ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆ.ಇ. ಕಾಂತೇಶ್ #K E Kantesh ಗೆಳೆಯರ ಬಳಗದ ವತಿಯಿಂದ ಕೆ.ಇ. ಕಾಂತೇಶ್ ಅವರ 45ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮಾ. 27ರಂದು ಬೆಳಗ್ಗೆ 8 ಗಂಟೆಯಿಂದ ಶುಭಮಂಗಳ ಸಮುದಾಯ ಕಲ್ಯಾಣ ಮಂಟಪದಲ್ಲಿ ಆಶೀರ್ವಾದ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಪ್ರಮುಖರಾದ ಇ. ವಿಶ್ವಾಸ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿವಿಧ ಮಠಾಧೀಶರ ಪಾದಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಹಿಂದೂ ಧರ್ಮದ ವಿವಿಧ ಸಮಾಜದ 50 ವರ್ಷ ವೈವಾಹಿಕ ಜೀವನ ಪೂರೈಸಿದ 90 ದಂಪತಿಗಳಿಂದ ಶುಭ ಹಾರೈಕೆ ಕಾರ್ಯಕ್ರಮ ಇರುತ್ತದೆ ಎಂದರು.

Also read: ಮನೆಕಟ್ಟಿಕೊಳ್ಳಲು ಅವಕಾಶ ನೀಡದ ಪಿಡಿಓ ವಿರುದ್ಧ ಗ್ರಾಪಂ ಸದಸ್ಯನ ಏಕಾಂಗಿ ಪ್ರತಿಭಟನೆ
ಕಾಂತೇಶ್ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಕ್ರೀಡೆಗಳನ್ನು ಯುವೋತ್ಸವ ಕಾರ್ಯಕ್ರಮ ಅಡಿಯಲ್ಲಿ ಆಯೋಜಿಸಲಾಗಿದ್ದು, ಮಾ. 21 ಮತ್ತು 22 ರಂದು ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಹಾಗೂ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಮಾ. 23, 24ರಂದು ನಗರದ ಎನ್‌ಇಎಸ್ ಕ್ರೀಡಾಂಗಣದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಮಾ. 23ರಂದು ಗುಂಡಪ್ಪ ಶೆಡ್ ಮಲ್ಲೇಶ್ವರ ನಗರದಲ್ಲಿ ರಾವ್ ಸ್ಪೋರ್ಟ್ಸ್ ಅರೇನಾದಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಲಿಂಗಶಾಸ್ತ್ರಿ, ಶಶಿ ಕೆ.ಎಸ್. ರಂಗನಾಥ್, ಶ್ರೀನಾಥ್ ಎಸ್.ಆರ್., ರಮೇಶ್ ಸೋಗಾನೆ, ಜಾಧವ್, ಗಿರೀಶ್, ಅ.ಮ. ಪ್ರಕಾಶ್, ಮೋಹನ್, ಸೋಮಶೇಖರ್, ಮಠಪತಿ ಕೆ.ಜೆ., ವಿನಯ್, ರವೀಂದ್ರ ಕೆ.ಆರ್. ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post