ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಂದು ‘ಮುಂಗಾರು ಮಳೆ’ #Mungaru Male ಇಂದು ‘ಮನದ ಕಡಲು’. #Manada Kadalu ಇ. ಕೃಷ್ಣಪ್ಪ, ಜಿ. ಗಂಗಾಧರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಮನದ ಕಡಲು’ ಮಾ. 28ರಂದು ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಯೋಗರಾಜ್ ಭಟ್ #Director Yograj Bhat ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮನದ ಕಡಲು ಚಿತ್ರದ ಕಲ್ಪನೆ ಬಹಳ ವರ್ಷಗಳ ತನಕ ನನ್ನ ಮನದಲ್ಲಿತ್ತು. ಚಿತ್ರಕ್ಕೆ ಸರಿ ಹೊಂದುವ ಪಾತ್ರಗಳ ಹುಡುಕಾಟದಲ್ಲಿರುವಾಗಲೇ ಈ ಚಿತ್ರದ ನಟ ಸುಮುಖ್ ಪರಿಚಯವಾದರು. ತಕ್ಷಣವೇ ನಿರ್ಮಾಪಕರ ಗಮನಕ್ಕೆ ತಂದೆ. ಅವರು ಒಪ್ಪಿಗೆಯನ್ನೂ ಕೊಟ್ಟರು. ಚಿತ್ರೀಕರಣ ಆರಂಭವಾಯಿತು ಎಂದರು.

Also read: ಮಾರ್ಚ್ 18-21 | ವಿದ್ಯಾರಣ್ಯಪುರದ ಅಲಸೂರಮ್ಮ ರಾಯರ ಮಠದಲ್ಲಿ ಟಿಟಿಡಿ ಕಾರ್ಯಕ್ರಮ
ಈಗ 18 ವರ್ಷಗಳ ಹಿಂದೆ ಮುಂಗಾರು ಮಳೆ ಬಂದಾಗಲೂ ಕೂಡ ಇದೇ ಅನುಭವವಿತ್ತು. ಮನದ ಕಡಲು ಕೂಡ ಮುಂಗಾರು ಮಳೆಗಿಂತ ಹೆಚ್ಚು ಯಶಸ್ವಿಯಾಗುತ್ತದೆ. ಇದೊಂದು ಮೈಲಿಗಲ್ಲಿನ ಚಿತ್ರವಾಗುತ್ತದೆ. 6 ಹಾಡುಗಳು ಚಿತ್ರದಲ್ಲಿವೆ. ಮೂವರು ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನಾಯಕ ನಟ ಸುಮುಖ, ನಟಿ ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಟಿ ರಾಶಿಕಾ ಶೆಟ್ಟಿ, ಚಿತ್ರದ ಪ್ರಮೋಟರ್ ಶ್ರೀಧರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post