ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸೊರಬದ ಐವರನ್ನು ಉಚ್ಛಾಟನೆ ಮಾಡಲಾಗಿದೆ.
ಈ ಕುರಿತಂತೆ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಆದೇಶಿಸಿದ್ದು, ಪತ್ರಿಕೆಯಲ್ಲಿ ವರದಿಯಾದಂತೆ ಸೊರಬದ ಕೆಲವು ಬಿಜೆಪಿ ಕಾರ್ಯಕರ್ತರು ಪಕ್ಷ ಸಂಘಟನೆಗೆ ತೊಡಕಾಗುವಂತೆ ಸಭೆ ಮಾಡಿ ಪತ್ರಿಕಾಗೋಷ್ಠಿ ಮಾಡಿರುವುದು ಕಂಡುಬಂದಿದೆ ಎಂದಿದ್ದಾರೆ.
Also read: ಪುಸ್ತಕ ಓದುವ ಅಭ್ಯಾಸದಿಂದ ಕಲ್ಪನಾಶಕ್ತಿ ವೃದ್ಧಿ: ರವೀಂದ್ರ ಭಟ್ ಅಭಿಪ್ರಾಯ
ಈ ಹಿಂದೆಯೂ ಸಹ ಇದೇ ಕಾರ್ಯಕರ್ತರುಗಳು ಹಲವು ಪ್ರಮುಖರ ಬಗ್ಗೆ ಹಗುರವಾಗಿ ಮಾತನಾಡಿದಾಗಲೂ ಕೂಡ ಪಕ್ಷ ಸಹಿಸಿಕೊಂಡು ತಿದ್ದಿಕೊಳ್ಳಲು ಅವಕಾಶ ನೀಡಿತ್ತು. ಪಕ್ಷದ ಆತಂರಿಕ ವಿಷಯವನ್ನು ಬಹಿರಂ ವೇದಿಕೆಯಾಗಲಿ, ಪತ್ರಿಕಾ ಮಾಧ್ಯಮದ ಎದುರಾಗಲೀ ಚರ್ಚಿಸದಂತೆ ಸೂಚಿಸಿತ್ತು. ಅದಾಗಿಯೂ ಸಹ ಸಂಘಟನೆಯ ಕೆಲಸ, ಸದಸ್ಯತ್ವ ಅಭಿಯಾನ ಮತ್ತು ಸಂಘಟನಾ ಪರ್ವ ನಡೆಯುತ್ತಿರುವ ಈ ಸಂದರ್ಭದಲ್ಲಿ ಮತ್ತದೇ ತಪ್ಪು ಮರುಗಳಿಸಿದೆ ಎಂದಿದ್ದಾರೆ.
ಮಂಡಲ ಅಧ್ಯಕ್ಷರ ಮತ್ತು ಜಿಲ್ಲಾ ಅಧ್ಯಕ್ಷರ ವಿರುದ್ಧ ಮಾತನಾಡಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈ ರೀತಿ ನಡುವಳಿಕೆ ಪಕ್ಷದ ಶಿಸ್ತಿಗೆ ಧಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಲಾಗಿದೆ. ಮಂಡಲ ಕಾರ್ಯಕರ್ತರ ಮನಸ್ಸಿನ ಭಾವನೆಯೂ ಸಹ ಇದೇ ಆಗಿದೆ. ಮಂಡಲ ವರದಿಯ ಮೇರೆಗೆ ಈ ಎಲ್ಲಾ ಕಾರಣಗಳಿಂದ ಎಂ.ಡಿ. ಉಮೇಶ್, ವೃತ್ತಿಕೊಪ್ಪ ಮಲ್ಲಿಕಾರ್ಜುನ್, ಗುರುಕುಮಾರ್ ಪಾಟೀಲ್, ಶಿವನಗೌಡ, ಕೃಷ್ಣಮೂರ್ತಿ ಇವರುಗಳನ್ನು ಈ ತಕ್ಷಣದಿಂದಲೇ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post