ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿಶ್ವ ಕಂಡ ಬಹುದೊಡ್ಡ ಶಿವಶರಣೆ ಬದುಕಿನ ಮೌಲ್ಯಗಳನ್ನು ಜೀವನದಲ್ಲಿ ಆದರ್ಶವಾಗಿಟ್ಟುಕೊಂಡು ಸಾಗಿದ ಮಹಾನ್ ಚಿಂತಕಿ ಅಕ್ಕಮಹಾದೇವಿ #Akkamahadevi ಅವರ ಜೀವನ ಮೌಲ್ಯಗಳು ಎಲ್ಲರಿಗೂ ಆದರ್ಶವಾಗಲಿ ಎಂದು ನಿವೃತ್ತ ಐಎಎಸ್ ಅಧಿಕಾರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಬೆಂಗಳೂರು ಅಧ್ಯಕ್ಷರಾದ ಡಾ.ಸಿ. ಸೋಮಶೇಖರ್ ಕರೆ ನೀಡಿದರು.
ಮೈಸೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಶಿಕಾರಿಪುರ #Shikaripura ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಶಿಕಾರಿಪುರ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಶರಣೆ ಮೈತ್ರಾದೇವಿ ಬಿ.ಎಸ್. ಯಡಿಯೂರಪ್ಪ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Also Read>> ಮಾರ್ಚ್ 6 | ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜೆಡಿಎಸ್ ಬೃಹತ್ ಪ್ರತಿಭಟನೆ
ವಿಶ್ವ ಕಂಡ ಬಹುದೊಡ್ಡ ಶಿವಶರಣೆ ಬದುಕಿನ ಮೌಲ್ಯಗಳನ್ನು ಜೀವನದಲ್ಲಿ ಆದರ್ಶವಾಗಿಟ್ಟುಕೊಂಡು ಸಾಗಿದ ಮಹಾನ್ ಚಿಂತಕಿ ಅಕ್ಕಮಹಾದೇವಿ. 12ನೇ ಶತಮಾನದಲ್ಲಿ ಪುರುಷ ಸಮಾಜದ ಅಸಮಾನತೆಯ ವಿರುದ್ಧ ಜನಮಾನಸದಲ್ಲಿ ಆಂದೋಲನವನ್ನು ನಡೆಸಿದ ಅಕ್ಕ ಬದುಕಿದ ಜೀವನವೇ ಒಂದು ಮಹಾನ್ ಪವಾಡ ಎಂದು ಆಶಿಸಿದರು.
ಜೀವನದಲ್ಲಿ ದೈಹಿಕ ತೃಷೆಗಾಗಿ ವ್ಯಾಮೋಹಗೊಳ್ಳದೇ, ಜೀವನದ ಮೌಲ್ಯಗಳೊಂದಿಗೆ ಆದರ್ಶಗಳನ್ನು ಇಟ್ಟುಕೊಂಡು ಬೆಳೆದವರು ಅಕ್ಕ. ಪ್ರಕೃತಿಯೊಂದಿಗೆ ಅನುಸಂಧಾನವನ್ನು ಮಾಡಿಕೊಳ್ಳುತ್ತಾ, ತನ್ನ ವಚನದ ಮೂಲಕ ಅತ್ಯಂತ ಕೆಳಮಟ್ಟದ ಜನರ ಹೃದಯವನ್ನು ಮುಟ್ಟುವ ಕೆಲಸ ಮಾಡಿದಳು. ಸ್ಥಿತ ಸಂವೇದನೆಯನ್ನು ಮೊಟ್ಟಮೊದಲು 12ನೇ ಶತಮಾನದಲ್ಲಿ ಹುಟ್ಟು ಹಾಕಿದರೂ 21ನೇ ಶತಮಾನದಲ್ಲಿಂದು ಹೆಮ್ಮರವಾಗಿ ಬೆಳವಣಿಗೆಯಾಗಲು ನಾಂದಿ ಹಾಡಿದವರೇ ಅಕ್ಕಮಹಾದೇವಿ. ತನ್ನ ದೇಹದಿಂದ ಇತರರಿಗೆ ನೋವಾದೀತು ಎಂದು ತನ್ನ ದೇಹವನ್ನು ಕೇಶದಿಂದ ಮುಚ್ಚಿಕೊಳ್ಳುತ್ತಾ ಅನುಭವ ಮಂಟಪದತ್ತ ಸಾಗಿದ ಮಹಾನ್ ತ್ಯಾಗಿ ಐಹಿಕ ಸುಖ-ಬೋಗದಿಂದ ಮುಕ್ತಿಯಾಗಿ, ಚನ್ನಮಲ್ಲಿಕಾರ್ಜುನನೇ ಎನ್ನ ಪತಿ, ದೈವ ಎಂದು ಸಾರುತ್ತಾ ಕೊನೆಗೂ ಅದರಂತೆ ಬದುಕಿದ ವೈರಾಗಿ. ಅಕ್ಕ ಈ ಜಗತ್ತಿಗೆ ಒಂದು ಅಚ್ಚರಿ, ಅದ್ಭುತ, ಆದರ್ಶಗಳನ್ನು ಇಟ್ಟುಕೊಂಡು ನಡೆ-ನುಡಿಗಳಲ್ಲಿ ತಾನೇ ಮುಳುಗಿ ನಡೆದುಕೊಂಡವರು. ನಡೆ-ನುಡಿ, ತನು-ಮನ, ಭಾವ-ಮತಗಳಿಂದ ದೂರವಿದ್ದು ಪಂಚೇಅದ್ರೀಯಗಳ ನಿಗ್ರಹದೊಂದಿಗೆ ಶರಣ ಸತಿ ಲಿಂಗ ಪತಿ’ ಎಂಬ ಮಾತುಗಳಿಗೆ ಸಾಕ್ಷಿಯಾಗಿ ಬದುಕಿ ತೋರಿಸಿದ ಮಹಾನ್ ಚಿಂತಕಿ ಎಂದರು.
