ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬ್ರಾಹ್ಮಿನ್ ಆರ್ಗನೈಸೇಷನ್ ಆಫ್ ಇಂಡಿಯಾದ ಶಿವಮೊಗ್ಗ ಜಿಲ್ಲಾ ಸಮಿತಿ ಉದ್ಘಾಟನಾ ಸಮಾರಂಭವನ್ನು ಮಾ.7 ರಂದು ಬೆಳಗ್ಗೆ 11 ಗಂಟೆಗೆ ನಗರದ ಕೋಟೆ ರಸ್ತೆಯಲ್ಲಿರುವ ಶ್ರೀ ಗಾಯತ್ರಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ವೆಂಕಟೇಶ್ ರಾವ್ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ 10.30 ಕ್ಕೆ ಮಹಾಮಂಗಳಾರತಿ ಇರುತ್ತದೆ. 11 ಗಂಟೆಗೆ ತೀರ್ಥಹಳ್ಳಿ ಸಮೀಪದ ಭೀಮನಕಟ್ಟೆ ಅಚ್ಚುತ ಪ್ರೇಕ್ಷಾಚಾರ್ಯರ ಸಂಸ್ಥಾನದ ಶ್ರೀ 1008 ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ದಿವ್ಯ ಸಾನಿಧ್ಯ ವಹಿಸಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಅತಿಥಿಗಳಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಬ್ರಾಹ್ಮಿನ್ ಆರ್ಗನೈಸೇಷನ್ ಆಫ್ ಇಂಡಿಯಾದ ಸಂಸ್ಥಾಪಕ ಅಧ್ಯಕ್ಷ ಸುಖಬೀರ ಶರ್ಮ, ರಾಷ್ಟ್ರೀಯ ಅಧ್ಯಕ್ಷ ರಮೇಶ ಕೀಚಲು, ರಾಜ್ಯಾಧ್ಯಕ್ಷ ರವೀಂದ್ರ ಕುಲಕರ್ಣಿ ಆಗಮಿಸಲಿದ್ದಾರೆ. ಜಿಲ್ಲಾ ಸಮಿತಿ ಅಧ್ಯಕ್ಷ ವೆಂಕಟೇಶ್ ರಾವ್.ಕೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್, ಹೊಯ್ಸಳ ಸೌಹಾರ್ದ ಸಹಕಾರಿ ಅಧ್ಯಕ್ಷ ಎಂ.ಶಂಕರ್, ಸರ್.ಎಂ.ವಿ ಸೊಸೈಟಿ ಅಧ್ಯಕ್ಷ ಡಾ. ಶ್ರೀಧರ್, ವಿಪ್ರ ಟ್ರಸ್ಟ್ ನ ಟ್ರಸ್ಟಿ ಎಸ್.ಜಿ.ಗೋಪಾಲ್, ವಿಪ್ರ ಯುವ ಪರಿಷತ್ ಅಧ್ಯಕ್ಷ ರಾಘವೇಂದ್ರ ಉಡುಪ, ತಾಲ್ಲೂಕು ಬ್ರಾಹ್ಮಣ ಸೇ.ಸಂ. ಅಧ್ಯಕ್ಷ ಸಂತೋಷ್ ಕುಮಾರ್.ಹೆಚ್.ಆರ್, ರಾಮಾನುಜ ಸೌಹಾರ್ದ ಸಹಕಾರಿ ಅಧ್ಯಕ್ಷ ಅಶ್ವಥ.ಬಿ.ಎಸ್, ರಾಜ್ಯ ಘಟಕ ನಿರ್ದೇಶಕ ಛಾಯಾಪತಿ. ಹೆಚ್.ಎನ್, ವಿಪ್ರ ನೌಕರರ ಸಂಘದ ಉಪಾಧ್ಯಕ್ಷ ಅನಂತ. ಜಿ.ಎಸ್ ಆಗಮಿಸಲಿದ್ದಾರೆ ಎಂದರು.
