ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ #PM Awas Yojane ರಾಜ್ಯದಲ್ಲಿ ಉಳಿದಿರುವ 2 ಲಕ್ಷ ಮನೆಗಳ ನಿರ್ಮಾಣ ಯಾವಾಗ? ಎಂದು ಸಚಿವ ಜಮೀರ್ ಅಹಮದ್ ಗೆ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ #MLC Dr. Dhananjaya Sarji ಪ್ರಶ್ನೆ ಕೇಳಿದರು.
ಬುಧವಾರ ವಿಧಾನಸೌಧದಲ್ಲಿ ನಡೆದ 155 ನೇ ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಅವರು, ನಿವೇಶನ ರಹಿತರಿಗೆ ಮನೆಗಳ ನಿರ್ಮಾಣ ಮಾಡಿಕೊಡುವ ಅತ್ಯತ್ತಮ ಯೋಜನೆಯಾಗಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದಲ್ಲಿ ನಿರ್ಮಾಣವಾಗದೆ ಬಾಕಿ ಉಳಿದಿರುವ 2 ಲಕ್ಷ ಮನೆಗಳನ್ನು ರಾಜ್ಯ ಸರ್ಕಾರ ಯಾವಾಗ ಪೂರ್ಣಗೊಳಿಸಿಕೊಡುತ್ತದೆ ಎಂದು ವಕ್ಭ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಜಮೀರ್ ಅಹಮದ್ #Minister Zameer Ahmad ಅವರಿಗೆ ಪ್ರಶ್ನೆ ಕೇಳಿದರು.
Also read: ಗಾಯಕಿ ಶಿವಶ್ರೀ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಸಂಸದ ತೇಜಸ್ವಿ ಸೂರ್ಯ
2015ರಲ್ಲಿ ಪ್ರಾರಂಭವಾದ ಪ್ರಧಾನಮಂತ್ರಿ ಆವಾಸ್ ಯೋಜನೆ 1 ಕೋಟಿ 18 ಲಕ್ಷ ಮನೆಗಳನ್ನು ಡಿಸೇಂಬರ್ 2025 ಒಳಗೆ ನಗರ ಭಾಗದ ಮನೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸೂಚಿಸಲಾಗಿತ್ತು. ಇನ್ನು ಕೇವಲ 10 ತಿಂಗಳುಗಳ ಮಾತ್ರ ಉಳಿದಿದ್ದು ಅದರ ಒಳಗೆ ಮನೆ ನಿರ್ಮಾಣ ಸರ್ಕಾರ ಮಾಡಿಕೊಡುತ್ತದಯೇ ಹಾಗೂ ಪಿ.ಎಂ.ವೈ ನ ಅಧಿಕೃತ ಜಾಲತಾಣದಲ್ಲಿ 10 ಫೆಬ್ರವರಿ 2025ರಲ್ಲಿ ಅಪ್ಡೇಟ್ ಆಗಿರುವ ಪ್ರಕಾರ ನೋಡಿದರೆ ಒಟ್ಟು ಮಂಜೂರಾಗಿರುವ ಮನೆಗಳು 6 ಲಕ್ಷದ 38 ಸಾವಿರದ 121 ಅಂತ ಇದೆ.ಆದರೆ ರಾಜ್ಯ ಸರ್ಕಾರದ ದಾಖಲೆಗಳಲ್ಲಿ 4ಲಕ್ಷದ 54 ಸಾವಿರ ಎಂದು ನಮೂದಾಗಿದೆ. ನಿರ್ಮಾಣ ಹಂತದ ಮನೆಗಳು 5 ಲಕ್ಷದ 12 ಸಾವಿರ 977, ಪೂರ್ಣವಾಗಿರುವುದು 3 ಲಕ್ಷದ 86ಸಾವಿರದ 533 ಅಂತ ಜಾಲತಾಣದಲ್ಲಿ ಇದ್ದರೆ, ರಾಜ್ಯ ಸರ್ಕಾರದ ದಾಖಲೆಗಳಲ್ಲಿ ಪೂರ್ಣವಾಗಿರುವ ಮನೆ ಕೇವಲ 2 ಲಕ್ಷದ 55 ಸಾವಿರದ 711 ಇದೆ ಹಾಗಾಗಿ ಅಂಕಿ ಅಂಶಗಳ ವ್ಯತ್ಯಾಸ ಕೂಡ ಇದೆ.
ಸಚಿವರು ಕೊಟ್ಟಿರುವ ಮಾಹಿತಿ ಪ್ರಕಾರ ಡಿಸೆಂಬರ್ 2025 ಕ್ಕೆ ಮನೆಗಳು ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.10 ತಿಂಗಳಲ್ಲಿ ಇನ್ನು 2 ಲಕ್ಷ ಮನೆಗಳ ನಿರ್ಮಾಣ ಹೇಗೆ ಪೂರ್ಣವಾಗುತ್ತದೆ. ಈ ಮನೆಗಳ ನಿರ್ಮಾಣಕ್ಕೆ ಇನ್ನು ಯಾವ ಯೋಜನೆಗಳನ್ನು ರೂಪಿಸಿದ್ದೀರಿ ಎಂದು ಸಚಿವ ಜಮೀರ್ ಅಹಮದ್ ಅವರಿಗೆ ಉತ್ತರ ಕೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post