ಕಲ್ಪ ಮೀಡಿಯಾ ಹೌಸ್ | ಉಡುಪಿ/ಶಿವಮೊಗ್ಗ |
ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ದೇಶಕ್ಕೇ ಸಹಕಾರಿಯಾಗುವ ರೀತಿಯಲ್ಲಿ ಬೆಳೆಯಬೇಕು ಎಂದು ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದಂಗಳವರು #VidyeshaThirthaSwamiji ಸಲಹೆ ನೀಡಿದರು.
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ `ಆನಂದಕಂದ’ #Anandakanda ವಿಶೇಷ ಅಂಕಣಕ್ಕೆ ಆನ್ ಲೈನ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಆನಂದವನ ಮತ್ತು ಪೂರ್ಣಪ್ರಮತಿ ಗುರುಕುಲದ ವಿದ್ಯಾರ್ಥಿಗಳ ಪ್ರತಿಭೆಯನ್ನು ವಿಕಾಸಗೊಳಿಸಲು ಹಾಗೂ ಅವರಲ್ಲಿನ ಜ್ಞಾನವನ್ನು ಲೇಖನಗಳ ಮೂಲಕ ಪ್ರಪಂಚಕ್ಕೆ ಪರಿಚಯಿಸುವ ವ್ಯವಸ್ಥೆಯನ್ನು ಕಲ್ಪ ನ್ಯೂಸ್ #KalpaNews ಮೂಲಕ ಆರಂಭಿಸುತ್ತಿರುವುದು ತಿಳಿದು ಸಂತೋಷವಾಯಿತು ಎಂದರು.
Also read: ಆ.22: ರೇಡಿಯೋ ಶಿವಮೊಗ್ಗದಲ್ಲಿ ಜನತಾ ಜಾಗೃತಿ ಬಾನುಲಿ ಸರಣಿ
ಕಲ್ಪ ನ್ಯೂಸ್ ಡಿಜಿಟಲ್ ಮಾಧ್ಯಮದ ಮೂಲಕ ಇಂತಹ ಆನಂದಕಂದ ವಿಭಾಗದಲ್ಲಿ ಇದರ ಪ್ರಸಾರ ಆರಂಭವಾಗಿದೆ ಎಂಬುದು ಸಂತೋಷ. ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿರುವುದು, ಉತ್ತೇಜನ ನೀಡುತ್ತಿರುವುದು ಸಂತೋಷದ ವಿಚಾರ. ಇದಕ್ಕಾಗಿ ಕಲ್ಪ ನ್ಯೂಸ್ ಪ್ರಧಾನ ಸಂಪಾದಕರು, ಮಾಲೀಕರಾದ ಅನಿರುದ್ಧ ವಸಿಷ್ಠ ಅವರನ್ನು ಅಭಿನಂದಿಸುತ್ತೇವೆ ಎಂದರು.
ಗುರುಕುಲದ ಮಕ್ಕಳ ಶ್ರೇಯೋಭಿವೃದ್ಧಿ ಹಾಗೂ ಜ್ಞಾನಾಭಿವೃದ್ಧಿಗಾಗಿ ಹಿರಿಯ ಪತ್ರಕರ್ತರಾದ ರಘುರಾಮ್ ಅವರು ಬಹಳಷ್ಟು ಮುತುವರ್ಜಿ ವಹಿಸಿ, ಇಂತಹ ಒಂದು ಕಾರ್ಯಕ್ಕೆ ವೇದಿಕೆಯನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕಾಳಜಿಯನ್ನು ಕಂಡು, ದೊರೆತಿರುವ ವೇದಿಕೆಯನ್ನು ಸದುಪಯೋಗ ಮಾಡಿಕೊಂಡು, ಮಕ್ಕಳು ತಮ್ಮ ಪ್ರತಿಭೆ ತೋರಿಸಿ, ದೇಶಕ್ಕೆ ಸಹಕಾರಿಯಾಗುವ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸಿ, ರಾಮಕೃಷ್ಣ ದೇವರ ವಿಶೇಷ ಅನುಗ್ರಹ ದೊರೆಯಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ಹಿರಿಯ ಪತ್ರಕರ್ತ, ಮಾರ್ಗದರ್ಶಕರಾದ ರಘುರಾಮ್ ಅವರು ಮಾತನಾಡಿ, 2017ರಲ್ಲಿ ಆರಂಭವಾದ ಕಲ್ಪ ನ್ಯೂಸ್’ನಲ್ಲಿ ವಿದ್ಯಾಪೀಠದ ಮಕ್ಕಳ ವಿಕಾಸಕ್ಕಾಗಿ ಗುರುಗಳ ಆಶಯದಂತೆ ನೂತನ ಅಂಕಣವನ್ನು ಆರಂಭಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಮಾಧ್ಯಮದಲ್ಲಿ ಗುರುಕುಲದ ಮಕ್ಕಳು ಲೇಖನ ಪ್ರಕಟಗೊಳ್ಳುವುದು ಸಂತೋಷ. ಈ ಮಕ್ಕಳು ಕೇವಲ ಉಪನ್ಯಾಸಕರಾದರೆ ಸಾಲದು, ಉತ್ತಮ ಲೇಖಕರಾಗಿ ರೂಪುಗೊಳ್ಳಬೇಕು ಎಂದು ಆಶಿಸಿದರು.
