾಧ್ಯಮವು ಸಮಾಜದಲ್ಲಿ ಫೋರ್ತ್ ಎಸ್ಟೇಟ್ ಆಗಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post