ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಗೀತಾ ಜಯಂತಿ #Geetha Jayanthi ಪ್ರಯುಕ್ತ ಡಿ.2 ರಿಂದ 20ರವರೆಗೆ ನಾಡಿನ ಪ್ರಸಿದ್ಧ ವಿದ್ವಾಂಸರುಗಳಿಂದ ಭಗವದ್ಗೀತೆಯ ಪ್ರವಚನ ಏರ್ಪಡಿಸಲಾಗಿದೆ.
ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎದುರುಗಡೆ ಇರುವ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹದೇವರ ಸನ್ನಿಧಾನ (ಉತ್ತರಾದಿ ಮಠ)ದಲ್ಲಿ ಪ್ರತಿದಿನ ಸಂಜೆ 6:30 ರಿಂದ 7:30ರವರೆಗೆ ಕಾರ್ಯಕ್ರಮ ನಡೆಯಲಿದ್ದು, ವಿವರಗಳು ಹೀಗಿವೆ.
Also read: ಬೆಂಗಳೂರು | ಡಿ.1ರಂದು ಅಭಿಜಾತ ಕಲಾವಿದೆ ಶ್ರೀನಿಧಿ ಹೆಗಡೆ ರಂಗಪ್ರವೇಶ
- ಡಿ. 2 ರಿಂದ 4 : ಮ||ಶಾ||ಸಂ|| ಪುರಂದರಾಚಾರ್ಯ ಹಯಗ್ರೀವ (ಅಧ್ಯಾಯ-1 ರಿಂದ 3),
- ಡಿ. 5 ರಿಂದ 8 : ಮ||ಶಾ||ಸಂ|| ಕಲ್ಲಾಪುರ ಪವಮಾನಾಚಾರ್ (ಅಧ್ಯಾಯ-4 ರಿಂದ 7),
- ಡಿ. 9 ರಿಂದ 13 : ಮ||ಶಾ||ಸಂ||ವಿದ್ಯಾಧೀಶಾಚಾರ್ಯ ಗುತ್ತಲ (ಅಧ್ಯಾಯ-8 ರಿಂದ 11),
- ಡಿ. 14 ರಿಂದ 16 : ಮ||ಶಾ||ಸಂ|| ಹನುಮಂತಾಚಾರ್ಯ ಕುಲಕರ್ಣಿ (ಅಧ್ಯಾಯ-12 ರಿಂದ 14),
- ಡಿ. 17 ರಿಂದ 20 : ಮ||ಶಾ||ಸಂ|| ವಾದಿರಾಜಾಚಾರ್ಯ ಕರಣಂ (ಅಧ್ಯಾಯ-15 ರಿಂದ 18).
ಭಕ್ತಾದಿಗಳು ಈ ಎಲ್ಲಾ ದಿನಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹರಿ-ವಾಯು-ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಯಕ್ರಮದ ನಿರ್ವಾಹಕರಾದ ಮ||ಶಾ||ಸಂ|| ಭೀಮಸೇನಾಚಾರ್ಯ ಅತನೂರು ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post