ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಪ್ರಾಕೃತಿಕ ಔಷಧಾಲಯಗಳಾದ ಔಷಧಿ ಸಸ್ಯಗಳ ಲಭ್ಯತೆ ವಿಫುಲವಾಗಿದೆ. ಇದರ ಬಗ್ಗೆ ಸಂಶೋಧನೆ ಹಾಗೂ ಗುಣಮಟ್ಟದ ಔಷಧಿಗಳ ಉತ್ಪಾದನೆಗೆ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು #Minister Boseraju ತಿಳಿಸಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ರಾಷ್ಟ್ರ ಮಟ್ಟದ ಪ್ರಾಕೃತಿಕ ಔಷಧಾಲಯದ ಅನ್ವೇಷಣೆ – ಔಷಧಿ ಹಾಗೂ ಸುಗಂಧೀಯ ಸಸ್ಯಗಳ ಸಾಮರ್ಥ್ಯ ಮತ್ತು ಸಂರಕ್ಷಣೇ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Also read: ರಾಜ್ಯದ 14 ಜಿಲ್ಲೆ, 41 ತಾಲ್ಲೂಕು, 1199 ಗ್ರಾಪಂಗಳಲ್ಲಿ ಅಟಲ್ ಭೂಜಲ ರಥಕ್ಕೆ ಚಾಲನೆ | ಏನಿದರ ವಿಶೇಷ?
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ ಮಾತನಾಡಿ, ನಿಸರ್ಗಕ್ಕೆ ಹತ್ತಿರವಾಗಿ ಬದುಕುವುದರಿಂದ ಹೆಚ್ಚು ಆರೋಗ್ಯಕರವಾಗಿರುತ್ತೇವೆ. ನಿಸರ್ಗದಲ್ಲಿ ದೊರಕುವ ಆಹಾರವನ್ನು ಸೇವಿಸುವುದರಿಂದ ಜೀವನಶೈಲಿ ಕಾಯಿಲೆಗಳಿಂದ ದೂರವಿರಬಹುದಾಗಿದೆ. ಮುಂದುವರೆದ ರಾಷ್ಟ್ರಗಳಲ್ಲಿ ಜೀವನಶೈಲಿ ರೋಗಗಳಿಂದ ಬಳಲುವವರ ಸಂಖ್ಯೆ ಅಭಿವೃದ್ದಿ ಹೊಂದದೇ ಇರುವ ರಾಷ್ಟ್ರಗಳಿಗಿಂತಾ ಹೆಚ್ಚು. ಪ್ರೊಸೆಸ್ಡ್ ಫುಡ್ ಬಳಕೆ ಹೆಚ್ಚಾಗಿರುವುದರ ಪರಿಣಾಮ ಇದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ಹೆಚ್ಚು ಆರೋಗ್ಯಕರವಾಗಿರುವುದಕ್ಕೆ ಅವರ ನೈಸರ್ಗಿಕ ಆಹಾರ ಶೈಲಿಯೇ ಪ್ರಮುಖ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ, ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್. ವೆಂಕಟೇಸನ್, ಕೆಸ್ಟೆಪ್ಸ್ ನಿರ್ದೇಶಕರಾದ ಸಾದಾಶಿವ ಪ್ರಭು, ಭಾರತೀಕ ಕೃಷಿ ಅನುಸಂಧಾನ ಪರಿಷತ್ತಿನ ಅಂಗ ಸಂಸ್ಥೆಯಾದ ಔಷಧಿ ಮತ್ತು ಸುಗಂಧೀಯ ಸಸ್ಯಗಳ ಸಂಶೋಧನಾ ಸಂಸ್ಥೆ ಗುಜರಾತ್ನ ನಿರ್ದೇಶಕರಾದ ಡಾ ಮನೀಶ್ ದಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post