ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-16 |

ನಮ್ಮ ಬದುಕಿನಲ್ಲಿ ತುಪ್ಪ ಎಂದರೆ ನಮ್ಮ ಸುತ್ತಲೂ ಇರುವ ಜನರು. ಅವರು ಸದಾ ನಮ್ಮನ್ನು ಕಾಡಿಸುತ್ತಾರೆ. ನಾವು ಒಂದು ಒಳ್ಳೆಯ ವಿಷಯದಲ್ಲಿ ಪ್ರವೃತ್ತರಾದಾಗ ಅವರು ನಮ್ಮನ್ನು ಅಸಮರ್ಥರೆಂದು ನಿಂದಿಸುತ್ತಾರೆ. ಪ್ರತಿ ನಿಮಿಷಕ್ಕೂ ನೀನು ಸಾಧಿಸಲು ಅಸಮರ್ಥನೆಂದು ಹೇಳುತ್ತಾರೆ. ಆದರೆ ನಾವು ಬೆಂಕಿಯಂತೆ ಇರಬೇಕು. ತುಪ್ಪದ ಜಿಡ್ಡಿನಿಂದಲೇ ಬೆಂಕಿಯು ಉರಿಯುವಂತೆ ಸಹಿಸದವರ ನುಡಿಗಳೆಂಬ ತುಪ್ಪವನ್ನು ನಮ್ಮ ಸಾಧನಾ ಜ್ಞಾಲೆಯಾಗಿಸಿಕೊಳ್ಳಬೇಕು, ಸಾಧಿಸಬೇಕು.

ನಮ್ಮ ಬದುಕು ನಮ್ಮ ಕೈಯಲ್ಲಿಯೇ ಇದೆ. ಒಂದು ಹೂ ಅರಳಿ ಸುಗಂಧಾದಿಳನ್ನು ಹೇಗೆ ಕೊಡುತ್ತದೋ ಹಾಗೆಯೇ ನಮ್ಮ ಜೀವನದಲ್ಲಿ ದ್ವೇಷಾದಿಗಳನ್ನು ತ್ಯಜಿಸುತ್ತಾ, ಅರಿವನ್ನು ಪಡೆಯುತ್ತಾ, ಗುರುಗಳ ಆಶೀರ್ವಾದದಿಂದ ಮೇಲೇರಬೇಕು. ಸಾಧನಾಸಕ್ತನಾಗಬೇಕು. ಶಾಶ್ವತವಾದ ಸತ್ಯಗಳನ್ನು ತಿಳಿಯುತ್ತಾ ಹಾಗೂ ತಿಳಿಸುತ್ತಾ ಸಾರ್ಥಕ ಜೀವನ ಸಾಗಿಸಬೇಕು.
ನಾನು ನನ್ನದೆಂಬ ಅಹಂ ಬಿಡದಿರುವ ಮಾನವನು. ನಾನಿಲ್ಲದೆ ಜಗವಿಲ್ಲವೆನ್ನುವ ಮಾನವನು ಮತ್ತಷ್ಟು ದುಃಖ, ಒತ್ತಡ, ಹತಾಶೆಗೆ ಒಳಗಾಗುತ್ತಾನೆ. ಗಾಳಿ ಬೀಸಿದರೆ ಉಸಿರು. ಇಲ್ಲದಿದ್ದರೆ…. ನಮ್ಮ ಬದುಕು ಹಾಗೆ ಗಾಳಿಯಂತೆ ಪರರ ಏಳಿಗೆ, ಉಳಿವಿಗಾಗಿ ಇರಬೇಕು. ಈ ರೀತಿಯ ತ್ಯಾಗಮಯವಾದ ಸುಂದರವಾದ ಬದುಕನ್ನು ಸಾಧಿಸಿದವನೇ ಸಾರ್ಥಕ ಮಾನವನು ಎಂದೆನಿಸುತ್ತಾನೆ. ನಾವು ಕೂಡ ಈ ಆದರ್ಶಗಳನ್ನು ಅಳವಡಿಸಿಕೊಂಡು ಸಾರ್ಥಕರಾಗೋಣ.
ಜೈ ಶ್ರೀರಾಮ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post