Also read: ವಿಶ್ವಕಂಡ ಬಹುದೊಡ್ಡ ಶಿವಶರಣೆ ಅಕ್ಕಮಹಾದೇವಿ ಜೀವನ ಮೌಲ್ಯ ಆದರ್ಶವಾಗಲಿ | ಡಾ.ಸೋಮಶೇಖರ್
2019-20 ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸಂಘಟನೆಯಾಗಿದೆ. ಬ್ರಾಹ್ಮನ್ ಆರ್ಗನೈಸೇಶನ್ ಆಫ್ ಇಂಡಿಯಾ ಭಗವಾನ್ ಪರಶುರಾಮ ಬ್ರಾಹ್ಮನ್ ಆರ್ಗನೈಸೇಶನ್ ಛಾರಿಟೇಬಲ್ ಟ್ರಸ್ಟ್ (ರಿ) ಅಡಿಯಲ್ಲಿ ದೆಹಲಿಯಲ್ಲಿ ನೋಂದಣಿಯಾಗಿದ್ದು, ದೇಶದಲ್ಲಿ ಸುಮಾರು 15 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ 18 ಜಿಲ್ಲೆಗಳಲ್ಲಿ ಕಾರ್ಯನಿರತವಾಗಿದೆ ಎಂದರು.
ರಾಷ್ಟ್ರಮಟ್ಟದ ಸಂಘಟನೆಯಾದ ಬ್ರಾಹ್ಮಿನ್ ಆರ್ಗನೈಸೇಶನ್ ಆಫ್ ಇಂಡಿಯಾದ ಜಿಲ್ಲಾ ಸಮಿತಿಯು ಶಿವಮೊಗ್ಗದಲ್ಲಿ ಉದ್ಘಾಟನೆಯಾಗುತ್ತಿರುವುದು ಶಿವಮೊಗ್ಗ ಜಿಲ್ಲೆಯ ವಿಪ್ರರಿಗೆ ಹೆಮ್ಮೆಯ ಸಂಗತಿ ಎಂದರು.
ಸುಮಾರು 30 ಜನರ ತಂಡವನ್ನು ನಿರ್ಮಾಣ ಮಾಡಿದ್ದೇವೆ. 7 ಪ್ರತಿನಿಧಿಗಳನ್ನು ಮಾಡಿ ತಾಲ್ಲೂಕು ಘಟಕ ನಿರ್ಮಾಣ ಮಾಡಲಿದ್ದೇವೆ. ಮತ್ತು ಶಿವಮೊಗ್ಗದಲ್ಲಿ ಮಹಿಳಾ ಮತ್ತು ಯುವ ಘಟಕವನ್ನು ಮುಂದಿನ ದಿನಗಳಲ್ಲಿ ರಚಿಸಲಿದ್ದೇವೆ. ಹಿಂದೂ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ಪ್ರಾರಂಭ ಮಾಡಲಾಗಿದ್ದು, ಬ್ರಾಹ್ಮಿನ್ ಆರ್ಗನೈಸೇಶನ್ ಆಫ್ ಇಂಡಿಯಾದ ಹಲವು ಗುರಿ, ಉದ್ದೇಶ ಮತ್ತು ಯೋಜನೆಗಳನ್ನು ಒಳಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಹೆಚ್.ಎನ್. ಛಾಯಾಪತಿ, ಹೆಚ್.ಆರ್. ಸಂತೋಷ್ ಕುಮಾರ್, ಕೆ.ಕೆ. ಯಜ್ಞನಾರಾಯಣ, ಗುರುರಾಜ್ ಅಡಿಗ.ಕೆ, ಎಸ್.ಆರ್. ಸವಿತಾ ರಮೇಶ್, ಎಂ.ಎಸ್. ರವಿ ಪ್ರಕಾಶ್, ಎಸ್.ಎನ್. ಮಂಜುನಾಥ್, ರಾಘವೇಂದ್ರಾಚಾರ್, ಕೆ.ಎಲ್. ಪ್ರಹ್ಲಾದ್, ಕೆ.ವಿ. ಗಣಪತಿ, ಬಾಲಕೃಷ್ಣ ಭಟ್ ಎಸ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post