ರಾಯರ ಆರಾಧನಾ ಪರ್ವಕಾಲದಲ್ಲಿ ಈ ಅಂಕಣಕ್ಕೆ ಗುರುಗಳು ಚಾಲನೆ ನೀಡಿದ್ದಾರೆ. ಮಕ್ಕಳ ಬರಹದ ವಿಕಾಸಕ್ಕೆ ಉತ್ತಮ ವೇದಿಕೆಯಾಗಿ, ಸಮಾಜಕ್ಕೆ ಕೊಡುಗೆಯಾಗಲಿ ಎಂಬುದು ನಮ್ಮೆಲ್ಲರ ಆಶಯ ಎಂದರು.
ಪೂರ್ಣಪ್ರಮತಿ ಗುರುಕುಲದ ಟ್ರಸ್ಟಿ ಶ್ರೀನಿವಾಸ ಗುತ್ತಲ ಅವರು ಮಾತನಾಡಿ, ಮಕ್ಕಳ ಜ್ಞಾನ ವಿಕಾಸಕ್ಕಾಗಿ ಆರಂಭಿಸುತ್ತಿರುವ ಈ ಒಂದು ಯೋಜನೆಯಲ್ಲಿ ಪೂರ್ಣ ಪ್ರಮತಿ ಗುರುಕುಲ ಭಾಗಿಯಾಗುತ್ತಿರುವುದು ಸಂತೋಷದ ವಿಚಾರವಾಗಿದೆ. ಪೂರ್ಣಪ್ರಮತಿಯು ಪೇಜಾವರ ಶ್ರೀವಿಶ್ವೇಶ ತೀರ್ಥ ಶ್ರೀಪಾದಂಗಳವರು ಚಾಲನೆ ನೀಡಿ, ಈಗಿನ ಗುರುಗಳಾದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಮಾರ್ಗದರ್ಶನ ಮಾಡುತ್ತಿದ್ದಾರೆ. ವಿಶೇಷವಾಗಿ ಭಂಡಾರಕೇರಿ ಶ್ರೀಗಳ ನೇತೃತ್ವದಲ್ಲಿ ವಿಶೇಷ ಯೋಜನೆಗಳ ಮೂಲಕ ಗುರುಕುಲವನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಗುರುಗಳ ಸಂಕಲ್ಪದಂತೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಕುರಿತಾಗಿ ಸೂಚನೆ ನೀಡಿದ್ದರು. ಅಂದಿನಿಂದ ರಾಘುರಾಮ್ ಅವರು ಸ್ವತಃ ಎರಡೂ ಗುರುಕುಲಗಳಿಗೆ ಆಗಮಿಸಿ, ಮಕ್ಕಳಿಗೆ ಎಲ್ಲ ರೀತಿಯ ಮಾರ್ಗದರ್ಶನ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಕಲ್ಪ ನ್ಯೂಸ್ ಮೂಲಕ ಅನಿರುದ್ಧ ವಸಿಷ್ಠ ಅವರು ಮಕ್ಕಳ ಬರವಣಿಗೆಗೆ ವೇದಿಕೆ ಕಲ್ಪಿಸಿದ್ದಾರೆ ಎಂದರು.
ಬರವಣಿಗೆ ಒಂದು ಅಸ್ತ್ರ. ಇದನ್ನು ಬಳಸಿಕೊಂಡು ಪ್ರಪಚಂದಾದ್ಯಂತ ಸತ್ ಚಿಂತನೆಗಳನ್ನು ಹರಡಬೇಕು. ಅಂತಹ ಮಾಧ್ಯಮ ಇಂದು ದುರ್ಲಭವಾಗಿದ್ದು, ಇಂತಹ ಸಾಹಸಕ್ಕೆ ಕಲ್ಪ ನ್ಯೂಸ್ ಮುಂದಾಗಿರುವುದು ಸಂತೋಷ. ಭಂಡಾರಕೇರಿ ಹಾಗೂ ಪೇಜಾವರ ಶ್ರೀಗಳ ಆಶಯಕ್ಕೆ ಪೂರಕಾಗಿ ಈ ಕಾರ್ಯ ಆರಂಭವಾಗಿವುದುದು ಸಂತೋಷ. ಸಂಸ್ಕೃತಿಯನ್ನು ಉಳಿಸಲು ಎಲ್ಲ ಭಾಗಗಳ ಮಕ್ಕಳ ಸೇರಿ ಬರವಣಿಗೆ ಎಂಬ ಸದಸ್ತ್ರದಿಂದ ಸನಾತನ ಸಂಸ್ಕೃತಿಯ ರಕ್ಷಣೆ ಮಾಡುವಂತಾಗಲಿ ಎಂದು ಆಶಿಸಿದರು.
ಕಲ್ಪ ನ್ಯೂಸ್ ಪ್ರಧಾನ ಸಂಪಾದಕ ಅನಿರುದ್ಧ ವಸಿಷ್ಠ ಎಸ್.ಆರ್., ಪೂರ್ಣಪ್ರಮತಿ ಗುರುಕುಲದ ಅಧ್ಯಾಪಕಿ ಅರ್ಚನಾ, ಕಲಾಹಂಸ ಇನ್ಫೋಟೆಕ್ ಮುಖ್ಯಸ್ಥರಾದ ಚಂದನ್ ಕಲಾಹಂಸ, ಪತ್ರಕರ್ತ ಅಜೇಯಸಿಂಹ, ಗುರುಕುಲದ ಡಾ.ಶ್ರೀನಿಧಿ, ಗುರುಕುಲದ ವಿದ್ಯಾರ್ಥಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post