ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾರು ತಿಪ್ಪರಲಾಗ ಹೊಡೆದರೂ ಸಿಎಂ ಸಿದ್ದರಾಮಯ್ಯ #CM Siddaramaiah ರಾಜೀನಾಮೆ ಕೊಡುವುದಿಲ್ಲ. ಅದು ಬಿಜೆಪಿಯವರ ಹಗಲುಗನಸು ಅಷ್ಟೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ #Minister Madhu Bangarappa ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ನೂತನವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಿ ಜಿಲ್ಲಾ ಕಾರ್ಯಾಲಯದ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿಯವರಿಗೆ ಹೊಟ್ಟೆಕಿಚ್ಚು ಆರಂಭವಾಗಿದೆ. ಇವರ ಜೊತೆಗೆ ಜೆಡಿಎಸ್‍ನವರು ಸೇರುತ್ತಿದ್ದಾರೆ. ಸಿ.ಎಂ.ರಾಜೀನಾಮೆಯ ಬಗ್ಗೆ ತೀರ್ಮಾನ ಮಾಡುವುದು ಸಿ.ಟಿ.ರವಿ, ನಾರಾಯಣಸ್ವಾಮಿ ಅಲ್ಲ, ಅದು ಪಕ್ಷದ ಹೈಕಮಾಂಡ್‍ನ ತೀರ್ಮಾನ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Also read: ಸೊರಬ | ದೇವರ ಹೆಸರಿನಿಂದಾಗಿ ಇಂದಿಗೂ ಅನೇಕ ವನಗಳು ಉಳಿದಿವೆ | ವಾಮನಭಟ್ ಭಾವೆ
ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಅವರ ತಂದೆ ಅಧಿಕಾರಿದಲ್ಲಿದ್ದಾಗ ಎಷ್ಟು ಲಂಚ ಹೊಡೆದಿದ್ದಾರೆ ಎಂದು ಜನರೇ ಹೇಳುತ್ತಾರೆ. ಇದೇ ವಿಜಯೇಂದ್ರನ ಸಹವಾಸದಿಂದ ಯಡಿಯೂರಪ್ಪ ಜೈಲಿಗೆ ಹೋದರು. ನಮಗ್ಯಾಕೆ ಈ ಪ್ರಶ್ನೆ ಕೇಳುತ್ತೀರ, ನಿಮ್ಮ ಪಕ್ಷದ ನಾಯಕ ಯತ್ನಾಳ್ ಅವರಿಗೆ ಮೊದಲು ಇವರು ಉತ್ತರ ಕೊಡಲಿ ಆಮೇಲೆ ನಮ್ಮನ್ನು ಕೇಳಲಿ. ಯತ್ನಾಳ್ ಹಿರಿಯರು ಎಂಬ ನೆಪ ಹೇಳುತ್ತಾರೆ. ಹಿರಿಯರ ಕೈಯಲ್ಲಿ ಬೈಯಸಿಕೊಳ್ಳಲು ಇವರಿಗೆ ನಾಚಿಕೆಯಾಗುವುದಿಲ್ಲವ ಎಂದರು.

ಶಿಕ್ಷಕರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಸ್ಪಂಧಿಸುತ್ತಿದೆ. ಅವರ ಕೆಲವು ಬೇಡಿಕೆಗಳ ಈಡೇರಿಕೆಗೆ ಕಾನೂನಿನ ತಿದ್ದುಪಡಿಯ ಅಗತ್ಯವಿದೆ. ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲವೂ ಕೌನ್ಸಿಲ್ ಮೂಲಕವೇ ನಡೆಯುತ್ತದೆ. ಯಾರೇ ಆಗಲಿ ವರ್ಗಾವಣೆಗೆ ಹಣ ಪಡೆದಿದ್ದಾರೆ ಎಂದು ಗೊತ್ತಾದರೆ ಅವನು ಏಜೆಂಟೆ ಆಗಲಿರಲಿ ಎರಡು ನಿಮಿಷದಲ್ಲಿ ಕಿತ್ತು ಬೀಸಾಕುವೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








Discussion about this post