ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಸವೇಶ್ವರನಗರದ ನಿವಾಸಿ ವಕೀಲ ಡಿ.ಜಿ. ಮೋಹನ್ ಮತ್ತು ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಎ ಎಸ್. ವತ್ಸಲಾ ಅವರ ಪುತ್ರಿ ಮೇಘನಾ ಯುಪಿಎಸ್ಸಿ ಪರೀಕ್ಷೆಯಲ್ಲಿ 421ನೇ ರ್ಯಾಂಕ್ ಗಳಿಸಿ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ ಇವರಿಗೆ ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ H.C. ಯೋಗೇಶ್ ಅವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡ ಚೇತನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್, NSUI ಜಿಲ್ಲಾಧ್ಯಕ್ಷ ವಿಜಯ, ಕಾರ್ಯಧ್ಯಕ್ಷ ಕಾಟಿಕೆರೆ ರವಿ, ಮಧುಸೂದನ್, ಬಾಲಾಜಿ, ಗೌತಮ್, ಗಿರೀಶ್, ಜೀವನ್, ಸುಭಾನ್, ತೌಫಿಕ್, ಹರೀಶ್, ಕುಬೇರ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post