ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಾಕಿಸ್ತಾನವು #Pakistan ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡು ತಕ್ಷಣ ಭಾರತಕ್ಕೆ ಶರಣಾಗತಿಯಾಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #K S Eshwarappa ಆಗ್ರಹಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಪಾಕಿಸ್ತಾನ ಉಗ್ರವಾದಿಗಳನ್ನು ಬೆಳೆಸುತ್ತಿದೆ ಎಂದು ನಾವು ಹೇಳಿಕೊಂಡು ಬರುತ್ತಿದ್ದೆವು. ಅದಕ್ಕೆ ಪೂರಕವಾಗಿ ಶುಕ್ರವಾರ ಪಾಕಿಸ್ತಾನದ ರಕ್ಷಣಾ ಸಚಿವರೇ ತಾವು 30 ವರ್ಷಗಳಿಂದ ಉಗ್ರಗಾಮಿಗಳನ್ನು ಬೆಳೆಸಿಕೊಂಡು ಬರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈಗ ನಮ್ಮ ತಪ್ಪಿನ ಅರಿವಾಗಿದೆ ಎಂದು ಹೇಳಿಕೊಂಡಿದ್ದಾರೆ. ಪಾಕಿಸ್ತಾನಕ್ಕೆ ಅವರೇ ಬೆಳೆಸಿದ ಉಗ್ರಗಾಮಿಗಳೇ ಮಗ್ಗುಲ ಮುಳ್ಳಾಗಿದ್ದಾರೆ ಎಂದರು.
ಅಖಂಡ ಭಾರತವನ್ನು ತುಂಡಾಗಿಸುವ ಮೂಲಕ ದೇಹದಲ್ಲಿ ಛಿದ್ರ ಮಾಡಿದರೂ ಪಾಕಿಸ್ತಾನಕ್ಕೆ ಸಮಾಧಾನವಾಗಿಲ್ಲ. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪಾಕ್ ಉಗ್ರರೂ ಬಿಲದಲ್ಲಿದ್ದರೂ ಹುಡುಕಿ ಹೊರತಂದು ನಾಶ ಮಾಡುವ ಪಣತೊಟ್ಟಿದ್ದು, ಈಗಾಗಲೇ ಹುಡುಕಿ ಹುಡುಕಿ ಹೊಡೆಯುತ್ತಿದ್ದಾರೆ. ಪಾಕಿಸ್ತಾನ ತಪ್ಪೊಪ್ಪಿಕೊಳ್ಳದಿದ್ದರೆ ಸರ್ವನಾಶವಾಗುವುದು ಖಚಿತ. ಯುದ್ಧ ನಡೆದರೆ ಭಾರತ ಪಾಕಿಸ್ತಾನವನ್ನು ಹೊಸಕಿ ಹಾಕಲಿದೆ. ಇಡೀ ವಿಶ್ವವೇ ಭಾರತಕ್ಕೆ ಬೆಂಬಲ ನೀಡಿದೆ ಎಂದರು.
ಮೋದಿ ಅವರ ತಾಳ್ಮೆ, ಸಿದ್ಧಾಂತವನ್ನು ಮೆಚ್ಚಲೇ ಬೇಕು. ಚೀನಾ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ಭಾರತದ ಪರವಾಗಿ ನಿಂತಿವೆ ಎಂದು ತಿಳಿಸಿದರು.
ಸಿಂಧೂ ನದಿ ಬಗ್ಗೆ ತಗಾದೆ ತೆಗೆಯುತ್ತಿರುವ ಪಾಕಿಸ್ತಾನ ಒಂದು ಹನಿ ನೀರನ್ನೂ ಪಡೆದುಕೊಳ್ಳುವಲ್ಲಿ ಇನ್ನಿಲ್ಲದ ಕಷ್ಟಪಡಬೇಕಾಗಿದೆ ಎಂದ ಅವರು ಪಾಕಿಸ್ತಾನಿಗಳು ಇದೇ ರೀತಿ ಮುಂದುವರೆದರೆ ಜೀವಂತ ಶವವಾಗಿ ಸಾಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾಶ್ಮೀರದಿಂದ ಕನ್ನಡಿಗರನ್ನು ರಾಜ್ಯಕ್ಕೆ ಕರೆತಂದಿದ್ದಕ್ಕೆ ನಾನು ಇಲ್ಲಿದಂಲೇ ಅವರ ಜೊತೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದೆ. ಆದರೆ, ಅಲ್ಲಿಂದ ವಾಪಸ್ ಬಂದ ನಂತರ ಲಾಡ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ನೀ ಯಾವನಯ್ಯಾ ಮೋದಿ ರಾಜೀನಾಮೆ ಕೇಳಲಿಕ್ಕೆ ಎನ್ನುವುದರ ಮೂಲಕ ಲಾಡ್ ವಿರುದ್ಧ ಹರಿಹಾಯ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















