ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಲದ ಬಾಧೆ ತಾಳಲಾರದೇ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕುದರೂರು ವ್ಯಾಪ್ತಿಯ ಬೈನೆಮನೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ರೈತನನ್ನು ಅಶೋಕ(42) ಎಂದು ಗುರುತಿಸಲಾಗಿದೆ.
Also read: ರಾಜ್ಯದಲ್ಲಿ ಲವ್ ಜಿಹಾದ್ ಹೆಚ್ಚಳ, ಕೇರಳದಲ್ಲಿ ಯುವಕರಿಗೆ ತರಬೇತಿ: ಆರ್. ಅಶೋಕ್
ಅಶೋಕ ಅವರು ಹಲವು ಬ್ಯಾಂಕ್ ಹಾಗೂ ಸಂಘ ಸಂಸ್ಥೆಗಳಿಂದ ಸಾಲ ಪಡೆದಿದ್ದರು. ಮರು ಪಾವತಿ ಮಾಡಲಾಗದೇ ತತ್ತಿಸಿದ್ದರು. ಕೊನೆಯಲ್ಲಿ ಒನ್ ಟೈಮ್ ಸೆಟಲ್ಮೆಂಟ್ ಮೂಲಕ ಇತ್ಯರ್ಥಕ್ಕೆ ನೋಟೀಸ್ ನೀಡಲಾಗಿತ್ತು ಎಂದು ಹೇಳಲಾಗಿದೆ.
ಇವರಿಗೆ ಸೇರಿದ್ದ ಎರಡು ಎಕರೆ ಅಡಕೆ ತೋಟದಲ್ಲಿ ಕೊಳೆ ರೋಗ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post