ತನು, ಮನ, ಭಾವ ಧ್ವನಿ, ಶೃತಿ ಶುದ್ಧಿಯಾಗಿ ಬದುಕಿದ ಅಕ್ಕ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಪ್ರಪಂಚಕ್ಕೆ ಒಂದು ಹೆಣ್ಣಿಗಿರುವ ಸಮಾನ ಅವಕಾಶಗಳನ್ನು ಪ್ರಚುರಪಡಿಸಿದ ಮಹಾನ್ ಚಿಂತಕಿ. ತನ್ನ ಬದುಕನ್ನೇ ಒಂದು ದಾರಿದೀಪಯಾಗಿಸಿಕೊಂಡು ಬೆಳೆದು ಸಮಾಜಕ್ಕೆ ಆದರ್ಶ ಜೀವನಕ್ಕೆ ಮುನ್ನುಡಿ ಬರೆದವರು ಅಕ್ಕ ನಮ್ಮ ಶಿಕಾರಿಪುರದವಳು ಎಂದು ಹೇಳುವುದೇ ನಮಗೆ ಗರ್ವ, ಶಿಕಾರಿಪುರ ಇಂತಹ ಅನೇಕ ವಚನಕಾರರನ್ನು ಜಗತ್ತಿಗೆ ನೀಡಿ ಅನೇಕರ ಜೀವನಾದರ್ಶಗಳಿಗೆ ಮುನ್ನುಡಿ ಬರೆದದ್ದು ನಮ್ಮ ಶಿಕಾರಿಪುರದವರು, ಜೀವನದಲ್ಲಿ ಗಳಿಸಿದ ಸಂಪಾದನೆಯಲ್ಲಿ ಒಂದು ಭಾಗವನ್ನು ಸಮಾಜಕ್ಕೆ ನೀಡುವ ಮನೋಭಾವವನ್ನು ರೂಢಿಸಿಕೊಳ್ಳೋಣ ನಾವು ಮುಂದಿನ ದಿನಗಳಲ್ಲಿ ಇಂತಹ ಚಿಂತನೆಗಳತ್ತ ಆಲೋಚನೆ ಮಾಡೋಣ ಎಂದು ಆಶಿಸಿದರು.
ಬೆಂಗಳೂರು ದಿಶಾ ಸಮಿತಿ ಸದಸ್ಯರಾದ ಕೆ.ಎಸ್. ಗುರುಮೂರ್ತಿ, ಶಿಕಾರಿಪುರ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿಗಳೂ ಆದ ಡಾ. ಜಿ.ಎಸ್. ಶಿವಕುಮಾರ್, ಮೈಸೂರು ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ್ ಘಾಂಜಿ ಉಪಸ್ಥಿತರಿದ್ದರು.
Also Read>> ಮಾರ್ಷಲ್ ಆರ್ಟ್ಸ್ | ಪ್ರಣತಿಗೆ ರಾಷ್ಟ್ರಮಟ್ಟದ ಅತಿ ಕಿರಿಯ ವಯಸ್ಸಿನ ಪದಕ ವಿಜೇತೆ ಹೆಗ್ಗಳಿಕೆ
ಶಿವಮೊಗ್ಗ ವಚನ ಮಂಟಪ ಸಂಚಾಲಕರಾದ ಬಸವನಗೌಡ ಮಾಳಗಿ ಅವರು ದತ್ತಿ ದಾನಿಗಳ ಪರಿಚಯ ಮಾಡಿಕೊಟ್ಟರು. ಶರಣ ಸಾಹಿತ್ಯ ಪರಿಷತ್ ಶಿವಮೊಗ್ಗ ಅಧ್ಯಕ್ಷರಾದ ಎಚ್.ಎನ್. ಮಹಾರುದ್ರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಷ್ಮಾ ದೀಕ್ಷಿತ್ ಮತ್ತು ತಂಡದವರಿAದ ವಚನ ನೃತ್ಯವನ್ನು ಏರ್ಪಡಿಸಲಾಗಿತ್ತು. ಪ್ರಶಿP್ಷÀಣಾರ್ಥಿಗಳಾದ ಎಸ್. ಕಲ್ಪನಾ, ರಕ್ಷಿತಾರು ಅಕ್ಕನ ವಚನಗಳನ್ನು ಹಾಡುವುದರೊಂದಿಗೆ ತಾತ್ಪರ್ಯವನ್ನು ಅರ್ಥೈಸಿದರು.
ಡಿ. ಪ್ರೇಕ್ಷಾ ಹಾಗೂ ತಂಡದವರು ವಚನ ಗಾಯನದ ಪ್ರಾರ್ಥನೆ ಮಾಡಿದರು. ಶರಣ ಸಾಹಿತ್ಯ ಪರಿಷತ್ ಶಿಕಾರಿಪುರ ಅಧ್ಯಕ್ಷ ಎಂ.ಕೆ. ಶಶಿಧರ ಸ್ವಾಮಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಸುಭಾಷ್ ಚಂದ್ರ ಸ್ಥಾನಿಕ್ ವಂದನಾರ್ಪಣೆ ಮಾಡಿದರು. ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆರ್. ಕೋಟೋಜಿರಾವ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post